ಕೋಲಾರ (ವಿಶ್ವಕನ್ನಡಿಗ ನ್ಯೂಸ್):– ಜಿಲ್ಲೆಯಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದ್ದು , ಇನ್ನೂ ಮುಂದುವರೆದಿದೆ. ನಿರಂತರ ಬಿಟ್ಟೂಬಿ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ , ಕುಂಟೆಗಳು , ಹಳ್ಳಗಳಲ್ಲಿ ನೀರು ಹರಿಯುತ್ತಿದೆ. ಇಡೀ ವಾತಾವರಣ ಹಚ್ಚ ಹಸಿರಿನಿಂದ ಕೂಡಿದ್ದು , ಮಲೆನಾಡನ್ನೂ ಮೀರಿಸುವಂತಹ ಕಣ್ಮನ ಸೆಳೆಯುವ ವಾತಾವರಣ ನಿರ್ಮಾಣವಾಗಿದೆ.
2021 ರ ಜನವರಿ 1 ರಿಂದ ಜುಲೈ 15 ರವರೆಗೆ ವಾಡಿಕೆಯ 214.2 ಮಿಮೀ ಮಳೆಯ ಬದಲು 340.1 ಮಿಮೀ ಮಳೆ ಸುರಿದಿದ್ದು , ವಾಡಿಕೆಗಿಂತ 125 ಮಿಮೀ ಮಳೆ ಹೆಚ್ಚಿಗೆ ಸುರಿದಿದೆ. ಮಳೆಗಾಲ ಆರಂಭದ ಜೂನ್ 1 ರಿಂದ ಜುಲೈ 15 ರವರೆಗೆ ವಾಡಿಕೆಯ 97 ಮಿಮೀ ಮಳೆಯ ಬದಲು 180.5 ಮಿಮೀ ಮಳೆ ಸುರಿದಿದೆ.
ಜುಲೈ 1 ರಿಂದ 15 ರವರೆಗೆ ಕಳೆದ 15 ದಿನಗಳಲ್ಲಿ ವಾಡಿಕೆಯ 31.5 ಮಿಮೀ ಮಳಯ ಬದಲಾಗಿ 107.4 ಮಿಮೀ ಮಳೆ ಸುರಿದಿದೆ . ಒಟ್ಟಿನಲ್ಲಿ ಈವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ. ಬೆಳಗಳಿಗೆ ಆತಂಕ , ಜನಜೀವನ ಅಸ್ತವ್ಯಸ್ತ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರಿನ ಬೆಳಗಳು ಹಳದಿ ಬಣ್ಣಕ್ಕೆ ತಿರುಗುವ ಆತಂಕ ಎದುರಾಗಿದೆ.
ಜಿಲ್ಲೆಯ ಕೋಲಾರ , ಮಾಲೂರು , ಶ್ರೀನಿವಾಸಪುರ ತಾಲೂಕುಗಳಲ್ಲಿ ಯತೇಚ್ಚವಾಗಿ ಮಳೆಯಾಗಿದೆ. ದೇಶದಾದ್ಯಂತ ಮುಂಗಾರುಮಳ ಜುಲೈ 13 ರಿಂದ ಪ್ರಾರಂಭವಾಗಿದ್ದು ಮುಂದಿನ ಐದು ದಿನಗಳಲ್ಲಿ ಜಿಲ್ಲಾದ್ಯಂ ಹಗುರದಿಂದ ಸಾಧಾರಣ ಮಳೆಯಾಗುಮ್ಮ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ರೀತಿಯ ಮಳೆ ಇದೇ ರೀತಿ ಮುಂದುವರೆದರೆ ಬೆಳೆಗಳ ಎಲೆಗಳು ಹಳದಿ ರ್ವತಿ – ಕ್ಕೆ ತಿರುಗಿ , ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ಹಾವಳಿ ಹೆಚ್ಚಾಗಿ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ.
ಮುಂದಿನ ದಿನಗಳಲ್ಲಿ ಮಳೆ ಸಂಭವಿಸುವುದರ ಪರಿಣಾಮವಾಗಿ ರೈತರು ತಮ್ಮ ಕೃಷಿ ಚಟುವಟಿಕೆಗಳಾದ , ಬಿತ್ತನೆ ಮಾಡುವುದು , ಗೊಬ್ಬರ ನೀಡುವುದು ಹಾಗು ರೋಗ ಹಾಗೂ ಕೀಟನಾಶಕಗಳ ಸಿಂಪರಣೆಯನ್ನು ಮುಂದೂಡಬೇಕೆಂದು ಕೃಷಿ ಹವಾಮಾನ ತಜ್ಞ ಶ್ರೀಮತಿ ಸ್ವಾತಿ ಜಿ.ಆರ್ . ಜಿಲ್ಲಾ ಕೃಷಿ ಹವಾಮಾನ ಘಟಕ , ಐ.ಸಿ.ಎ.ಆರ್ . ಕೃಷಿ ವಿಜ್ಞಾನ ಕೇಂದ್ರ , ಟಮಕ , ಕೋಲಾರ ಅವರು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.