(www.vknews. in) ; ಪುತ್ತೂರು ನಗರ ಸಭೆಗೆ ನೋಮಿನೇಟ್ ಸದಸ್ಯರಾಗಿ ನೇಮಕಗೊಳಿಸಲು 5 ಜನರ ಹೆಸರನ್ನುಶಿಫಾರಸ್ಸು ಮಾಡಿ ಶಾಸಕ ಅಶೋಕ್ ಕುಮಾರ್ ರೈ ಯವರು ಪೌರಾಡಳಿತ ಸಚಿವರಿಗೆ ಪತ್ರ ಬರೆದಿದ್ದರು, ಶಾಸಕರ ಪತ್ರದ ಮೇರೆಗೆ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಗಳು ಈ ನೇಮಕಾತಿಯ ಬಗ್ಗೆ ವರದಿ ನೀಡಲು ದ ಕ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು,, ಜಿಲ್ಲಾಧಿಕಾರಿಗಳು ಶಾಸಕರು ಶಿಫಾರಸ್ಸುಮಾಡಿದ 5 ಜನರನ್ನು ಪುತ್ತೂರು ನಗರಸಭೆಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲು ಸರಕಾರದ ಕಾರ್ಯದರ್ಶಿಗಳಿಗೆ ಶಿಫ್ಫಾರಸ್ಸು ಮಾಡಿದ್ದಾರೆ.
ಆದರೆ ಇದೀಗ ಸರಕಾರ ನಗರ ಸಭೆಗೆ ಸದಸ್ಯರಾಗಿ ನೇಮಕಗೊಳಿಸಿ ಅದೇಶ ಹೊರಡಿಸಿದೆ, ಈ ಆದೇಶದ ಪಟ್ಟಿಯಲ್ಲಿ ರೋಷನ್ ರೈ ಬನ್ನೂರು ರವರ ಹೆಸರು ಮಾಯವಾಗಿದೆ.ಹೆಸರು ಮಾಯವಾಗಲು ಯಾರು ಕಾರಣ..? ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ರೋಷನ್ ರೈ ಯವರಿಗೆ ಈ ರೀತಿ ಅನ್ಯಾಯಮಾಡಿರುವುದು ಪುತ್ತೂರು ಕಾರ್ಯಕರ್ತರಲ್ಲಿ ವ್ಯಾಪಕ ಅಸಮಾದನ ಉಂಟಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.