ದುಬೈ (www.vknews.in) : ಸಾಧನೆಗೊಂದು ಮೈಲುಗಲ್ಲು ರಕ್ತದಾನದಲ್ಲೊಂದು ಹೊಸ ಕ್ರಾಂತಿ ಎಂಬ ಧ್ಯೇಯದೊಂದಿಗೆ, ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ದಾಖಲೆಯ 400ನೇ ರಕ್ತದಾನ ಶಿಬಿರ ದುಬೈ ಯಲ್ಲಿ ಒಂದೇ ಬಾರಿ ಎರಡು ಪ್ರದೇಶದಲ್ಲಿ ಆಯೋಜಿಸಲಾಗಿದೆ.
ದುಬೈಯ ಫಾಝ್ ಸೂಪರ್ ಮಾರ್ಕೆಟ್ ಮುಂಬಾಗ, ಹಯಾತ್ ರೆಸಿಜೆನ್ಸಿ ಎದುರುಗಡೆ ದೇರಾ ದುಬೈ ಮತ್ತು ಅಲ್ ಖೈಲ್ ಮಾಲ್ ಅಲ್ ಖ್ಯೂಝ್ ದುಬೈ ಯಲ್ಲಿ ದಿನಾಂಕ 25 ಅಗಸ್ಟ್ 2೦23 ರಂದು ರಕ್ತದಾನ ಶಿಬಿರಗಳು ಜರುಗಲಿದೆ.
ಕಳೆದ ಹತ್ತು ವರ್ಷಗಳಿಂದ ಸೇವಾರಂಗದಲ್ಲಿರುವ ಸಂಸ್ಥೆಯ ಹೊಸ ಮೈಲುಗಲ್ಲು ಇದಾಗಿದ್ದು, ನಾಲ್ಕುನೂರು ಶಿಬಿರಗಳ ಪಯಣದ ನೆನಪಿಗಾಗಿ ಅಗಸ್ಟ್ 27 ರಂದು ದೇರಳಕಟ್ಟೆ ಪರಿಸರದಲ್ಸಿ 4೦೦ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕಾರ್ಯಕ್ರಮದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕೆಂದು ದುಬೈ ಶಿಬಿರ ಆಯೋಜಕರು ವಿನಂತಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.