ಜುಬೈಲ್(ವಿಶ್ವಕನ್ನಡಿಗ ನ್ಯೂಸ್): ಅನಿವಾಸಿ ಕನ್ನಡಿಗರಿಗೆ ಸಾಂತ್ವನ ಕಾರ್ಯದಲ್ಲಿ ಸದಾ ಸಮಯ ಮುಂಚೂನಿಯಲ್ಲಿರುವ ಕೆ.ಸಿ.ಎಫ್ ಈ ಭಾರಿ ರಕ್ತ ದಾನಿಗಳಾಗಿ ರೋಗಿಗಳಿಗೆ ಆಸರೆಯಾಗಿದ್ದಾರೆ.
ಜುಬೈಲ್, ದಮ್ಮಾಮ್ ಹಾಗು ಸೌದಿ ಅರೇಬಿಯಾದ ಯಾವ ಸ್ಥಳದಲ್ಲಿ ಬೇಕಾದರೂ ರಕ್ತ ಹಾಗು ಇನ್ನಿತರ ಸಾಂತ್ವನ ಕಾರ್ಯದಲ್ಲಿ ಕೆ.ಸಿ.ಎಫ್ ಬಲಿಷ್ಟ ತಂಡವೊಂದನ್ನು ಕಟ್ಟಿ ಕಷ್ಟದಲ್ಲಿರುವ ಗಲ್ಫ್ ಕನ್ನಡಿಗರ ಕನ್ನಿರೊರಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಕಳೆದ ಕೆಲವು ತಿಂಗಳುಗಳಿಂದ ಕೋವಿಡ್ ಹಾಗು ಇನ್ನಿತರ ರೋಗದಲ್ಲಿರುವ ರೋಗಿಗಳಿಗೆ ರಕ್ತ ಆವಶ್ಯಕತೆ ಕೋರಿ ಬಂದಾಗ ಜುಬೈಲ್ ಸಿಟಿ ಸೆಕ್ಟರ್ ಸಾಂತ್ವನ ತಂಡ ಕೂಡಲೆ ಸ್ಪಂದಿಸಿ ರಕ್ತದಾನ ಮಾಡಿ ಸ್ಪಂದಿಸುತ್ತ ಬಂದಿದೆ. ಪ್ರತ್ಯೇಕವಾಗಿ ಕಳೆದ ತಿಂಗಳು ಬಹಳ ಕಡಿಮೆ ಸಿಗುವ O ನೆಗಟೀವ್ ರಕ್ತವನ್ನು ಕೂಡಲೆ ವ್ಯವಸ್ಥೆಮಾಡಿ ದಾನ ಮಾಡಲಾಯುತು.
ಈ ಒಂದು ವ್ಯತ್ಯಸ್ಥ ಕಾರ್ಯಚರಣೆಯಿಂದ ಆಸ್ಪತ್ರೆ ಸಿಬ್ಬಂಧಿಗಳು ಹಾಗು ರೋಗಿಯ ಕುಟುಂಬಸ್ಥರು ಬ್ಲಡ್ ಸೈಬೋ ತಂಡವನ್ನು ಶ್ಲಾಘಿಸಿದ್ದಾರೆ. ಹಾಗು ಆಸ್ಪತ್ರೆಯ ವತಿಯಿಂದ ಅಭಿನಂಧನಾ ಪತ್ರವನ್ನು ನೀಡಿ ಸನ್ಮಾನಿಸಿದೆ. ಈ ಸಂಧರ್ಭದಲ್ಲಿ ದಮ್ಮಾಮ್ ಝೋನ್ ಅಧ್ಯಕ್ಷರಾದ ರಶೀದ್ ಸಖಾಫಿ, ಝೋನ್ ಸಾಂತ್ವನ ಕನ್ವೀನರ್ ಭಾಷಾ ಗಂಗಾವಳಿ, ಹಾಗು ಜುಬೈಲ್ ಸಿಟಿ ಸೆಕ್ಟರ್ ಸಾಂತ್ವನ ತಂಡದ ನಾಯಕ ನೌಫಲ್ ಮುಲ್ಕಿ ಉಪಸ್ಥಿತರಿದ್ದರು.
ಹಾಗು ಈ ಒಂದು ಉತ್ತಮ ಕಾರ್ಯದಲ್ಲಿ ಶ್ರಮಿಸಿದ ಜುಬೈಲ್ ಸಿಟಿ ಸೆಕ್ಟರ್ ಸಾಂತ್ವನ ತಂಡವನ್ನು ಆಸ್ಪತ್ರೆಯ ಸಿಬ್ಬಂದಿಗಳು ಹಾಗು ಕೆ.ಸಿ.ಎಫ್ ದಮ್ಮಾಮ್ ಝೋನ್ ಸಮಿತಿ ವತಿಯಿಂದ ಕ್ರತಙ್ನತೆಯನ್ನು ಸಲ್ಲಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.