ಬಂಟ್ವಾಳ (www.vknews.in) : ತಾಲೂಕಿನ ಬಿ.ಕಸಬಾ ಗ್ರಾಮದ ಲೆಕ್ಕಸಿರಿ ಪಾದೆ ನಿವಾಸಿ ದಿ.ರಮೇಶ್ ಸಾಲಿಯಾನ್ ಅವರ ಪುತ್ರಿ ಕು. ನೇಹಾ ಅವರು ನಾಪತ್ತೆಯಾಗಿದ್ದರು. ಅವರು ಬೆಂಗಳೂರಿಗೆ ಹೋಗುವುದಾಗಿ ಮೊಬೈಲ್ ಗೆ ಮೆಸೇಜ್ ಮಾಡಿ ನಾಪತ್ತೆಯಾಗಿದ್ದರು. ಇದೀಗ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೆ ಯುವತಿ ಬುಧವಾರ ಠಾಣೆಗೆ ಹಾಜರಾಗಿದ್ದಾರೆ.
ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ, ಅಲ್ಲಿಗೆ ಎಂದು ಮನೆಯಿಂದ ಹೋದವಳು ಮನೆಗೆ ವಾಪಾಸು ಬರದೆ ನಾಪತ್ತೆಯಾಗಿದ್ದಳು. ಅದೇ ದಿನ ಈಕೆಯ ಚಿಕ್ಕಮ್ಮಳ ಮೊಬೈಲ್ ಗೆ ಮೆಸೇಜ್ ಮಾಡಿ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ನಾನು ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದ್ದರು. ಬಳಿಕ ಮೊಬೈಲ್ ಕೂಡ ಸ್ವಿಚ್ ಆಪ್ ಆಗಿದ್ದು, ಮನೆಯವರ ಜೊತೆ ಯಾವುದೇ ಸಂಪರ್ಕ ಮಾಡಿಲ್ಲ. ಈ ಕಾರಣಕ್ಕಾಗಿ ಈಕೆಯ ತಮ್ಮ ಪೋಲೀಸ್ ಠಾಣೆಗೆ ದೂರು ನೀಡಿದ್ದರು.
ಮನೆಯವರು ನೇಹಾಗೆ ಮದುವೆ ಮಾಡುವ ಬಗ್ಗೆ ಸಂಬಂಧ ಹುಡುಕುವ ವೇಳೆ ನೇಹಾ ನಾನು ಸದ್ಯ ಮದುವೆ ಆಗುವುದಿಲ್ಲ ವಿದ್ಯಾಭ್ಯಾಸ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದರು. ಬುಧವಾರ ನೇರವಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಹಾಜರಾದ ನೇಹಾ, ನಾನು ಸ್ವ ಇಚ್ಛೆಯಿಂದ ಮನೆ ಬಿಟ್ಟು ಹೋಗಿದ್ದು, ನನಗೆ ನನ್ನ ಮನೆಯವರೊಂದಿಗೆ ಹೋಗಲು ಇಚ್ಚೆ ಇರುವುದಿಲ್ಲ. ನಾನು ಮುಂದಕ್ಕೆ ವೃತ್ತಿಯೊಂದಿಗೆ ವಿದ್ಯಾಭ್ಯಾಸ ಮುಂದುವರೆಸಲು ಹಾಗೂ ಬದುಕಲು ನಿಶ್ವಯಿಸಿದ್ದು, ಆ ಉದ್ದೇಶದಿಂದ ನಾನು ಉಡುಪಿಯ ಅಜೆಕಾರು ಕುಂಜಿಬೆಟ್ಟು ಎಂಬಲ್ಲಿರುವ ಶ್ರೀ ದುರ್ಗಾ ಮಹಿಳೆಯರ ಪಿ.ಜಿಗೆ ತೆರಳಿ ಅಲ್ಲಿಯೇ ವಾಸ್ತವ್ಯ ಇದ್ದು ನನ್ನ ವಿದ್ಯಾಭ್ಯಾಸ ಮುಂದುವರಿಸಲು ಇಚ್ಚಿಸಿರುತ್ತೇನೆ ಎಂದು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.