ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಸ್ಟೂಡೆಂಟ್ ಫೆಡರೇಶನ್(SSF ) ಇದರ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನವು ನಾಳೆ ಸೆ.10 ಬೆಂಗಳೂರಿನ ಅರಮನೆ ಮೈದಾನದಲ್ಲಿ “ನಾವು ಭಾರತೀಯರು” ಎಂಬ ಸಂವಿಧಾನದ ಪೀಠಿಕೆಯೊಂದಿಗೆ ನಡೆಯಲಿದೆ.
1973 ರಲ್ಲಿ ಕೇರಳದ ಪಟ್ಟಿಕ್ಕಾಡ್ ಎಂಬಲ್ಲಿ ಸ್ಥಾಪನೆಯಾದ ದೇಶದ ಅತೀ ದೋಡ್ಡ ವಿಧ್ಯಾರ್ಥಿ ಸಂಘಟನೆಯು SSF ಇಂದು ಸ್ವರ್ಣ ಮಹೋತ್ಸವದ ಹೊಸ್ತಿಲಲ್ಲಿದ್ದು, ಇಡೀ ದೇಶದಲ್ಲೇ ಇದರ ಪ್ರಚಾರ ಕಾರ್ಯವನ್ನು ನಡೆಸುತ್ತಿದೆ. ಅಶಾಂತಿಯ ವಿರುಧ್ದ, ಅನ್ಯಾಯದ ವಿರುದ್ದ, ಮಾಧಕ ದ್ರವ್ಯಗಳ ವಿರುದ್ದ, ಶಾಂತಿಯಿಂದಲೇ ಹೋರಾಡಿ ವಿಜಯಗಳಿಸಿದ್ದಲ್ಲದೆ, ದೇಶದಲ್ಲೇ ಗುರುತಿಸಿಕೊಂಡಿದೆ.
ಇದರ ಭಾಗವಾಗಿ ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ SSF ಗೋಲ್ಡನ್ ಫಿಫ್ಟಿ ಸಮ್ಮೇಳನವು ನಡೆಯಲಿದೆ. ಅದಲ್ಲದೇ SSF ಗೋಲ್ಡನ್ ಫಿಫ್ಟಿ ಪ್ರಚಾರಾರ್ಥ ಕಾಶ್ಮೀರದಿಂದ ಪ್ರಾರಂಭವಾದ ಸಂವಿಧಾನ ಯಾತ್ರೆಯ ಸಮರೋಪ ಕೂಡ ನಡೆಯಲಿದೆ.
ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ರವರು ನೇತೃತ್ವ ವಹಿಸಲಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಡಿಕೆ ಶಿವಕುಮಾರ್, ಸೈಯಿದ್ ಇಬ್ರಾಹೀಂ ಖಲೀಲ್ ಅಲ್ ಬುಖಾರಿ (ಮಅದಿನ್), ಸೈಯಿದ್ ಕೂರತ್ ತಂಗಳ್, ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಪೇರೋಡ್ ಉಸ್ತಾದ್, ಡಾ:ಅಬ್ದಲ್ ಹಕೀಂ ಅಝ್ಹರಿ, ಯುಟಿ ಖಾದರ್, ಹಝ್ರತ್ ಕಾವಳಕಟ್ಟೆ, ಜಿ ಪರಮೇಶ್ವರ್, ಝಮೀರ್ ಅಹ್ಮದ್, ಸೈಯಿದ್ ಮುಹಮ್ಮದ್ ಜಾಮೀ ಅಶ್ರಫ್, ಶಾಫಿ ಸಅದಿ ಬೆಂಗಳೂರು, ಸೈಯಿದ್ ಫೈಝಾನ್ ಅಶ್ರಫ್ ಹಾಗೂ ಕರ್ನಾಟಕ ಕೇರಳ ಸಹಿತ ದೇಶದ ವಿವಿಧ ಗಡೆಗಳಿಂದ ಉಲಮಾ ಉಮರಾ ನೇತಾರರು, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಇದೀಗಾಗಲೇ ರಾಜ್ಯದ ವಿವಿಧ ಕಡೆಗಳಿಂದ ಜನರು ಆಗಮಿಸುತ್ತಿದ್ದು, ಸುಮಾರು ಒಂದುವರೆ ಲಕ್ಷ ಜನರು ಸೇರುವ ನಿರೀಕ್ಷೆಯಲ್ಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.