ಜಿದ್ದಾ(www.vknews.in): ದಾರುನ್ನೂರು ಜಿದ್ದಾ ಘಟಕದ ವತಿಯಿಂದ ದಾರುನ್ನೂರು ದಶಮಾನೋತ್ಸವ ಸನದುದಾನ ಮಹಾ ಸಮ್ಮೇಳನದ ಪ್ರಚಾರ ಸಂಗಮ ಕಾರ್ಯಕ್ರಮವು ಜಿದ್ದಾ ಬನಿ ಮಲೀಕ್ ಹಿಲ್ ಟೋಪ್ ರೆಸ್ಟೋರೆಂಟಿನಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾರುನ್ನೂರ್ ಜಿದ್ದಾ ಘಟಕದ ಅಧ್ಯಕ್ಷರಾದ ಶರೀಫ್ ತೋಡಾರ್ ವಹಿಸಿಕೊಂಡು ಮಾತನಾಡಿ ದಾರುನ್ನೂರು ಸಂಸ್ಥೆಯ ಬಗ್ಗೆ ವಿವರಿಸಿದರು. ದಾರುನ್ನೂರಿನ ಪ್ರಗತಿಗಾಗಿ ನಾವೆಲ್ಲರೂ ನಿಸ್ವಾರ್ಥವಾಗಿ ದುಡಿಯುತ್ತೇವೆ ಎಂಬ ಭರವಸೆಯನ್ನೂ ನೀಡಿದರು. ದುಆ ಆಶೀರ್ವದಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದ ಬಹು! ಹುಸೈನ್ ದಾರಿಮಿ ರೆಂಜಳಾಡಿ ಉಸ್ತಾದರು ಪ್ರವಾಸಿಗಳ ಜೀವನ ಮತ್ತು ಅವರ ಕೊಡುಗೆಗಳನ್ನು ಸಾವಿಸ್ಥಾರವಾಗಿ ವಿವರಿಸಿದರು. ಮುಖ್ಯ ಅತಿಥಿಗಳಾಗಿ ದಾರುನ್ನೂರು ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಕೋಡಿಜಾಲ್ ಇಬ್ರಾಹಿಂ ಹಾಜಿ,ಕೋಶಾಧಿಕಾರಿ ಏರ್ ಇಂಡಿಯಾ ಉಸ್ಮಾನ್ ಹಾಜಿ, ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾದ ಬಿ ಮೊಹಮ್ಮದ್ ಹಾಜಿ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿ ಸಮದ್ ಹಾಜಿ ಎಚ್.ಬಿ.ಟಿ, ಜಾವಿದ್ ಕಲ್ಲಡ್ಕ, ರಫೀಕ್ ಹಾಜಿ ಕೆ.ಸಿ.ರೋಡ್, ಇಕ್ಬಾಲ್ ಎಮ್.ಕೆ, ರಿಯಾಝ್ ವಾಮಂಜೂರು, ರಫೀಕ್ ಅಡ್ಡೂರು, ಝುಬೈರ್ ಕಕ್ಕಿಂಜೆ, ಇಮ್ರಾನ್ ಚೊಕ್ಕಬೆಟ್ಟು ಮತ್ತು ಜಿದ್ದಾ ಘಟಕದ ಪದಾಧಿಕಾರಿಗಳು ದಾರುನ್ನೂರು ಅಭಿಮಾನಿಗಳು ಉಪಸ್ಥಿತರಿದ್ದರು. ದಾರುನ್ನೂರು ಜಿದ್ದಾ ಘಟಕದ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಅಡ್ಡೂರು ಕಾರ್ಯಕ್ರಮ ನಿರೂಪಿಸಿ ಜೊತೆ ಕಾರ್ಯದರ್ಶಿ ಜಾಸಿಮ್ ಕಲ್ಲಡ್ಕ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.