ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ಪರವಾನಿಗೆಯಿಲ್ಲದೆ ಹಜ್ ನಿರ್ವಹಿಸಿದರೆ ಸುಮಾರು ಎರಡು ಲಕ್ಷ ರೂಪಾಯಿ(10,000 ರಿಯಾಲ್) ದಂಡವನ್ನು ವಿಧಿಸಲಾಗುವುದು ಎಂದು ಸೌದಿ ಅರೇಬಿಯಾದ ಸಾರ್ವಜನಿಕ ಭದ್ರತಾ ವಕ್ತಾರ ಕರ್ನಲ್ ಸಮಿ ಅಲ್ – ಜುವೈರಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ಥಳೀಯರು ಮತ್ತು ವಿದೇಶಿಗರು ಹಜ್ಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಪಾಲಿಸಬೇಕೆಂದು ಅವರು ಒತ್ತಾಯಿಸಿದರು.
ಅಪರಾಧಿಗಳನ್ನು ಹಿಡಿಯಲು ಪ್ರಾರ್ಥನಾ ಸ್ಥಳಗಳು, ಇತರ ಪ್ರದೇಶಗಳಲ್ಲಿ ಮತ್ತು ರಸ್ತೆಬದಿಗಳಲ್ಲಿ ಭದ್ರತಾ ಸಿಬ್ಬಂದಿ ಹಾಜರಿದ್ದು, ಸಿಕ್ಕಿಬಿದ್ದವರಿಗೆ ಕಠಿಣ ದಂಡ ವಿಧಿಸಲಾಗುವುದು ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.