ಅಹಮದಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ಗುಜರಾತಿನ ರಾಧನ್ಪುರದಲ್ಲಿ ಚಾಲಕನೊಬ್ಬರು ಬಸ್ಸಿನಲ್ಲಿರುವ ಪ್ರಯಾಣಿಕರಿಗಾಗಿ ತನ್ನ ಎದೆನೋವನ್ನೇ ಮರೆತು ಬಸ್ ಚಲಾಯಿಸಿಕೊಂಡು ಹೋಗಿ ಡಿಪೋಗೆ ಬಸ್ ತಲುಪಿಸಿದ ಬಳಿಕ ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ.
ಭಾನುವಾರ ರಾತ್ರಿ 8.30 ರ ಸುಮಾರಿಗೆ ಸೋಮನಾಥದಿಂದ ಹೊರಟು ಬೆಳಗ್ಗೆ 7:05 ಕ್ಕೆ ರಾಧನ್ಪುರಕ್ಕೆ ತಲುಪಬೇಕಿದ್ದ ಗುಜರಾತ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಚಾಲಕನಾಗಿರುವ ಭರ್ಮಲ್ ಅಹಿರ್ ಪಯಣದ ವೇಳೆ ಚಹಾಕ್ಕಾಗಿ ಬಸ್ಸನ್ನು ನಿಲ್ಲಿಸಿದ್ದಾರೆ. ಪಯಣ ಮತ್ತೆ ಆರಂಭವಾಗುವ ವೇಳೆ ಕಂಡಕ್ಟರ್ ಬಳಿ ಚಾಲಕ ಅಹಿರ್ ತನಗೆ ಎದೆನೋವು ಆಗುತ್ತಿದೆ. ಆಸ್ಪತ್ರೆಗೆ ಹೋಗಬೇಕು ಇಲ್ಲದಿದ್ರೆ ತಾನು ಸಾಯುತ್ತೇನೆ ಎಂದಿದ್ದಾರೆ.
ಆದರೆ ಇದನ್ನು ಹೇಳಿದ ಬಳಿಕವೂ ಅಹಿರ್ ತನ್ನ ಪ್ರಯಣಿಕರನ್ನು ರಸ್ತೆ ನಿಲ್ಲಿಸಬಾರದೆಂದು ಹೇಳಿ ತನ್ನ ಡಿಪೋ ಬರುವವರೆಗೆ ಬಸ್ ಓಡಿಸಿದ್ದಾರೆ. ಯಾವಾಗ ಬಸ್ ಡಿಪೋಗೆ ಬಂದು ನಿಂತಿತ್ತೋ ಆ ಕ್ಷಣದಲ್ಲೇ ಚಾಲಕ ಅಹಿರ್ ಸೀಟ್ ನಲ್ಲೇ ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಅವರು ಆದಾಗಲೇ ಹೃದಯಾಘಾತದಿಂದ ಮೃತಪಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಂಡಕ್ಟರ್ ಚಹಾ ವಿರಾಮದ ಬಳಿಕ ಪಯಣ ಮತ್ತೆ ಆರಂಭವಾದಾಗ ನನ್ನ ಕೈ ಹಿಡಿದು ಎದೆನೋವು ಆಗುತ್ತಿದೆ. ಆಸ್ಪತ್ರೆಗೆ ಹೋಗಬೇಕು ಇಲ್ಲದಿದ್ರೆ ಸಾಯುತ್ತೇನೆ ಎಂದಿದ್ದರು. ಆದರೂ ಪ್ರಯಾಣಿಕರನ್ನು ದಾರಿ ಮಧ್ಯ ಬಿಟ್ಟು ಹೋಗಲು ಇಷ್ಟವಿಲ್ಲವೆಂದು ಎದೆನೋವನ್ನು ತಡೆದಿಟ್ಟುಕೊಂಡೇ ಬಸ್ ಚಲಾಯಿಸಿಕೊಂಡು ಬಂದಿದ್ದಾರೆ. ಅವರು ನೋವನ್ನು ನಿರ್ಲಕ್ಷ್ಯ ಮಾಡದಿದ್ದರೆ ಅವರನ್ನು ಉಳಿಸಬಹುದಿತ್ತು ಎಂದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.