ಮಂಗಳೂರು(www.vknews.in):ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ವಿದ್ಯುತ್ ಶಾಕ್ ತಗಲಿ ನರಳಾಡುತಿದ್ದ ವೇಳೆ ತನ್ನ ಪ್ರಾಣದ ಹಂಗನ್ನು ತೊರೆದು ರಕ್ಷಿಸಿದ ಘಟನೆ ಉಳ್ಳಾಲ ತಾಲೂಕಿನ ಮುಡಿಪು ಇರಾ ಗ್ರಾಮದಲ್ಲಿ ನಡೆದಿದೆ. ಸರಕಾರಿ ಪ್ರಾಥಮಿಕ ಶಾಲೆ ಇರಾದಲ್ಲಿ ಕಲಿಯುತ್ತಿರುವ 5 ನೇ ತರಗತಿ ವಿದ್ಯಾರ್ಥಿನಿ ಶರಫೀಯ ಎಂಬ ಬಾಲಕಿ ವಿದ್ಯುತ್ ಸ್ಪರ್ಶಿಸಿ ನರಳಾಡುತಿದ್ದುನ್ನು, ಕಂಡ ಫಾತಿಮತುಲ್ ಅಶ್ಫಿಯಾ ತನ್ನ ಪ್ರಾಣವನ್ನು ಲೆಕ್ಕಿಸದೆ ಊಟದ ಬಟ್ಟಲಿನ ಮೂಲಕ ತನ್ನ ಗೆಳತಿಯ ಕೈಗೆ ಹೊಡೆದಿರುತ್ತಾಳೆ ಆ ಮೂಲಕ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದ ಬಾಲಕಿಯನ್ನು ರಕ್ಷಿಸಿದ್ದು, ಇರಾ ಗ್ರಾಮಕ್ಕೆ ಹೆಮ್ಮೆಯನ್ನು ತಂದಿರುತ್ತಾಳೆ. ಅಶ್ಫಿಯಾ ಇರಾ ಗ್ರಾಮದ ಮುಜಿಬ್ ರಹ್ಮಾನ್ ಮತ್ತು ಲುಬಾಬಾತ್ ದಂಪತಿಗಳ ಪುತ್ರಿ.ಇಂತಹ ಸಾಹಸಮೆರೆದ ಕುಮಾರಿ ಅಶ್ಫಿಯಾಳಿಗೆ ಸರ್ಕಾರವು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಬೇಕಾಗಿ ಇರಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.