ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ):ಜಿಲ್ಲೆಯಲ್ಲಿ ಒಂದೇ ದಿನ 73 ಪ್ರಕರಣಗಳು ದೃಢಪಟ್ಟಿವೆ. ಹೊಸದಾಗಿ ಪತ್ತೆಯಾದ 73 ಪ್ರಕರಣಗಳಲ್ಲಿ 33 ಮಂದಿ ಮಹಾರಾಷ್ಟ್ರದಿಂದ ಬಂದಿದ್ದರೆ, ಅದಕ್ಕೂ ಹೆಚ್ಚು 37 ಮಂದಿಗೆ ಯಾವ ಮೂಲದಿಂದ ಸೋಂಕು ಅಂಟಿದೆ ಎಂಬ ಮಾಹಿತಿಯೇ ಇಲ್ಲ. ಉಳಿದ ಮೂವರು ದುಬೈನಿಂದ ವಾಪಸ್ಸಾದ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಸೋಂಕಿತರಲ್ಲಿ 50 ಪುರುಷರು, 15 ಮಹಿಳೆಯರು ಹಾಗೂ ಎಂಟು ಜನ ಮಕ್ಕಳು ಸೇರಿದ್ದಾರೆ.ಇಂದಿನ ಪ್ರಕರಣದಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಒಟ್ಟು ಪ್ರಕರಣಗಳಲ್ಲಿ ಐದನೇ ಸ್ಥಾನದಲ್ಲಿವೆ. ಒಟ್ಟು ಪ್ರಕರಣಗಳಲ್ಲಿ ಪ್ರಸ್ತುತ 195 ಸಕ್ರಿಯ ಪ್ರಕರಣಗಳಿವೆ. ಉಳಿದ 64 ಮಂದಿ ಗುಣಮುಖರಾಗಿ ಮನೆಗೆ ತೆರಳಿದರೆ, ಒಬ್ಬರು ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 260ಕ್ಕೆ ಏರಿಕೆಯಾಗಿದೆ.ಮಹಾರಾಷ್ಟ್ರ ರಾಜ್ಯವೊಂದರಿಂದಲೇ ಆಗಮಿಸಿದ 193 ಮಂದಿ ನೋವೆಲ್ ಕೊರೋನಾ ವೈರಸ್ ತಗುಲಿದೆ. ದುಬೈನಿಂದ ಬಂದ 14, ದೋಹ ಕತಾರ್ ನಿಂದ ಬಂದ ಒಬ್ಬರು, ತೆಲಂಗಾಣದಿಂದ ಆಗಮಿಸಿದ 6, ಕೇರಳದಿಂದ ಬಂದ ಮೂವರು ಹಾಗೂ ಸ್ಥಳೀಯ 6 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದಿನ ಪಟ್ಟಿಯಲ್ಲಿ 37 ಮಂದಿಯ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ತಿಳಿಸಲಾಗಿದೆ.ಒಟ್ಟಾರೆ ಕೆಲವು ದಿನಗಳ ಹಿಂದೆ ಗ್ರೀನ್ ಝೂನ್ ಆಗಿದ್ದ ಉಡುಪಿ ರೆಡ್ ಝೂನ್ ತಲುಪಿದ್ದೂ ,ಇದೀಗ ರಾಜ್ಯಕ್ಕೆ ಮೊದಲ ಸ್ಥಾನಿ ಆಗುತ್ತಿದೆ ,ದಿನದಿಂದ ದಿನಕ್ಕೆ ಏರಿಕೆ ಪ್ರಮಾಣ ಕಾಣುತ್ತಿದ್ದೂ ,ಜನರು ಭಯ ಭೀತಿ ಗೊಂಡಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.