ಕೇರಳ (ವಿಶ್ವ ಕನ್ನಡಿಗ ನ್ಯೂಸ್) : ವರ್ಕಳದಲ್ಲಿ ಯುವಕನಿಗೆ ಥಳಿಸಿ ವಿವಸ್ತ್ರಗೊಳಿಸಿದ ಗೆಳತಿಯನ್ನು ಬಂಧಿಸಲಾಗಿದೆ. ಚೆರುನ್ನಿಯೂರು ನಿವಾಸಿ ಲಕ್ಷ್ಮೀಪ್ರಿಯಾ ಬಂಧಿತ ಆರೋಪಿ. ಯುವಕನನ್ನು ಸಂಬಂಧದಿಂದ ಹಿಂದೆ ಸರಿಯುವಂತೆ ಮಾಡಲು ತಂಡವೊಂದಕ್ಕೆ ಲಕ್ಷ್ಮೀಪ್ರಿಯಾ ಕೊಟೇಶನ್ ನೀಡಿದ್ದರು ಎನ್ನಲಾಗಿದೆ. ಯುವಕನ ನಗ್ನ ದೃಶ್ಯಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಲಾಗಿದೆ. ಪ್ರಕರಣದಲ್ಲಿ ಒಟ್ಟು 8 ಮಂದಿ ಆರೋಪಿಗಳಿದ್ದಾರೆ. ಆರೋಪಿ ಎರ್ನಾಕುಲಂ ಮೂಲದ ಅಮಲ್ ನನ್ನು ಈ ಮೊದಲು ಬಂಧಿಸಲಾಗಿತ್ತು.
ಕೃತ್ಯಕ್ಕೆ ಕೊಟೇಶನ್ ನೀಡಿದ್ದ ಲಕ್ಷ್ಮಿ ಪ್ರಿಯಾ, ಯುವಕನನ್ನು ವಿವಸ್ತ್ರಗೊಳಿಸಿ ಥಳಿಸುವ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದರು. ತಿರುವನಂತಪುರಂನ ಕಜಕೂಟಂ ಪ್ರದೇಶದಿಂದ ಅವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಈ ಪ್ರಕರಣದ ಕೆಲವು ಆರೋಪಿಗಳು ವರ್ಕಳ ಮೂಲದ ಡ್ರಗ್ಸ್ ಗ್ಯಾಂಗ್ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿಯೂ ಆರೂರು ಪೊಲೀಸರಿಗೆ ಲಭಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.