(www.vknews.in)ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ರಾಜಕೀಯವನ್ನು ತಂದವರು ಯಾರು ?
09/09/2023 ರಂದು ಪುತ್ತೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ, ಕಾಲೇಜು ಪ್ರಿನ್ಸಿಪಾಲ್ ರವರ ಆದೇಶವನ್ನು ಉಲ್ಲಂಘಿಸಿದ್ದು,. ಯಾವುದೇ ರೀತಿಯ ಸಂಘಟನೆಗಳಿಗೆ ಕೂಡ ಶಾಲಾ ಆವರಣದಲ್ಲಿ ಹಾಗೂ ವಿಧ್ಯಾರ್ಥಿ ಸಂಘ ಚುನಾವಣೆಯಲ್ಲಿ ಅವಕಾಶ ಇಲ್ಲದೆ ಇರುವಾಗ ,ಶಾಲಾ ಚುನಾವಣೆ ಮುಗಿದು ಅಭ್ಯರ್ಥಿಗಳ ವಿಜಯೋತ್ಸವದಲ್ಲಿ ರಾಜಕೀಯ ನೇತಾರರನ್ನು ಕರೆದವರು ಯಾರು? ಹಾಗೂ ಅವರೊಂದಿಗೆ ವಿಜಯೋತ್ಸವವನ್ನು ಆಚರಿಸಿದ ಹಾಗೂ ಪರಾಜಿತ ವಿಧ್ಯಾರ್ಥಿಗಳ ಹೆಸರನ್ನು ಉಲ್ಲೇಖಿಸಿ ರಾಜಕೀಯಕ್ಕೆ ತಳುಕು ಹಾಕುವ ಮೂಲಕ ಕಾಲೇಜು ಚುನಾವಣೆಯನ್ನು ರಾಜಕೀಯ ಗೊಳಿಸಿರುತ್ತಾರೆ. ಪುತ್ತೂರಿನಲ್ಲಿ ಪ್ರತಿಷ್ಠಿತ ಹಾಗೂ ಯಾವುದೇ ರಾಜಕೀಯಕ್ಕೂ ಅವಕಾಶ ಇಲ್ಲದೆ ಎಲ್ಲರಿಂದಲೂ ಜನಮನ್ನಣೆ ಗಳಿಸಿರುವ ಕಾಲೇಜು ಈಗ ರಾಜಕೀಯ ಬಣ್ಣವನ್ನು ಪಡೆದಿರುವುದು ಖೇದಕರ,ಆದರಿಂದ ಕಾಲೇಜಿನಲ್ಲಿ ರಾಜಕೀಯವನ್ನು ತಂದು ವಿಧ್ಯಾರ್ಥಿಗಳ ನಡುವೆ ವೈಷಮ್ಯವನ್ನು ಬಿತ್ತುತ್ತಿರುವ ವರ ಮೇಲೆ ಕಾಲೇಜು ಆಡಳಿತ ಕೂಡಲೇ ಕ್ರಮವನ್ನು ಕೈ ಗೊಂಡು , ರಾಜಕೀಯ ರಹಿತವಾದ ಜಾತ್ಯಾತೀತವಾದ ವಿಧ್ಯಾರ್ಥಿ ಸಂಘಟನೆಗಳಿಗೆ ಮಾತ್ರ ಅವಕಾಶವನ್ನು ನೀಡುವಂತೆ ಪೋಷಕರು ಆಗ್ರಹಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.