ದುಬೈ(www.vknews.in):2034 ರ ವಿಶ್ವಕಪ್ ಪಂದ್ಯಾಟವನ್ನು ಸೌದಿ ಅರೇಬಿಯಾ ಆಯೋಜಿಸುತ್ತದೆ ಎಂದು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಇಂದು ಅಧಿಕೃತವಾಗಿ ಘೋಷಿಸಿದರು. 2034ರ ವಿಶ್ವಕಪ್ಗೆ ಆತಿಥ್ಯ ವಹಿಸಲು ಬೇರೆ ಯಾವುದೇ ದೇಶಗಳು ಬಿಡ್ ಸಲ್ಲಿಸಿಲ್ಲ, ಇದರಿಂದಾಗಿ ಸೌದಿ ಅರೇಬಿಯಾ ಈ ಅವಕಾಶ ಪಡೆದುಕೊಂಡಿಿದೆ. ಇದರೊಂದಿಗೆ 11 ವರ್ಷಗಳ ಬಳಿಕ ಗಲ್ಫ್ ರಾಷ್ಟ್ರವೊಂದರಲ್ಲಿ ವಿಶ್ವ ಫುಟ್ಬಾಲ್ ದಿಗ್ಗಜರು ಆಡಲಿದ್ದಾರೆ. ಕತಾರ್ ನಂತರ ಸೌದಿ ಅರೇಬಿಯಾ ಐತಿಹಾಸಿಕ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದ್ದು, ಫುಟ್ಬಾಲ್ ಮತ್ತೆ ಗಲ್ಫ್ ರಾಷ್ಟ್ರಗಳಿಗೆ ಮರಳಲಿದೆ. ಎಲ್ಲಾ ತಾಂತ್ರಿಕ ಮಾನದಂಡಗಳನ್ನು ಪೂರೈಸುವ ನಿರ್ಧಾರವನ್ನು ಈ ವರ್ಷದ ಅಂತ್ಯದ ವೇಳೆಗೆ ಅಧಿಕೃತವಾಗಿ ಅನುಮೋದಿಸಲಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.