ಭಾರತದ 32 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ..!
ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ಅಬುಧಾಬಿ ಬಿಗ್ ಟಿಕೆಟ್ನ 241 ನೇ ಸರಣಿ ಡ್ರಾದಲ್ಲಿ ವಲಸಿಗ ಸಫ್ವಾನ್ ಅಬ್ದುಲ್ ಖದರ್ ನಿಜಾಮುದ್ದೀನ್ ಟಿಕೆಟ್ ಸಂಖ್ಯೆ 011830 ರ ಮೂಲಕ 1.5 ಕೋಟಿ ದಿರ್ಹಮ್ಗಳನ್ನು (INR 32 ಕೋಟಿಗಿಂತ ಹೆಚ್ಚು) ಗೆದ್ದಿದ್ದಾರೆ . ಅಬುಧಾಬಿಯಲ್ಲಿ ವಾಸಿಸುವ ಸಫ್ವಾನ್ ಅವರು ಕೆರೀಬಿಯನಿನ ಸೇಂಟ್ ಕಿಟ್ಸ್ ಮತ್ತು ನೆವಿಸ್ ಮೂಲದವರಾಗಿದ್ದಾರೆ. ಅವರು ಕಳೆದ ಎರಡು ವರ್ಷಗಳಿಂದ ಪ್ರತಿ ತಿಂಗಳು ಟಿಕೆಟ್ ಖರೀದಿಸುತ್ತಿದ್ದರು. ಈ ಹಣವನ್ನು ನನ್ನ ಮೂವರು ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡಲಾಗುವುದು ಎಂದು ಸಫ್ವಾನ್ ಹೇಳಿದ್ದಾರೆ.
277709 ಟಿಕೆಟ್ ಸಂಖ್ಯೆ ಹೊಂದಿರುವ ಭಾರತೀಯ ಗೋಮ್ಸ್ ಫ್ರಾನ್ಸಿಸ್ ಬೋನಿಫೇಸ್ ಎರಡನೇ ಬಹುಮಾನ ಹತ್ತು ಲಕ್ಷ ದಿರ್ಹಮ್ ಗಳಿಸಿದರು. ಒಂದು ಲಕ್ಷ ದಿರ್ಹಂಗಳ ಮೂರನೇ ಬಹುಮಾನವನ್ನು ಟಿಕೆಟ್ ಸಂಖ್ಯೆ 223246ರ ಭಾರತೀಯ ಮೊಹಮ್ಮದ್ ಅಶ್ರಫ್ ಪುತನಂಗಡಿ ಕಿಝಕ್ಕೆ ತಳಕ್ಕಲ್ ಗೆದ್ದಿದ್ದಾರೆ. ಭಾರತದ ಸೋನು ಮ್ಯಾಥ್ಯೂ ಟಿಕೆಟ್ ಸಂಖ್ಯೆ 258613 ಮೂಲಕ ನಾಲ್ಕನೇ ಬಹುಮಾನವಾದ ಐವತ್ತು ಸಾವಿರ ದಿರ್ಹಾಂ ಅನ್ನು ಗೆದ್ದಿದ್ದಾರೆ. ಭಾರತದ ಜೆಬರಮ್ಯಾ ವರತರಾಜ್ ಅವರು ಟಿಕೆಟ್ ಸಂಖ್ಯೆ 020021 ಮೂಲಕ ಡ್ರೀಮ್ ಕಾರ್ ಮಾಸೆರೋಟಿ ಘಿಬ್ಲಿ ವಾಹನವನ್ನು ಗೆದ್ದಿದ್ದಾರೆ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.