ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಸರ್ಕಾರವು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೇಖ್ ಅಬೂಬಕರ್ ಅಹ್ಮದ್ ಅವರನ್ನು ಬೆಂಗಳೂರಿನಲ್ಲಿ SSF ಸಂವಿಧಾನ ಯಾತ್ರೆಯ ಸಮಾರೋಪ ಅಧಿವೇಶನಕ್ಕೆ ಸರ್ಕಾರಿ ಅತಿಥಿಯಾಗಿ ಘೋಷಿಸಿದೆ.
ಭಾನುವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರಿಗೆ ಆಗಮಿಸುವ ಎ.ಪಿ.ಅಬೂಬಕರ್ ಮುಸ್ಲಿಯಾರ್ ರವರು ಸೋಮವಾರ ಸಂಜೆ 6 ಗಂಟೆಗೆ ಕಾಂತಪುರಂಗೆ ಮರಳಲಿದ್ದಾರೆ. ಎರಡು ದಿನಗಳ ಕಾಲ ಕರ್ನಾಟಕ ಸರ್ಕಾರದ ಅತಿಥಿಯಾಗಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾಂತಪುರಂ ಅವರಿಗೆ ಸರ್ಕಾರಿ ಅತಿಥಿ ಗೃಹ, ಸರ್ಕಾರಿ ವಾಹನಗಳು, ಸರ್ಕಾರಿ ಭದ್ರತೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಕಳೆದ ತಿಂಗಳು 13 ರಂದು ಕಾಶ್ಮೀರದಿಂದ ಆರಂಭವಾದ SSF ಸಂವಿಧಾನ ಯಾತ್ರೆಯು ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿದ್ಯಾರ್ಥಿಗಳ ಸಮಾವೇಶದೊಂದಿಗೆ ಮುಕ್ತಾಯಗೊಳ್ಳಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.