(www.vknews.in) : ಕೇರಳ ವಿಧಾನ ಸಭೆಯ ಒಂದನೇ ಕ್ಷೇತ್ರವಾಗಿರುವ ಮಂಜೇಶ್ವರ ವಿಧಾನ ಸಭಾ ಹಲವಾರು ವೈಶಿಷ್ಟ್ಯಗಳನ್ನು ತನ್ನಲ್ಲಿ ಹುದುಗಿಸಿಕೊಂಡೊರುವ ಐತಿಹಾಸಿಕ ಕ್ಷೇತ್ರ!
ಹತ್ತಿರದಲ್ಲೇ ಕರುನಾಡಿನ ಕನ್ನಡದ ತಂಗಾಳಿ ಬೀಸುತ್ತಿದ್ದರೆ ಇತ್ತ ಸಪ್ತ ಭಾಷೆಗಳನ್ನೂ ತನ್ನ ಆಡು ಭಾಷೆಯಾಗಿರಿಕೊಂಡಿರುವ ಮಾದರಿ ನಾಡಾಗಿದೆ ಮಂಜೇಶ್ವರ !!!
ಸರ್ವ ಜನ ಬಾಂಧವರ ನಡುವೆ ಅನ್ಯೋನ್ಯತೆ, ಪರಸ್ಪರ ಕೊಡುಕೊಳ್ಳುವಿಕೆ ಮಂಜೇಶ್ವರದ ಜನತೆಯ ದೊಡ್ಡ ಗುಣ. ವಿಶಾಲವಾಗಿ ಹರಡಿಕೊಂಡಿರುವ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿರುವ ಮಸೀದಿ, ಮಂದಿರ, ಚರ್ಚ್ ಗಳು ಈ ನಾಡಿನ ಭಾವೈಕ್ಯತೆಯನ್ನು ಎತ್ತಿ ಹೇಳುತ್ತಿವೆ.
ಕಳೆದ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಬಹುಮತದಿಂದ ಶಾಸಕರಾಗಿ ಆಯ್ಕೆಯಾಗಿರುವ ಎ.ಕೆ.ಎಂ.ಅಶ್ರಫ್ ಅಪ್ಪಟ ಕನ್ನಡ ಪ್ರೇಮಿ. ಕೇರಳ ವಿಧಾನ ಸಭೆಯ ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಇವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದರು.
ಸಾಮಾನ್ಯವಾಗಿ ಶಾಸಕರೆಂದರೆ ಅಷ್ಟು ಸುಲಭವಾಗಿ ಜನರ ಕೈಗೆ ಸಿಗುವುದು ಅಪರೂಪ. ಆದರೆ ಶಾಸಕ ಎ.ಕೆ.ಎಂ.ಅಶ್ರಫ್ ಇದಕ್ಕೆ ಭಿನ್ನ! ಜನರ ನಡುವೆ ತಾನೂ ಒಬ್ಬನಾಗಿರಲು ಬಯಸುವ ಸರಳ ಸಜ್ಜನಿಕೆಯ ಮಾದರಿ ವ್ಯಕ್ತಿತ್ವದ ಇವರು ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ಪ್ರಾಮಾಣಿಕ ಜನಪ್ರತಿನಿಧಿ. ಇಂದು ಈದುಲ್ ಅಝ್ಹಾ ಹಬ್ಬದ ಪ್ರಯುಕ್ತ ಅವರ ಮನೆಗೆ ಹೋದಾಗ ಅವರ ಸ್ನೇಹಮಯ ಒಡನಾಟ,ಪ್ರೀತಿ ತುಂಬಿದ ಮಾತು ಕಂಡು ಎಲ್ಲಾ ಜನಪ್ರತಿನಿಧಿಗಳು ಕೂಡ ಎ.ಕೆ.ಎಂ.ಅಶ್ರಫ್ ರಂತೆ ಇರಬೇಕೆಂದು ಅನಿಸದಿರಲಿಲ್ಲ.
ಮಂಜೇಶ್ವರ ಕಡಂಬಾರ್ ನಲ್ಲಿ ನಮ್ಮ ಮನೆ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಮನೆಯ ಹತ್ತಿರವೇ ಇರುವ ಕಾರಣ ಅವರ ಅಭಿವೃದ್ಧಿ ಕಾರ್ಯಗಳನ್ನು ಹತ್ತಿರದಿಂದ ತಿಳಿಯಲು ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಕೇರಳ ರಾಜ್ಯದ ಸಚಿವರಾಗಿ ಇನ್ನಷ್ಟು ಉಜ್ವಲ ರಾಜಕೀಯ ಭವಿಷ್ಯವುಂಟಾಗಲಿ ಎಂದು ಮನದುಂಬಿ ಹಾರೈಸುತ್ತಿದ್ದೇನೆ.
✍ ಕೆ.ಎ.ಅಬ್ದುಲ್ ಅಝೀಝ್ ಪುಣಚ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.