ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕೆ ಸಿ ಎಫ್ ಒಮಾನ್ ಮಸ್ಕತ್ ಝೋನ್ ವತಿಯಿಂದ ಝೋನ್ ಅಸೆಂಬ್ಲಿ ಕಾರ್ಯಗಾರವು ಶಫೀಕ್ ಮಾರ್ನಬೈಲ್ ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಅಯ್ಯೂಬ್ ಕೋಡಿಯವರ ನಿವಾಸದಲ್ಲಿ ನಡೆಯಿತು.
KCF ಒಮಾನ್ ಅಧ್ಯಕ್ಷರಾದ ಅಯ್ಯೂಬ್ ಕೋಡಿಯವರು ಕಾರ್ಯಕ್ರಮವನ್ನು ಉಧ್ಘಾಟಿಸಿದರು. KCF ಒಮಾನ್ ಸಂಘಟನಾಧ್ಯಕ್ಷರಾದ ಸೈಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ರವರು ಝೋನ್ ಹಾಗೂ ಸೆಕ್ಟರ್ ಪದಾಧಿಕಾರಿಗಳಿಗೆ ತಮ್ಮ ಜವಾಬ್ಧಾರಿಯ ಕುರಿತು ಅರಿವು ಮೂಡಿಸಲು ಹಾಗೂ ಇನ್ನಿತರ ವಿಷಯಗಳ ಬಗ್ಗೆ ತರಗತಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ನಾಯಕರುಗಳಾದ ಆರಿಫ್ ಕೋಡಿ, ಇಬ್ರಾಹಿಂ ಹಾಜಿ ಆತ್ರಾಡಿ, ಹಂಝ ಹಾಜಿ ಕನ್ನಂಗಾರ್, ಝೋನ್ ನಾಯಕರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಲತೀಫ್ ಮಂಜೇಶ್ವರವರು ಸ್ವಾಗತಿಸಿ ಶರೀಫ್ ರವರು ವಂಧಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.