ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಭುಗಲೆದ್ದಿರುವ ಕಾವೇರಿ ಜಲ ವಿವಾದವನ್ನು ಬಗೆಹರಿಸಲು ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕೆಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಒತ್ತಾಯಿಸಿದರು.
ತಾಲೂಕಿನ ತಲದುಮ್ಮನಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಗಾಯಗೊಂಡಿರುವ ಪತ್ರಕರ್ತ ಸಿವಿ ಲಕ್ಷ್ಮಣರಾಜು ಅವರ ಆರೋಗ್ಯವನ್ನು ವಿಚಾರಿಸಿದ ನಂತರ ಸುಧ್ಧಿಗಾರರೊಂದಿಗೆ ಮಾತನಾಡಿದ ಅವರು ಕಾವೇರಿ ಜಲ ವಿವಾದ ಹೊಸದಲ್ಲ ಮಳೆಯ ನೀರಿನ ಕೊರತೆಯಿಂದಾಗಿ ಸಮಸ್ಯೆ ಆಗುತ್ತದೆ ಸರ್ಕಾರ ಸಹ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಆದರೇ ಕೇಂದ್ರ ಸರ್ಕಾರ ಜಲ ವಿವಾದವನ್ನು ಪರಿಹರಿಸಲು ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದರು.
ಸಂಸದರ ನಿಯೋಗ: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿ ಒಳಗೊಂಡಂತೆ ಸಂಸದರ ನಿಯೋಗ ಕೇಂದ್ರ ಸರ್ಕಾರದ ಸಚಿವರ ಗೃಹ ಕಚೇರಿಯಲ್ಲಿ ನೀರಾವರಿ ಇಲಾಖೆಯ ಕಾರ್ಯದರ್ಶಿಯೊಂದಿಗೆ ಮಾತುಕತೆ ನಡೆಸಿದರು ಆ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿಗಳು ಕರ್ನಾಟದ ಎಲ್ಲಾ ಪರಿಸ್ಥಿತಿಯನ್ನು ಮತ್ತು ತಮಿಳುನಾಡಿನ ನೀರಿನ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ತೀರ್ಪುನನ್ನು ಕೊಟ್ಟಿದ್ದೇವೆ ನಾವು ಯಾರ ಪರವಾಗಿಯೂ ಇಲ್ಲ ಯಾರ ವಿರುಧ್ಧವೂ ಇಲ್ಲವೆಂದು ನಿಯೋಗಕ್ಕೆ ಸ್ಪಷ್ಟಪಡಿಸಿದರು ಆದ್ದರಿಂದ ನಮ್ಮ ವಕೀಲರು ಸರಿಯಾದ ವಾದ ಮಾಡಿಲ್ಲ ಎಂಬುದು ತಪ್ಪು ಕಲ್ಪನೆ ನ್ಯಾಯವಾದಿಗಳು ತುಂಬ ಉತ್ತಮವಾಗಿ ವಾದ ಮಾಡಿದ್ದಾರೆ ಎಲ್ಲಾ ವಾದವನ್ನು ಮೀರಿ ತೀರ್ಪು ಬಂದಿದೆ ಮತ್ತೊಮ್ಮೆ ಸುಪ್ರೀಂಕೋರ್ಟ್ನಲ್ಲಿ ಹೋಗಿ ತೀರ್ಪು ಮರು ಪರಿಶೀಲನೆಗೆ ಅರ್ಜಿ ಹಾಕಿಕೊಂಡು ಮೇಲ್ಮನವಿ ಮೂಲಕ ನಿಜವಾದ ಪರಿಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಹೊರತು ಬೇರೆ ಮಾರ್ಗವಿಲ್ಲವೆಂದರು.
ಕಾವೇರಿ ವಾಟರ್ ಮ್ಯಾನೆಜ್ಮೆಂಟ್ ಮತ್ತು ರೆಗ್ಯೂಲೇಟರಿ ಪ್ರಾಧಿಕಾರದ ಮುಂದೆ ನಾವು ಹೋಗಿದ್ದೇವೆ ನಮ್ಮ ನ್ಯಾಯವಾದಿಗಳು ನಮ್ಮ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಸಂವಿಧಾನತ್ಮಕವಾದ ವೇದಿಕೆಗಳ ತೀರ್ಮಾನ ಅಂತಿಮ ಅದರಲ್ಲಿ ಏನು ತಪ್ಪಿಲ್ಲ ಸುಪ್ರೀಂಕೋರ್ಟ್ ಅವರ ತೀರ್ಮಾನವನ್ನು ಎತ್ತಿಹಿಡಿದಿರುವುದು ಸಹಜವಾದ ನ್ಯಾಯ ಅದು ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಎಂಬುದು ನಿಜ ಕುಡಿಯುವ ನೀರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ನಮ್ಮ ಜಲಾಶಯಲ್ಲಿರುವ ನೀರನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಿದ್ದಾರೆ ಎಲ್ಲವನ್ನು ಗಣನೆಗೆ ತೆಗೆದುಕೊಂಡು ಈಗ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಂಡು 10 ಸಾವಿರ ಕ್ಯೂಸೆಕ್ಸ್ ನೀರಿನ ಬದಲಿಗೆ ಕೇವಲ 3 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ತೀರ್ಮಾನ ಬಂದಿದೆ ಆದರೇ ರಾಜ್ಯ ಸರ್ಕಾರ ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಗೆ ವಿರುಧ್ಧವಾಗಿ ಹೋಗುವುದಕ್ಕೆ ಸಾಧ್ಯವಿಲ್ಲ ದೇಶದ ಸಾರ್ವಭೌಮತ್ವ ಕಾಪಾಡಿಕೊಳ್ಳಬೇಕಾದರೆ ಅದರ ವಿರುಧ್ಧ ನಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದರು.
ನಮ್ಮ ಹೋರಾಟಗಾರರು ಮತ್ತು ರಾಜಕೀಯ ಪಕ್ಷಗಳು ಸುಪ್ರೀಂಕೋರ್ಟ್ ನ್ಯಾಯಾಲಯದ ವಿರುಧ್ಧವಾಗಿ ಹೋಗಲು ಹೇಳುತ್ತಿದ್ದಾರೆ ಅವರು ಅಧಿಕಾರದಲ್ಲಿದ್ದಾಗ ಯಾರು ನ್ಯಾಯಾಂಗದ ವಿರುಧ್ಧ ಹೋಗಿಲ್ಲ ಎಂಬುದು ನಮಗೆ ಗೊತ್ತಿದೆ ಎಲ್ಲರು ಹೇಳುವುದು ಮಾಜಿ ಸಿಎಂ ಬಂಗಾರಪ್ಪ ಹೀಗೆ ಮಾಡಿದ್ದರಲ್ಲ ಸಿಎಂ ಸಿದ್ದರಾಮಯ್ಯ ಯಾಕೆ ಮಾಡಬಾರದು ಎಂದು ಪ್ರಶ್ನೆ ಮಾಡುತ್ತಿದ್ದಾರೆ ಆದರೇ ಮಾಜಿ ಸಿಎಂ ಬಂಗಾರಪ್ಪ ಕಾಲಾವಧಿಯಲ್ಲಿ ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಇರಲಿಲ್ಲ ಮತ್ತು ಸುಪ್ರೀಂಕೋರ್ಟ್ ಅಂತಿಮ ತೀರ್ಪು ಬಂದಿರಲಿಲ್ಲ ಆಗ ಅಂತಹ ನಿರ್ಧಾರವನ್ನು ತೆಗೆದುಕೊಂಡಿದ್ದು ಸರಿನೆ ಆದರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ,ಹೆಚ್ಡಿ ಕುಮಾರಸ್ವಾಮಿ ಹಾಲಿ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಇರಲಿ ದೇಶದ ನೆಲದ ಕಾನೂನಿಗೆ ವಿರುಧ್ಧವಾಗಿ ನಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಆದರೇ ನಾವು ನೀರು ಕೊಡಲು ಆಗುವುದಿಲ್ಲ ಎನ್ನುವುದು ದಾಖಲು ಮಾಡಬೇಕು ನ್ಯಾಯಾಲಯಕ್ಕೆ ಮನವರಿಕೆ ಆಗುವಂತಹ ರೀತಿಯಲ್ಲಿ ಹೇಳಬೇಕು ಆ ಮೂಲಕ ನ್ಯಾಯ ಪಡೆಯಬೇಕೇ ಹೊರತು ನೀರನ್ನು ಸಂಪೂರ್ಣವಾಗಿ ನಿಲ್ಲಿಸಿ ನ್ಯಾಯ ಪಡೆಯುತ್ತೇವೆ ಎಂಬುದು ಕಷ್ಟ ಸಂದರ್ಭ ಜಲ ವಿವಾದವನ್ನು ಇತ್ಯರ್ಥ ಮಾಡಲು ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ ಆದರೇ ಕಳೆದ 8-10 ದಿನಗಳಿಂದ ಏನು ನೀರನ್ನು ಬಿಟ್ಟಿದ್ದೇವೆ ಅದನ್ನು ಮುಂದಿಟ್ಟಿಕೊಂಡು ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಪಡೆಯುವುದೇ ಅಂತಿಮ ಪರಿಹಾರ ಹೊರತು ಬೇರೆ ಪರಿಹಾರ ಇಲ್ಲ ಎಂದರು.
ಉಪ ಮುಖ್ಯಮಂತ್ರಿ ವಿಚಾರ ಸಾರ್ವತ್ರಿಕ ಚರ್ಚೆ ಬೇಡ: ರಾಜ್ಯದಲ್ಲಿ ಆಡಳಿತದ ದೃಷ್ಠಿಯಿಂದ ಇನ್ನೂ ಮೂರು ಉಪ ಮುಖ್ಯಮಂತ್ರಿ ಸ್ಥಾನವನ್ನು ಹೆಚ್ಚಿಸಲು ಸಚಿವ ಕೆ.ಎನ್.ರಾಜಣ್ಣ ಅವರು ಪ್ರಸ್ತಾವನೆ ಮಂಡಿಸಲು ಯಾರು ಪ್ರೇರಣೆ ಎಂದು ಗೊತ್ತಿಲ್ಲ ಆದರೇ ಉಪಮುಖ್ಯಮಂತ್ರಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಯಾವುದೇ ಮಂತ್ರಿ ಅಥವಾ ನಾಯಕರು ತೀರ್ಮಾನ ಮಾಡುವ ವಿಚಾರವಲ್ಲ ಅದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಉಪ ಮುಖ್ಯಮಂತ್ರಿ ವಿಚಾರವನ್ನು ಸಾರ್ವಜನಿಕವಾಗಿ ವಿವಾದಕ್ಕೀಡು ಮಾಡುವುದು ಪಕ್ಷದ ಹಿತದೃಷ್ಠಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ ಒಂದು ವೇಳೆಯಲ್ಲಿ ಪಕ್ಷದ ವರಿಷ್ಠರು ಉಪಮುಖ್ಯಮಂತ್ರಿಗಳ ಹುದ್ದೆಗಳನ್ನು ಹೆಚ್ಚಿಸಿದರೆ ಅದರಿಂದ ಪಕ್ಷಕ್ಕೆ ಸಹಕಾರಿ ಆಗುತ್ತದೆ ಹೊರತು ಮಾರಕವಾಗುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಸಿಎಂ ಹುದ್ದೆಗಳ ಹೆಚ್ಚಳಕ್ಕೆ ಸಹಮತ ವ್ಯಕ್ತಪಡಿಸಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಕಾಂಗ್ರೆಸ್ಗೆ ನಷ್ಟವಿಲ್ಲ: ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮೈತ್ರಿ ಸಾರ್ವಜನಿಕ ಚರ್ಚೆಗೆ ಒಳಗಾಗಿದೆ ಜಾತ್ಯಾತೀತ ತತ್ವದ ಮೇಲೆ ರಾಜಕಾರಣ ಮಾಡಿಕೊಂಡು ಬರುತ್ತಿರುವ ಜೆಡಿಎಸ್ ಪಕ್ಷಕ್ಕೆ ಇದರಿಂದ ಹೊಡೆತ ಬೀಳಲಿದೆ ಕೋಮುವಾದಿ ರಾಜಕಾರಣ ಮಾಡುವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಡಲು ಜೆಡಿಎಸ್ ಪಕ್ಷದವರು ಹೊರಟಿದ್ದಾರೆ ಆದರೇ ಕಾಂಗ್ರೆಸ್ ಪಕ್ಷವೂ ಎರಡು ಪಕ್ಷಗಳ ಮೈತ್ರಿಯಿಂದ ವಿಚಲಿತ ಆಗುವುದಿಲ್ಲ ಏಕೆಂದರೆ ಕಾಂಗ್ರೆಸ್ ಪಕ್ಷದ ಮತಗಳೇ ಬೇರೆ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಿಂದ ಮನನೊಂದು ಅನೇಕ ಜನ ಈಗಾಗಲೇ ಜೆಡಿಎಸ್ ಪಕ್ಷವನ್ನು ತೈಜಿಸಿದ್ದಾರೆ ಮೈತ್ರಿಯಿಂದ ಜೆಡಿಎಸ್ಗೆ ಹೊಡೆತ ಬೀಳುತ್ತಿದೆ ಹೊರತು ಕಾಂಗ್ರೆಸ್ಗೆ ಅಲ್ಲ ಇನ್ನೂ ಬಿಜೆಪಿಗೆ ಮೈತ್ರಿಯಿಂದ ಯಾವ ರೀತಿಯ ಲಾಭ ಆಗುತ್ತದೆ ಎಂಬುದು ಲೋಕಸಭಾ ಚುನಾವಣೆಯ ನಂತರವೇ ಗೊತ್ತಾಗಲಿದೆ ಎಂದು ವ್ಯಂಗ್ಯವಾಡಿದರು.
ಗೃಹಸಚಿವರಿಗೆ ಪತ್ರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು ಕೂಡಲೇ ಸಮಾಜ ಕಲ್ಯಾಣ ಸಚಿವರೊಂದಿಗೆ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದಲಿತ ಮುಖಂಡರ ಸಭೆಯನ್ನು ಕರೆಯಲು ಗೃಹಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಪತ್ರವ್ಯವಹಾರ ನಡೆಸುವುದಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ದೌರ್ಜನ್ಯಗಳನ್ನು ಹೆಚ್ಚಾಗುತ್ತಿದೆ ಅಟ್ರಾಸಿಟಿ ಪ್ರಕರಣಗಳ ಸಂಖ್ಯೆ ಗಣನೀಯ ಹೆಚ್ಚಳವಾಗುತ್ತಿರುವುದು ಕಳವಳಕಾರಿ ಪೋಲಿಸ್ ಇಲಾಖೆಯ ಅಧಿಕಾರಿಗಳು ನಿಷ್ಪಪಕ್ಷಪಾತವಾಗಿ ಕಾರ್ಯನಿರ್ವಹಿಸಿ ಯಾರೇ ತಪ್ಪಿತಸ್ಥರಿದ್ದರು ಸಹ ಅವರ ಮೇಲೆ ನಿರ್ಧಾಕ್ಷ್ಯಣ್ಯವಾಗಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಪತ್ರಕರ್ತನ ಮೇಲೆ ದೌರ್ಜನ್ಯ ನಡೆದರೆ ಇನ್ನೂ ಸಾಮಾನ್ಯ ಜನರ ಪಾಡೇನು? ಎಂದು ಪ್ರಶ್ನಿಸಿದ ರಾಜ್ಯಸಭಾ ಸದಸ್ಯರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಇದರಲ್ಲದೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯದ ಪ್ರಕರಣಗಳ ಕುರಿತು ಪೋಲಿಸ್ ಇಲಾಖೆಯ ಅಧಿಕಾರಿಗಳು ಯಾವ ರೀತಿ ಕ್ರಮ ಜರುಗಿಸಿದ್ದಾರೆ ಎಂದು ಪರಿಶೀಲಿಸಲು ಅವಳಿ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳು, ಕೇಂದ್ರ ವಲಯದ ಐಜಿಪಿ ಮತ್ತು ಡಿಜಿಪಿ ಅವರೊಂದಿಗೆ ದಲಿತರ ಮುಖಂಡರೊಂದಿಗೆ ಪ್ರಾಯೋಗಿಕವಾಗಿ ಸಭೆ ನಡೆಸಲು ಗೃಹಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಪತ್ರವ್ಯವಹಾರ ನಡೆಸುತ್ತೇನೆ ಸಮಾಜದಲ್ಲಿ ಎಲ್ಲರು ಪ್ರೀತಿ ವಿಶ್ವಾಸದಿಂದ ಬದುಕಬೇಕು ಈ ನಿಟ್ಟಿನಲ್ಲಿ ಎಲ್ಲರು ಚಿಂತಿಸಬೇಕೆಂದರು.
ಎಡಿಜಿಪಿ ನೇತೃತ್ವದಲ್ಲಿ ತನಿಖಾ ತಂಡ: ಅವಳಿ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರು ಸಹ ಪೆÇಲೀಸ್ ಅಧಿಕಾರಿ ನಿರ್ಲಕ್ಷ್ಯವಹಿಸಿರುವ ಕುರಿತು ಎಡಿಜಿಪಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ಸತ್ಯಸತ್ಯತೆಯನ್ನು ಬಹಿರಂಗಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಸಿವಿ ಲಕ್ಷ್ಮಣರಾಜು ಅವರ ತಾಯಿ ಗಂಗಮ್ಮ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ವೆಂಕಟಸ್ವಾಮಿ ಗಂಗನಬೀಡು, ಚಿಂತಾಮಣಿಕೃಷ್ಣ, ಪಿಡಿಓ ಎಂ.ವೆಂಕಟಚಲಪತಿ, ಎಸ್.ಬಿ.ಐ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಶಿವಪ್ಪ, ಪತ್ರಕರ್ತ ಸಿವಿ ಲಕ್ಷ್ಮಣರಾಜು, ಕಾಂಗ್ರೆಸ್ ಮುಖಂಡ ನರಸಿಂಹ (ಎನ್.ಟಿ.ಆರ್.), ಸಮಾಜಸೇವಕ ನಾಗರಾಜ್, ಕುಂದಲಗುರ್ಕಿ ಮುನೀಂದ್ರ, ದಸಂಸ ತಾಲೂಕು ಸಂಚಾಲಕ ಚಲಪತಿ ಮತ್ತಿತರರು ಉಪಸ್ಥಿತರಿದ್ದರು.
ವರದಿ: ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.