ರಿಯಾದ್ (www.vknews.in) : ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಉಮ್ರಾ ಯಾತ್ರಿಕರ ಕುಟುಂಬದ ಐವರು ಮೃತಪಟ್ಟಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ. ಮಕ್ಕಾ-ರಿಯಾದ್ ರಸ್ತೆಯಲ್ಲಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಯುಎಇಯಿಂದ ಬಂದ ಜೋರ್ಡಾನ್ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಕುಟುಂಬವು ಉಮ್ರಾ ಮುಗಿಸಿ ಯುಎಇಗೆ ಮರಳುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ತಂದೆ, ತಾಯಿ ಹಾಗೂ ನಾಲ್ವರು ಮಕ್ಕಳು ವಾಹನದಲ್ಲಿದ್ದರು. ತಂದೆ ಮಲಿಕ್ ಅಕ್ರಂ, ಮಕ್ಕಳಾದ ಅಕ್ರಂ, ಮಾಯಾ, ದಾನಾ ಮತ್ತು ದೀಮಾ ಮೃತಪಟ್ಟಿದ್ದು, ತಾಯಿ ಹೆಚ್ಚಿನ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಮೃತರನ್ನು ಹುಫುಫ್ ಪ್ರದೇಶದ ಕಿಂಗ್ ಫಹದ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಮೃತದೇಹಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸೌದಿ ಅರೇಬಿಯಾದ ಜೋರ್ಡಾನ್ ರಾಯಭಾರ ಕಚೇರಿಯು ಸ್ಥಳದಲ್ಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.