(www.vknews.in) : ಪ್ರವಾದಿ ಇಬ್ರಾಹೀಮ್ (ಅ) ರವರು ಜೈಲಿನಲ್ಲಿ ಜೈಲಿನ ಇತರ ಖೈದಿಗಳೊಂದಿಗೆ ಬಹಳ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಅವರಿಗೆ ಅಲ್ಲಾಹನ ಬಗ್ಗೆ ಮತ್ತು ಸ್ವರ್ಗ ನರಕದ ಬಗ್ಗೆ ಆಗಾಗ್ಗೆ ತರಗತಿಗಳನ್ನು ತೆಗೆಯುತ್ತಿದ್ದರು. ಒಟ್ಟಿನಲ್ಲಿ ಹಝ್ರತ್ ಇಬ್ರಾಹೀಮರು ಅಲ್ಲಿ ಅವರಿಗೊಂದು ಸಮಯ ಪಾಸ್ ( TIME PASS) ಮಾಡುವ ಜೊತೆಗಾರನಾಗಿ ಬೆಳೆದರು.
ಪ್ರವಾದಿ ಇಬ್ರಾಹೀಮರ ಕೆಲವು ಪವಾಡಗಳನ್ನು ಕಣ್ಣಾರೆ ಕಂಡ ಜೈಲು ವಾಸಿಗಳಲ್ಲಿ ಒಬ್ಬನು, ಒಂದು ದಿನ ಅವರಲ್ಲಿ ಹೇಳಿದನು. “ನಾನು ಅರಬಿ ರಾಜ ವಂಶದಲ್ಲಿ ಜನಿಸಿದವನು. ನನ್ನದು ಒಂದು ಪ್ರತಿಷ್ಠಿತ ರಾಜ ಕುಟುಂಬ. ನಾವು ನಮ್ಮ ತಂದೆಗೆ ನಾಲ್ಕು ಮಕ್ಕಳು. ರಾಜನಾದ ತಂದೆಯಲ್ಲಿ ಮಕ್ಕಳು ನಾವು ಅಧಿಕಾರದ ವಿಷಯದಲ್ಲಿ ತರ್ಕ ಮಾಡಿದಾಗ ನಮ್ಮೆಲ್ಲರನ್ನೂ ಜೈಲಿಗೆ ಹಾಕಿದರು. ನಾನು ಈ ಜೈಲ್ಲಿನಲ್ಲಾದರೆ ಮತ್ತೆ ಒಬ್ಬನನ್ನು ಯಮನಿನಲ್ಲೂ ಉಳಿದ ಇಬ್ಬರನ್ನು ಬೇರೆ ಎಲ್ಲೋ ದೂರದ ಜೈಲಿನಲ್ಲಿ ಪರಸ್ಪರ ಸಂಪರ್ಕ ಮಾಡದಂತೆ ಬಂಧನ ಮಾಡಿದ್ದಾರೆ. ಆದ್ದರಿಂದ ನಾನು ಈಗ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ನಿಮಗೆ ನನ್ನ ಆ ಮೂರು ದೂರವಿರುವ ಸಹೋದರರನ್ನು ನನ್ನ ಬಳಿ ಹಾಜರು ಪಡಿಸಲು ಸಾಧ್ಯವಿದೆಯಾ?ಮಾಡುವುದಾದರೆ ಅದೊಂದು ದೊಡ್ಡ ಪವಾಡವಾಗಿ ಎಲ್ಲಾ ಜನರಿಗೆ ತಿಳಿಯುತ್ತದೆ” ಎಂದು. ಹಝ್ರತ್ ಇಬ್ರಾಹೀಮರು “ಅದಕ್ಕೇನು ತೊಂದರೆ? ಈಗಲೇ ಮಾಡಬಹುದು” ಎಂದು ಹೇಳಿ ಬಳಿಕ ಅವರು ಅಲ್ಲಾಹನಲ್ಲಿ ಈ ಖೈದಿಯ ಬೇಡಿಕೆಯನ್ನು ಮುಂದಿಟ್ಟರು. ತಡವಾಗದೆ ಇಬ್ಬರು ಅಲ್ಲಿ ಹಾಜರಾದರು. ಯಮನಿನಲ್ಲಿರುವ ಒಬ್ಬನು ಮಾತ್ರ ಹಾಜರಾಗಲಿಲ್ಲ.
ಒಟ್ಟಿನಲ್ಲಿ ಈ ಅದ್ಭುತ ಸಂಗತಿ ನಮ್ರೂದನ ಕಿವಿಗೆ ಮುಟ್ಟಿತು. ಕೂಡದೇ ಆ ಸ್ಥಳೀಯ ಜೈಲಿನಲ್ಲಿರುವ ಖೈದಿಯನ್ನು ಕರೆಯಿಸಿ ಕೇಳಿದರು. “ನಿನಗೆ ಈ ನಿನ್ನ ಎಷ್ಟೋ ದೂರದಲ್ಲಿ ಜೈಲಿನಲ್ಲಿರುವ ಇಬ್ಬರು ಸಹೋದರರನ್ನು ಇಲ್ಲಿಗೆ ತರುಸಿದ್ದು ಯಾರು? ಅವರು ಇಲ್ಲಿಗೆ ಹೇಗೆ ತಲುಪಿದರು?” ಆಗ ಆತ ಹೇಳಿದ. “ಅದು ಹಝ್ರತ್ ಇಬ್ರಾಹೀಮರು ದುಆ ಮಾಡಿದಾಗ ನಮ್ಮ ದೇವರು ಅಲ್ಲಾಹನು ತಂದದ್ದು” ಎಂದು.
ಕುಪಿತನಾದ ನಮ್ರೂದನು ಹಝ್ರತ್ ಇಬ್ರಾಹೀಮರನ್ನು ತನ್ನ ವಿಚಾರಣಾ ಕೊಠಡಿಗೆ ಹಾಜರು ಮಾಡಲು ನಿರ್ದೇಶಿಸಿದನು. ಸಭೆಯಲ್ಲಿ ಹಾಜರಾದ ಅವರಲ್ಲಿ ನಮ್ರೂದನು ಕೇಳಿದನು. “ನಿನಗೆ ನಿನ್ನ ಇಂದ್ರಜಾಲ ವಿಧ್ಯೆಯಲ್ಲಿ ಇಬ್ಬರನ್ನು ತರಿಸಲಿಕ್ಕೆ ಸಾಧ್ಯವಾಗಿದೆ ಎಂದಾದರೆ ಮತ್ತೊಬ್ಬನನ್ನು ಯಾಕೆ ಆಗಲಿಲ್ಲ?” ಆಗ ಹಝ್ರತ್ ಇಬ್ರಾಹೀಮರು ಹೇಳಿದರು. “ಅವನು ವರ್ಷಗಳ ಮೊದಲೇ ಮರಣಹೊಂದಿದ್ದಾನೆ. ಮತ್ತೆ ನಾನು ಎಲ್ಲಿಂದ ತರುವುದು? ” ಎಂದು. ನಮ್ರೂದನು ಹೇಳಿದನು. ” ನಿನ್ನ ಅಲ್ಲಾಹನಿಗೆ ಸತ್ತವನನ್ನು ಜೀವಂತಮಾಡಿ ಕೊಂಡುಬರುವ ಟ್ರಿಕ್ಸ್ ಇಲ್ಲವೇ? ಅವನಲ್ಲಿ ಹೇಳು. ನಮಗೊಮ್ಮೆ ಆ ದೃಶ್ಯ ನೋಡುವ” ಎಂದು.
ಪ್ರವಾದಿ ಇಬ್ರಾಹೀಮರು ಅಲ್ಲಾಹನಲ್ಲಿ ಈ ಬೇಡಿಕೆಯನ್ನು ಪೂರೈಸಲು ದುಆ ಮಾಡಿದರು. ಕೂಡಲೇ ಆ ಸಂಬಂಧ ನಿಯುಕ್ತರಾದ ಮಲಕೊಬ್ಬರಲ್ಲಿ ಆ ಮರಣ ಹೊಂದಿದ ವ್ಯಕ್ತಿಯ ಖಬರನ್ನು ಅಲ್ಲಿಂದ ಹಸ್ತಾಂತರ (REMOVE) ಮಾಡಿ ನಮ್ರೂದನು ಅರಮನೆಯ ಅಂಗಳದಲ್ಲಿ ತಂದಿಡಲು ಆಜ್ಞಾಪಿಸಿದನು. ಸುಬ್ಹಾನಲ್ಲಾಹ್! ನಿಮಿಷದಲ್ಲೇ ಖಬರ್ ಅಲ್ಲಿ ಹಾಜರಾಯಿತು. ಹಝ್ರತ್ ಇಬ್ರಾಹೀಮರು ನಮ್ರೂದನ ಸನ್ನಿಧಿಯಲ್ಲಿ, ಅ ಜೈಲು ವಾಸಿಗಳಾಗಿದ್ದ ಮೂವರು ಸಹೋದರರಲ್ಲಿ ಹೇಳಿದರು. “ಇದು ನಿಮ್ಮ ಸಹೋದರನ ಖಬ್ರ್. ಇನ್ನು ಏನು ಮಾಡಬೇಕು ಎಂದು ಹೇಳಿ?” ಆಗ ಅವರು ಹೇಳಿದರು. “ಚಕ್ರವರ್ತಿಯವರೇ.., ಹಝ್ರತ್ ಇಬ್ರಾಹೀಮರು ಹೇಳುವುದು ನಿಜವೆಂದಾದರೆ ನಮ್ಮ ಸಹೋದರನನ್ನು ಈ ಖಬರಿನಿಂದ ಹಯಾತ್ ಮಾಡಲಿ. ಆಗ ಎಲ್ಲರಿಗೂ ಸತ್ಯ ತಿಳಿಯುತ್ತದೆ ” ಎಂದು.
ಹಝ್ರತ್ ಇಬ್ರಾಹೀಮರು ಉಝು ಮಾಡಿ ಎರಡು ರಕಅತ್ ನಮಾಝ್ ಮಾಡಿ ಅಲ್ಲಾಹನಲ್ಲಿ ಇವರ ಬೇಡಿಕೆಯನ್ನು ಮುಂದಿಟ್ಟರು. ಕೂಡಲೇ ಖಬ್ರ್ ಎರಡು ಭಾಗವಾಗಿ ಒಳಗಿನಿಂದ ಒಬ್ಬರು ಬೆಂಕಿಯ ಜ್ವಾಲೆಯನ್ನು ಕೈಯಲ್ಲಿ ಹಿಡಿದುಕೊಂಡು “ಇದು ಅಲ್ಲಾಹನಲ್ಲಿ ವಿಶ್ವಾಸವಿಡದೆ ವಿಗ್ರಹಗಳನ್ನು ಆರಾಧಿಸುವವನಿಗೆ ಇರುವ ಶಿಕ್ಷೆ” ಎಂದು ಹೇಳುತ್ತಾ ಹೊರಬಂದನು.
ಇದನ್ನು ನೋಡಿ ಇಡೀ ಸಬೆಯೇ ಅಚ್ಚರಿಗೊಂಡಿತು. ಕೂಡಲೇ ನೂರಾರು ಜನ ಇಸ್ಲಾಮ್ ಸ್ವೀಕಾರ ಮಾಡಿದರು. ಕೋಪಗೊಂಡ ನಮ್ರೂದನು ಇಸ್ಲಾಮ್ ಸ್ವೀಕಾರ ಮಾಡಿದವರನ್ನು ಒಂದು ಕಡೆ ಮಲಗಿಸಿ ಅವರ ಮೇಲೆ ಬಹಳ ಭಾರವಿರುವ ಕಬ್ಬಿಣದ ದಿಣ್ಣೆಗಳನ್ನು ಇಟ್ಟು ಎಷ್ಟೋ ದಿನಗಳ ತನಕ ಭಾರಕೊಟ್ಟು ಶಿಕ್ಷಿಸಿದನು. ಆದರೆ ಅದು ಅವರಿಗೆ ಭಾರವಾಗದೆ ಹತ್ತಿಯಂತೆ ಹಗುರವಾಯಿತು. ಇದರಿಂದ ನಮ್ರೂದನ ಪ್ರೆಶರ್ ಮತ್ತೂ ಜಾಸ್ತಿಯಾಯಿತು. ಎಲ್ಲರನ್ನೂ ಬೆಂಕಿಗೆ ಹಾಕಿ ಸುಟ್ಟು ಬೂದಿ ಮಾಡಲು ನಿರ್ದೇಶಿಸಿದನು. ಸೇವಕರು ಹಾಗೆ ಮಾಡಿದರೂ ಬೂದಿಯಾದ ಅವರ ಶರೀರವು ಪುನಃ ಜೋಡಣೆಯಾಗಿ ರೂಹ್ ಮರಳಿ ಬಂತು.
ಸುಟ್ಟು ಬೂದಿಯಾದ ಎಲ್ಲರೂ ಮಾರನೆಯ ದಿನ ಪೇಟೆಯಲ್ಲಿ ಮೊದಲಿಗಿಂತ ಆರೋಗ್ಯವಾಗಿ ಸುತ್ತಾಡುವ ವಿಷಯ ನಮ್ರೂದನಿಗೆ ತಿಳಿಯಿತು. ನಮ್ರೂದನ ತಲೆಬಿಸಿ ಮತ್ತು ಟೆನ್ಶನ್ ಮತ್ತೂ ಜೋರಾಯಿತು. ಕೂಡಲೇ ಆತ ಅವರನ್ನೆಲ್ಲಾ ಹಿಡಿದು ಸರ್ಪ ಮತ್ತು ಇತರ ವಿಷಜಂತುಗಳಿರುವ ಜೈಲಿಗೆ ಹಾಕಲು ನಿರ್ದೇಶ ಮಾಡಿದನು. ಅಲ್ಲಿ ಅವರನ್ನು ಸುಮಾರು ನಲವತ್ತು ದಿನಗಳ ಕಾಲ ನೀರು, ಆಹಾರ ಕೊಡದೆ ಬಂಧನದಲ್ಲಿ ಇರಿಸಿದನು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಮುಂದುವರೆಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.