ಪಾಟ್ನಾ (ವಿಶ್ವ ಕನ್ನಡಿಗ ನ್ಯೂಸ್) : ಬಿಹಾರದ ಪಾಟ್ನಾ ಜಿಲ್ಲೆಯ ಕೌರಿಯಾ ಪಂಚಾಯ್ತಿಯ ಬಿಹ್ತಾ ಮಿಡ್ಲ್ ಸ್ಕೂಲ್ ನ ಪ್ರಾಂಶುಪಾಲರು ಮತ್ತು ಶಿಕ್ಷಕಿ ವಿದ್ಯಾರ್ಥಿಗಳ ಎದುರೇ ಹೊಡೆದಾಡಿಕೊಂಡ ಘಟನೆ ನಡೆದಿದೆ. ಪ್ರಿನ್ಸಿಪಾಲ್ ಮತ್ತು ಶಿಕ್ಷಕಿ ನಡುವೆ ಕ್ಲಾಸ್ ರೂಂನಲ್ಲಿ ವಾಗ್ವಾದ ಆರಂಭಗೊಂಡಿದ್ದು, ನಂತರದಲ್ಲಿ ಶಾಲೆಯ ಆವರಣದ ಹೊರಭಾಗದಲ್ಲಿ ಮಾರಾಮಾರಿ ನಡೆದಿದೆ.
ಮಿಡ್ಲ್ ಸ್ಕೂಲ್ ಪ್ರಿನ್ಸಿಪಾಲ್ ಕಾಂತಿ ಕುಮಾರಿ ಹಾಗೂ ಶಿಕ್ಷಕಿ ಅನಿತಾ ಕುಮಾರಿ ನಡುವೆ ವೈಯಕ್ತಿಕ ವಿಚಾರದಲ್ಲಿ ಜಗಳ ಆರಂಭವಾಗಿತ್ತು ಎಂದು ಹೇಳಲಾಗುತ್ತದೆ. ನೆಲದಲ್ಲಿ ಉರುಳಾಡಿ , ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ದೃಶ್ಯ ವೈರಲ್ ಆಗಿದೆ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.