(ವಿಶ್ವಕನ್ನಡಿಗ ನ್ಯೂಸ್) ಶಿವಮೊಗ್ಗ : ದೇಶದ ರಾಜದಾನಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 100 ರೂ. ಗಡಿ ದಾಟಿದ ಪೆಟ್ರೋಲ್ ದರ ಶಿವಮೊಗ್ಗದಲ್ಲಿ ಇಂದು ಶತಕ ಬಾರಿಸಿದೆ.
ಶಿವಮೊಗ್ಗದಲ್ಲಿ ಇದೀಗ ಪೆಟ್ರೋಲ್ ದರ 100.14 ರೂ. ಗಳಾಗಿದ್ದು, ಡಿಸೇಲ್ ಬೆಲೆ 92.87 ರೂ.ಗೆ ಬಂದು ತಲುಪಿದೆ. ಪವರ್ ಪೆಟ್ರೋಲ್ 103.69 ರೂ. ಟರ್ಬೋಜೆಟ್ 96.20 ರೂ. ಆಗಿದೆ ಎಂದು ವರದಿ ತಿಳಿಸಿದೆ.
ಮೇ ತಿಂಗಳಲ್ಲಿ ನೂರರ ಗಡಿ
ಜಿಲ್ಲೆಯಲ್ಲಿ ಮೇ 1ರಂದು ಪ್ರತಿ ಲೀಟರ್ ಪೆಟ್ರೋಲ್ಗೆ 94.6 ರೂ ಇತ್ತು. ಮೇ 5ರಂದು 95.15 ರೂ, ಮೇ 10ಕ್ಕೆ 95.95 ರೂ ಹಾಗೂ ಮೇ 15ಕ್ಕೆ 95.8 ರೂ. ಮೇ 20 ರಂದು 97.33 ರೂಪಾಯಿಗೆ ತಲುಪಿತ್ತು. ಮೇ 25ಕ್ಕೆ 97.94 ರೂ. ಮೇ 31 ರಂದು 99.03 ಪ್ರತಿ ಲೀಟರ್ಗೆ ತಲುಪಿತ್ತು.
ಪೈಸೆ ಲೆಕ್ಕದಲ್ಲಿ ಏರಿಕೆ
ಜೂ. 1ರಂದು 99.03 ರೂ. ಇದ್ದ ಪೆಟ್ರೋಲ್ ಬೆಲೆ ಪೈಸೆ ಪೈಸೆ ಲೆಕ್ಕದಲ್ಲಿ ಏರಿಕೆಯಾಗಿ ಶತಕ ಬಾರಿಸಿದೆ. ಜೂ.4ರಂದು 0.28ಪೈಸ ಹೆಚ್ಚಳವಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 99.31ರೂ ಗೆ ತಲುಪಿತ್ತು. ಜೂ 6ರಂದು 99.51ರೂ, ಜೂ.7ರಂದು 99.88 ರೂ.ಗೆ ತಲುಪಿತ್ತು. ಈಗ 0.26 ಪೈಸೆ ಹೆಚ್ಚಳವಾಗಿ ಶತಕದ ಗಡಿ ದಾಟಿದೆ. ಏರುತ್ತಲೆ ಇದೆ ದರ
ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ ದುಬಾರಿಯಾಗುತ್ತಿದೆ. ಕಳೆದ ವರ್ಷ ಪ್ರತಿ ಲೀಟರ್ ದರ 74.62 ರೂ. ಇತ್ತು. ಆರು ತಿಂಗಳ ಹಿಂದೆ 84.96 ರೂಗೆ ತಲುಪಿತ್ತು. ಮೂರು ತಿಂಗಳ ಹಿಂದೆ 91.03 ರೂಗೆ ಏರಿಕೆಯಾಯ್ತು. ಈಗ 100.14 ರೂ. ಗೆ ಏರಿಕೆಯಾಗಿದ್ದು, ವಾಹನ ಸವಾರರಿಗೆ ಆತಂಕ ಮೂಡಿಸಿದೆ.
ಸರ್ಕಾರದ ವಿರುದ್ಧ ಜನಾಕ್ರೋಶ
ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ವಿರುದ್ಧವೇ ಪ್ರತಿಭಟನೆ ಮಾಡಿ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ 100 ರೂ. ಗಡಿ ದಾಟಿದರೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇದರಿಂದ ಯಾವ ಸರ್ಕಾರ ಬಂದರೂ ಬೆಲೆ ಏರಿಕೆಗೆ ಕಡಿವಾಣ ಹಾಕುವುದಿಲ್ಲವೆಂಬುದು ಸ್ಪಷ್ಟ ಎಂದು ಜನಸಾಮಾನ್ಯರು ಕಿಡಿಕಾರಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.