ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ಕೆ.ಸಿ.ಎಫ್ ಯು.ಎ.ಇ ಬ್ಲಡ್ ಸೈಬೋ ಇದರ ಅಧೀನದಲ್ಲಿ ನಡೆದ ” ರಕ್ತದಾನ ಜೀವದಾನ” ಎಂಬ ಘೋಷ್ಯವಾಕ್ಯದೊಂದಿಗೆ ಅಬುಧಾಬಿ ಕೆ.ಸಿ.ಎಫ್ ಝೋನ್ ನಡೆಸಿದ ಬೃಹತ್ ರಕ್ತದಾನ ಶಿಬಿರವು ಅಬುಧಾಬಿ ಖಾಲಿದಿಯ್ಯ ಮಾಲ್ ಸಮೀಪದ ಬ್ಲಡ್ ಬ್ಯಾಂಕ್ ಸೆಂಟರಿನಲ್ಲಿ ಇತ್ತೀಚೆಗೆ ನಡೆಯಿತು.
ಪ್ರಸುತ್ತ ಬ್ಲಡ್ ಸೈಬೋ ಕಾರ್ಯಕ್ರಮದಲ್ಲಿ ನೂರಮೂವತ್ತು ಸದಸ್ಯರು ರಕ್ತದಾನ ನೀಡುವ ಮೂಲಕ ಸರಿಸುಮಾರು ನೂರಐದು ಯೂನಿಟ್ ರಕ್ತ ಜಮಾವಣೆಗೊಂಡು ಬೆಳಿಗ್ಗೆ 9.ಘಂಟೆಗೆ ಅರಂಭಗೊಂಡ ರಕ್ತದಾನ ಶಿಬಿರ ಸಂಜೆ 4.ಘಂಟೆಗೆವರೆಗೆ ಅಭೂತಪೂರ್ವ ಯಶಸ್ವಿಗೊಂಡು ಸಮಾಪ್ತಿಗೊಂಡವು.
ಕಾರ್ಯಕ್ರಮದಲ್ಲಿ ಐ.ಎನ್.ಸಿ ಫಿನಾಸ್ಸಿಯಲ್ ಕಂಟ್ರೋಲರ್ ಬಹು!ಅಬ್ದುಲ್ ಹಮೀದ್ ಸಹದಿ,ಕೆ.ಸಿ.ಎಫ್ ಐ.ಎನ್.ಸಿ ಸಂಘಟನಾ ಕಾರ್ಯದರ್ಶಿ ಪಿ.ಎಂ.ಎಚ್ ಅಬ್ದುಲ್ ಹಮೀದ್ಈ ಶ್ವರಮಂಗಲ, ಐ.ಸಿ.ಎಫ್ ಯು.ಎ.ಇ ಕಾರ್ಯದರ್ಶಿ ಹಮೀದ್ ಪರಪ್ಪ,ಅರ್.ಎಸ್.ಸಿ ಅಬ್ದುಲ್ ಬಾರಿ,ಝೋನ್ ಅಧ್ಯಕ್ಷರಾದ ಬಹು!ಹಸೈನಾರ್ ಅಮಾನಿ ಅಜ್ಜಾವರ,ಕಾರ್ಯದರ್ಶಿ NK ಸಿದ್ದೀಕ್ ಅಳಿಕೆ ,ಬ್ಲಡ್ ಸೈಬೋ ಉಸ್ತವಾರಿ ಅಬ್ದುಲ್ ನವಾಝ್ ಕೋಟೆಕಾರ್ ಹಾಗು ಝೋನ್,ಸೆಕ್ಟರ್,ಯೂನಿಟ್ ಮಟ್ಟದ ನಾಯಕರು ಉಪಸ್ಥರಿದ್ದರು.
ಕೆ.ಸಿ.ಎಫ್ ಯು.ಎ.ಇ ರಾಷ್ಟ್ರದಲ್ಲಿ ಅನಿವಾಸಿ ಪ್ರವಾಸಿಗರ ಅತೀ ದೊಡ್ಡ ಧಾರ್ಮಿಕ ಹಾಗು ಸಾಮಾಜಿಕ ಸಂಘಟನೆಯಾಗಿದ್ದು ಅನಿವಾಸಿ ಕನ್ನಡಿಗರಿಗೆ ತನ್ನ ಐದು ವರ್ಷದಲ್ಲಿ ಸಾವಿರಾರು ರೀತಿಯ ಸಹಾಯ ಅಭಯ ಹಸ್ತವನ್ನು ನೀಡುತ್ತಿದ್ದು ಮತ್ತು ಕೋವಿಡ್-19 ಸಂದರ್ಭದಲ್ಲಿ ವೈರಸ್ಸಿಗೆ ತುತ್ತಾಗಿ,ಉದ್ಯೋಗ ಕಳೆದುಕೊಂಡ ನಿರೋದ್ಯೋಗಿಗಳಿಗೆ,ತಾಯಿನಾಡಿಗೆ ಪ್ರಯಾಣಿಸುವ ಪ್ರವಾಸಿಗಳಿಗೆ,ಕಳೆದ ರಂಜಾನ್ ತಿಂಗಳಲ್ಲಿ ಸಂಕಷ್ಟಕ್ಕೀಡಾದ ನೂರಾರು ಪ್ರವಾಸಿಗಳಿಗೆ ಕೆ.ಸಿ.ಎಫ್ ಯು.ಎ.ಇ ಹಲವಾರು ಸ್ವಂತಾನ ಯೋಜನೆಯ ಆಡಿಯಲ್ಲಿ ಆಹಾರ,ನೀರು,ಹಣ್ಣುಹಂಪಲು,ವಿಮಾನಯಾನದ ವ್ಯವಸ್ಥೆ,ರಂಜಾನ್ ಕಿಟ್,ಕೋವಿಡ್ ಕಿಟ್ ಮುಂತಾದ ಆಹಾರ ಸಾಮ್ರಾಗಿಗಳನ್ನು ನೀಡಿ ಸಹಕರಿಸಿದೆ.ಮುಂದಿನ ಬ್ಲಡ್ ಸೈಬೋ ಶಿಬಿರ ಅಕ್ಟೋಬರ್ ತಿಂಗಳ ತಾರೀಕು 23 ರಂದು ನಡೆಯಲಿದೆಂದು ಕೆ.ಸಿ.ಎಫ್ ಅಬುಧಾಬಿ ಬ್ಲಡ್ ಸೈಬೋ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.