ಬೆಂಗಳೂರು (www.vknews.in) : ಹೆಮ್ಮೆಯ ತಿಂಗಳಿಗೆ ಅನುಗುಣವಾಗಿ ಮತ್ತು LGBTQIA+ ಸಮುದಾಯಕ್ಕೆ ಬೆಂಬಲ ವಿಸ್ತರಿಸಲು ಜಿಇ, ಭಾರತದ ತನ್ನ 10 ಕ್ಯಾಂಪಸ್ಗಳಾದ್ಯಂತ ಹೆಮ್ಮೆಯ ನಡಿಗೆ ಆಯೋಜಿಸಿತ್ತು. 1500 ಗಿಂತ ಹೆಚ್ಚಿನ ಉದ್ಯೋಗಿಗಳು, ಸಹಯೋಗಿಗಳು ಹಾಗೂ ಸಮುದಾಯದ ಸದಸ್ಯರು ವಿವಿಧ ಪ್ರದೇಶಗಳಾದ್ಯಂತ ಏರ್ಪಡಿಸಲಾಗಿದ್ದ ನಡಿಗೆಯಲ್ಲಿ ಭಾಗವಹಿಸಿದ್ದರು. ಈ ಹೆಮ್ಮೆಯ ನಡಿಗೆಗಳನ್ನು ಜಿಇನ ವಿವಿಧ ಪ್ರದೇಶಗಳು, ಅಂದರೆ, ಬೆಂಗಳೂರು (ಕರ್ನಾಟಕ), ಸಾನಂದ್(ಗುಜರಾತ್), ದುರ್ಗಾಪೂರ್(ಪಶ್ಚಿಮ ಬಂಗಾಳ), ದಾಬಸ್ಪೇಟೆ(ಕರ್ನಾಟಕ), ಮನೇಜಾ(ಗುಜರಾತ್), ನೋಯ್ಡಾ(ಉತ್ತರ ಪ್ರದೇಶ), ಪುಣೆ(ಮಹಾರಾಷ್ಟ್ರ) ಮತ್ತು ಚೆನ್ನೈ(ತಮಿಳುನಾಡು) ಮುಂತಾದೆಡೆಗಳಲ್ಲಿ ಆಯೋಜಿಸಲಾಗಿತ್ತು. ವಿವಿಧ ಕ್ಯಾಂಪಸ್ಗಳಲ್ಲಿ ಜಿಇನ ಹಿರಿಯ ನಾಯಕರುಗಳೂ ಕೂಡ ಹೆಮ್ಮೆಯ ನಡಿಗೆಯಲ್ಲಿ ಭಾಗವಹಿಸಿದ್ದರು.
ಜಿಇ ದಕ್ಷಿಣ ಏಶ್ಯಾದ ಅಧ್ಯಕ್ಷ ಮಹೇಶ್ ಪಾಲಾಶಿಕರ್, “ಇಂದು ದೇಶಾದ್ಯಂತ ಜಿಇನಲ್ಲಿ ಏರ್ಪಡುತ್ತಿರುವ ಹೆಮ್ಮೆಯ ಆಚರಣೆಗಳಲ್ಲಿ ನಮ್ಮ ನಾಯಕರುಗಳು ಹಾಗೂ ಉದ್ಯೋಗಿಗಳು ಒಮ್ಮತದಿಂದ ಒಗ್ಗೂಡಿರುವುದನ್ನು ನೋಡಿ ನಾನು ವಿನೀತನಾಗಿದ್ದೇನೆ. ಸೃಜನಶೀಲತೆಗೆ ನಿಜವಾದ ಅಡಿಪಾಯವಾದ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯು ನಾವು ಮಾಡುವ ಎಲ್ಲಾ ಕೆಲಸಗಳ ಕೇಂದ್ರಭಾಗದಲ್ಲಿರಬೇಕೆಂದು ಜಿಇನಲ್ಲಿ ನಾವು ನಂಬಿದ್ದೇವೆ. ನಮ್ಮದು ಅತ್ಯಂತ ವೈವಿಧ್ಯಮಯವಾದ ಪರಿಸರ ಮತ್ತು ಅತ್ಯಂತ ಒಳಗೊಳ್ಳುವಂತಹ ಸಂಸ್ಕೃತಿಯಾಗಿದೆ ಮತ್ತು ಭವಿಷ್ಯತ್ತಿನಲ್ಲಿ ಈ ರೀತಿಯ ಉಪಕ್ರಮಗಳನ್ನು ಮುಂದುವರೆಸಿಕೊಂಡು ಹೋಗಿ ದೀರ್ಘಕಾಲ ಉಳಿಯುವಂತಹ ಪ್ರಭಾವವನ್ನು ಏರ್ಪಡಿಸುತ್ತೇವೆಂದು ನಾವು ಆಶಿಸುತ್ತಿದ್ದೇವೆ.”ಎಂದು ಹೇಳಿದರು.
ಜಿಇ ದಕ್ಷಿಣ ಏಶ್ಯಾದ ಸಿಟಿಒ ಹಾಗೂ ಜಿಇ ಇಂಡಿಯಾ ಟೆಕ್ನಾಲಜಿ ಸೆಂಟರ್ ನ ಸಿಇಒ ಅಲೋಕ್ ನಂದಾ ಬೆಂಗಳೂರಿನ ಜಿಇನ ಜಾನ್ ಎಫ್ವೆಲ್ಶ್ ಟೆಕ್ನಾಲಜಿ ಸೆಂಟರ್ನಲ್ಲಿ ನಡೆದ ಹೆಮ್ಮೆಯ ನಡಿಗೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, “ವೈವಿಧ್ಯತೆ ಮತ್ತು ಒಳಗೊಳ್ಳುವಿಕೆ ಜೀವನವಿಧಾನವಾಗಬೇಕು… ಜಿಇನ ಇಂಡಿಯಾ ಟೆಕ್ನಾಲಜಿ ಸೆಂಟರ್ನಲ್ಲಿ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯ ತಂಡವನ್ನು WOW (Way of Work)(ಕೆಲಸದ ವಿಧಾನ) ಎಂದು ಕರೆಯಲಾಗುತ್ತದೆ. ಇದು, ವಿವಿಧ ಜಿಇ ವ್ಯಾಪಾರಗಳು, ವೃತ್ತಿ ಮಟ್ಟಗಳು, ಲಿಂಗಗಳು, ಭೌಗೋಳಿಕ ಗುಂಪುಗಳಿಂದ ಬಂದ ಉತ್ಸಾಹೀ ತಂಡವಾಗಿದ್ದು ಪ್ರತಿಯೊಬ್ಬರಿಗೂ ಒಳಗೊಳ್ಳುವ ಕಾರ್ಯಸ್ಥಳವನ್ನು ನಿರ್ಮಾಣ ಮಾಡಲು ಮತ್ತು ಪ್ರತಿದಿನ ಕೆಲಸ ಮಾಡುವುದಕ್ಕೆ ಅವರ ನಿಜವಾದ ಮತ್ತು ಅತ್ಯುತ್ತಮವಾದ ಸಾಮರ್ಥ್ಯಗಳನ್ನು ಹೊರತರಲು ಕೌತುಕಗೊಂಡಿದ್ದಾರೆ. ಕಳೆದ 3 ವರ್ಷಗಳಿಂದ ಜಿಇಐಟಿಸಿದ ಪ್ರೈಡ್ ಅಲಯನ್ಸ್ ತಂಡವು ಒಳಗೊಳ್ಳುವಂತಹ ಪದ್ಧತಿಗಳನ್ನು ಸೃಷ್ಟಿಸುವ ಮತ್ತು ಉಳಿಸಿಕೊಳ್ಳುವ, ಒಳಗೊಳ್ಳುವಿಕೆ ನೀತಿಗಳನ್ನು ರಚಿಸುವ, ಒಳಗೊಳ್ಳುವಿಕೆ ಮೂಲಸೌಕರ್ಯಗಳನ್ನು ಸ್ಥಾಪಿಸುವ ಮತ್ತು ಒಳಗೊಳ್ಳುವ ಮನಸ್ಥಿತಿಗಳನ್ನು ನಿರ್ಮಾಣ ಮಾಡುವ ಕೆಲಸಗಳ ಮೇಲೆ ಗಮನಕೇಂದ್ರೀಕರಣದೊಂದಿಗೆ ಹಲವಾರು ಹೊಸ ಪದ್ಧತಿಗಳನ್ನು ಜಾರಿಗೆ ತಂದಿದೆ. ಜಿಇಐಟಿಸಿದ ಪ್ರೈಡ್ ಅಲಯನ್ಸ್ ಒಂದು ಪಯಣ-ನಾವು ಇದರಲ್ಲಿ ಸ್ವಲ್ಪ ದೂರ ಮಾತ್ರ ಕ್ರಮಿಸಿದ್ದೇವೆ ಮತ್ತು ಈ ಕಾರ್ಯಜಾಲವನ್ನು ಕೇವಲ ಜಿಇಐಟಿಸಿ ಉದ್ಯೋಗಿಗಳಿಗೆ ಮಾತ್ರವಲ್ಲದೆ ಇಡೀ ಸಮುದಾಯಕ್ಕೆ ಪ್ರಭಾವ ಬೀರಿ ವಿಸ್ತರಿಸುವುದನ್ನು ಮುಂದುವರಿಸಲು ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ.”ಎಂದು ಹೇಳಿದರು.
ಜಿಇ ಇಂಡಿಯಾ ಟೆಕ್ನಾಲಜಿ ಸೆಂಟರ್ ನಿಯಮಿತವಾಗಿ ಐಉಃಖಿಕಿ+ ಗಮನಕೇಂದ್ರಿತ ಉದ್ಯೋಗಮೇಳಗಳಲ್ಲಿ ಭಾಗವಹಿಸುತ್ತದೆ ಮತ್ತು ಅಭ್ಯರ್ಥಿಗಳಿಗೆ ಯಶಸ್ವೀ ಆಫರ್ಗಳನ್ನೂ ನೀಡಿದೆ. ಅನುಮೋದಿತ ಪ್ರತಿಭಾ ಸ್ವಾಧೀನ ಭಾಗೀದಾರನಾಗಿ ಅದು LGBTQ+ ಒಳಗೊಳ್ಳುವಿಕೆ ಕೇಂದ್ರಿತ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ತನ್ನ ಎಲ್ಲಾ ಬಾಹ್ಯ ನೇಮಕಾತಿ ಚಟುವಟಿಕೆಗಳಲ್ಲಿ ಉದ್ದೇಶಪೂರ್ವಕವಾಗಿ ಒಳಗೊಳ್ಳುವಿಕೆಯನ್ನು ತಂದಿದೆ. ಎಲ್ಲಾ ಲಿಂಗದವರಿಗೂ ಸಮಾನವಾದ ಮತ್ತು ಸುರಕ್ಷಿತವಾದ ಕಾರ್ಯಪರಿಸರವನ್ನು ಖಾತರಿಪಡಿಸಲು, ಸ್ಥಳದಲ್ಲಿ ಅನೇಕ ಒಳಗೊಳ್ಳುವಿಕೆ ಹಾಗೂ ವೈವಿಧ್ಯತಾ ಬದ್ಧತೆಗಳಿದ್ದು ಇವುಗಳನ್ನು ಲಿಂಗ, ವೈಕಲ್ಯ ಬೆಂಬಲ ಕಾರ್ಯಜಾಲ, ಮತ್ತು ಪ್ರೈಡ್ ಅಲಯನ್ಸ್ ಆಗಿ ವರ್ಗೀಕರಿಸ ಬಹುದಾಗಿದೆ.
ಒಳಗೊಳ್ಳುವಿಕೆಯನ್ನು ತಂದಿದೆ. ಎಲ್ಲಾ ಲಿಂಗದವರಿಗೂ ಸಮಾನವಾದ ಮತ್ತು ಸುರಕ್ಷಿತವಾದ ಕಾರ್ಯಪರಿಸರವನ್ನು ಖಾತರಿಪಡಿಸಲು, ಸ್ಥಳದಲ್ಲಿ ಅನೇಕ ಒಳಗೊಳ್ಳುವಿಕೆ ಹಾಗೂ ವೈವಿಧ್ಯತಾ ಬದ್ಧತೆಗಳಿದ್ದು ಇವುಗಳನ್ನು ಲಿಂಗ, ವೈಕಲ್ಯ ಬೆಂಬಲ ಕಾರ್ಯಜಾಲ, ಮತ್ತು ಪ್ರೈಡ್ ಅಲಯನ್ಸ್ ಆಗಿ ವರ್ಗೀಕರಿಸ ಬಹುದಾಗಿದೆ.
ತನ್ನ ಪ್ರೈಡ್ ಅಲಯನ್ಸ್ನ ಭಾಗವಾಗಿ ಜಿಇ, ಲಿಂಗ ಧನಾತ್ಮಕತೆಯನ್ನು ಅಳವಡಿಸಿಕೊಳ್ಳಲು ಮತ್ತು ಒಳಗೊಳ್ಳುವಂತಹ ಉದ್ಯೋಗಸ್ಥಳವನ್ನು ಸೃಷ್ಟಿಸಲು ವಿವಿಧ ಉಪಕ್ರಮಗಳನ್ನು ಹೊಂದಿದೆ. ಜಿಇ ಪ್ರೈಡ್ ಅಲಯನ್ಸ್ ಸಮುದಾಯವು, ನೀತಿಗಳು, ಪದ್ಧತಿಗಳು, ಮೂಲಸೌಕರ್ಯ ಮತ್ತು ಮನಸ್ಥಿತಿಗಳ ಮೇಲೆ ಪ್ರಭಾವ ಬೀರುವ ಮೂಲಕ ಒಳಗೊಳ್ಳುವಿಕೆ, ವೈವಿಧ್ಯತೆ, ಮತ್ತು ಸಮಾನತೆಯನ್ನು ಮುನ್ನಡೆಸುತ್ತಿದೆ. ಪ್ರಸ್ತುತ ಜಿಇ LGBTQIA+ ಸಮುದಾಯಕ್ಕೆ ಬೆಂಬಲ ಒದಗಿಸಲು ಕೆಳಕಂಡ ಉಪಕ್ರಮಗಳನ್ನು ಅನುಸರಿಸುತ್ತಿದೆ ಎಲ್ಲಾ ನಾಯಕರುಗಳಿಗೂ ಕಾರ್ಯಾಗಾರಗಳ ಮೂಲಕ LGBTQIA+ ಸೂಕ್ಷ್ಮತೆ ಮುಖಾಮುಖಿ ಮತ್ತು ವರ್ಚುವಲ್ ರೂಪದಲ್ಲಿ ಸೂಕ್ಷ್ಮತೆ, ಜಾಗೃತಿ ನಿರ್ಮಾಣ ಮತ್ತು ಸಹಯೋಗಿ ಸೇರ್ಪಡೆ ಅಧಿವೇಶನಗಳನ್ನು ನಿಯಮಿತವಾಗಿ ನಡೆಸಲಾಗುತ್ತಿರುತ್ತದೆ. ಈ ಅಧಿವೇಶನಗಳು ಎಲ್ಲಾ ಉದ್ಯೋಗಿಗಳಿಗೂ ಅನ್ವಯವಾಗಿದ್ದು ವಿಶೇಷವಾಗಿ ಹಿರಿಯ ನಾಯಕತ್ವ, ಜನರ ನಾಯಕರು ಮತ್ತು ಮಾನವ ಸಂಪನ್ಮೂಲ ತಂಡಗಳಿಗೆ ತರಬೇತಿಯ ಮೇಲೆ ಗಮನಕೇಂದ್ರೀಕರಿಸುತ್ತದೆ. ಈ ಅಧಿವೇಶನಗಳನ್ನು ನಾವು ನಮ್ಮ ಮಾರಾಟಗಾರರ ಪಾಲುದಾರರಿಗೂ ವಿಸ್ತರಿಸಿದ್ದೇವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.