ದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : 2001ರಲ್ಲಿ ಮುಸ್ಲಿಂ ಲೀಗ್ ಯುಡಿಎಫ್ ತೊರೆಯಲು ಆಲೋಚಿಸಿತ್ತು ಎಂದು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್ನಲ್ಲಿನ ಗುಂಪು ಸಮರದಿಂದ ಬೇಸತ್ತು ಲೀಗ್ ಯುಡಿಎಫ್ ತೊರೆಯಲು ಮುಂದಾಗಿತ್ತು. ಎಲ್ಡಿಎಫ್ಗೆ ಹೋಗುವ ಕ್ರಮವಾಗಿತ್ತು. ನಾನು ಪಾಣಕ್ಕಾಡ್ನಲ್ಲಿ ಯುಡಿಎಫ್ ನಾಯಕರೊಂದಿಗೆ ನಡೆಸಿದ ಚರ್ಚೆಯ ನಂತರ ಲೀಗ್ ಯುಡಿಎಫ್ನೊಂದಿಗೆ ಮುಂದುವರೆಯಿತು ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಆಜಾದ್ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ಲೀಗ್ ಯುಡಿಎಫ್ ತೊರೆಯಲು ಸಿದ್ಧವಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ. ಗುಲಾಂ ನಬಿ ಹೇಳುವಂತೆ, ಬೆಂಗಳೂರಿನಲ್ಲಿ ಸೋನಿಯಾ ಗಾಂಧಿಯವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾಗ, ಕೇರಳದ ಕಾರ್ಯಕರ್ತರೊಬ್ಬರು ಕರೆ ಮಾಡಿದರು. ಎಲ್ಡಿಎಫ್ ಆ ದಿನವೇ ಲೀಗ್ನೊಂದಿಗೆ ಮೈತ್ರಿಯನ್ನು ಘೋಷಿಸಲಿದೆ ಎಂದು ವರದಿಯಾಗಿತ್ತು.
ಈ ಬಗ್ಗೆಸುಳಿವು ಸಿಕ್ಕಿದ ಕೂಡಲೇ ನಾನು ಸೋನಿಯಾ ಗಾಂಧಿ ಅವರ ಜತೆ ದೆಹಲಿಗೆ ಬರುವುದಿಲ್ಲ ಎಂದು ಹೇಳಿ ಕೋಝಿಕ್ಕೋಡ್ ಗೆ ತೆರಳಿದೆ. ಮುಂದಿನ ವಿಮಾನದಲ್ಲಿ ಕೋಝಿಕ್ಕೋಡ್ ತಲುಪಿ ಅಲ್ಲಿಂದ ಪಾಣಕ್ಕಾಡ್ ಗೆ ಹೋದೆ. ಪಾಣಕ್ಕಾಡ್ ಶಿಹಾಬ್ ತಂಗಳ್ ಅವರು ನನ್ನನ್ನು ನೋಡಿ ಗಾಬರಿಯಾದರು.
ಊಟದ ಸಮಯದಲ್ಲಿ ತಂಗಳ್ ಅವರೊಂದಿಗೆ ರಾಜಕೀಯ ಮಾತನಾಡಿದೆ. ಕೆ ಕರುಣಾಕರನ್ ಮತ್ತು ಎಕೆ ಆಂಟನಿ ಅವರೊಂದಿಗಿನ ಗುಂಪು ಸಮರದಿಂದ ಬೇಸತ್ತಿದ್ದೇವೆ ಎಂದು ಅವರು ಹೇಳಿದರು. ಸಮಸ್ಯೆ ಪರಿಹಾರಕ್ಕೆ ಮುಂದಾಗುವುದಾಗಿ ಭರವಸೆ ನೀಡಿದೆ. ಬಳಿಕ ಮೈತ್ರಿ ಗಟ್ಟಿಯಾಗಿದೆ ಎಂದು ಗುಲಾಮ್ ನಬಿ ಆಜಾದ್ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.