ಕೇಂದ್ರ ಸರಕಾರ ಇಂತವರಿಗೆ ಸರಿಯಾದ ಶಿಕ್ಷೆ ನೀಡಬೇಕು..
ಕೇರಳ (ವಿಶ್ವ ಕನ್ನಡಿಗ ನ್ಯೂಸ್) : ಬಿಜೆಪಿ ವಕ್ತಾರೆ ಮಾಡಿದ ಪ್ರವಾದಿ ನಿಂದನೆಯು ಮುಸ್ಲಿಂ ಸಮಾಜಕ್ಕೆ ಅತ್ಯಧಿಕ ನೋವು ತಂದಿದೆ ಎಂದು ಮುಸ್ಲಿಂ ಲೀಗ್ ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಸಾದಿಖಲಿ ಶಿಹಾಬ್ ತಂಙಳ್ ಹೇಳಿದ್ದಾರೆ. ಈ ರೀತಿಯ ಪ್ರಕರಣಗಳನ್ನು ಕಾನೂನುಬದ್ಧವಾಗಿ ಎದುರಿಸಲು ಕೇಂದ್ರ ಸರ್ಕಾರ ಸಿದ್ಧವಾಗಬೇಕು ಎಂದು ಅವರು ಆಗ್ರಹಿಸಿದರು.
ಇಂತಹ ಸಂದರ್ಭಗಳು ಮುಂದೆ ಮರುಕಳಿಸಬಾರದು. ಭಾರತದ ಪರಂಪರೆಗೂ ಭಾರತೀಯ ಪ್ರಜಾಪ್ರಭುತ್ವಕ್ಕೂ ದೊಡ್ಡ ಕಳಂಕವನ್ನು ತರುವ ಇಂತಹ ಚಟುವಟಿಕೆಗಳನ್ನು ನಡೆಸುತ್ತಿರುವವರಿಗೆ ಸರಿಯಾದ ಶಿಕ್ಷೆಯನ್ನು ನೀಡಬೇಕೆಂದು ಸಾದಿಖಲಿ ಶಿಹಾಬ್ ತಂಙಳ್ ಒತ್ತಾಯಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.