ಋತುಬಂಧವನ್ನು ಅರ್ಥಮಾಡಿಕೊಳ್ಳುವುದು- ಅಬಾಟ್ನ ಜೀವನದ ಗುಣಮಟ್ಟ ಸಮೀಕ್ಷೆ ಮತ್ತು ದಿ ನೆಕ್ಸ್ಟ್ ಚಾಪ್ಟರ್(ಮುಂದಿನ ಅಧ್ಯಾಯ) ಪ್ರಚಾರವು ಮಹಿಳೆಯರು ಇನ್ನೂ ಪರಿಪೂರ್ಣ ಜೀವನ ನಡೆಸಲು ನೆರವಾಗುವ ಗುರಿ ಹೊಂದಿದೆ..
(www.vknews.in): ಅಕ್ಟೋಬರ್ ನಲ್ಲಿ ಬರುವ ವಿಶ್ವ ಋತುಬಂಧ ದಿನದ ಗುರುತಿಗಾಗಿ, ಜಾಗತಿಕ ಆರೋಗ್ಯಶುಶ್ರೂಷಾ ಮುಂಚೂಣಿ ಸಂಸ್ಥೆಯಾದ ಅಬಾಟ್, ಮಹಿಳೆಯರು ಈ ಹಂತದ ಜೀವನವನ್ನು ಪರಿಪೂರ್ಣವಾಗಿ ಜೀವಿಸಲು ಅವರನ್ನು ಸಬಲಗೊಳಿಸುವ ಪ್ರಯತ್ನಗಳನ್ನು ತ್ವರೆಗೊಳಿಸುತ್ತಿದೆ. ಇಪ್ಸಾಸ್ನ ಸಹಭಾಗಿತ್ವದೊಂದಿಗೆ ಅಬಾಟ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, 87% ಮಂದಿ ಋತುಬಂಧವು ಒಬ್ಬ ಮಹಿಳೆಯ ದಿನನಿತ್ಯದ ಜೀವನದ ಮಹತ್ತರವಾದ ಪ್ರಭಾವ ಏರ್ಪಡಿಸಬಹುದು ಎಂದು ಭಾವಿಸಿದ್ದರು. ಆದರೂ, ಈ ವಿಷಯ ಕುರಿತಾದ ಸಂವಾದಗಳು ಸೀಮಿತವಾಗಿವೆ. ಮಹಿಳೆಯರಿಗೆ ವಯಸ್ಸಾಗುತ್ತಿದ್ದಂತೆ, ಋತುಬಂಧವು ಎಲ್ಲಾ ಮಹಿಳೆಯರನ್ನೂ ಬಾಧಿಸುವ ಹಂತವಾಗಿರುವುದರಿಂದ, ಈ ವಿಶಿಷ್ಟ ಹಂತದ ಜೀವನದ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ಅವರಿಗೆ ಬೆಂಬಲ ಒದಗಿಸುವುದು ಅಬಾಟ್ನ ಗುರಿಯಾಗಿದೆ.
ಋತುಬಂಧದ ಕುರಿತಾದ ಸಂವಾದಗಳಿಗೆ ಬೆಂಬಲ ಒದಗಿಸಲು ಅಬಾಟ್ ದಿ ನೆಕ್ಸ್ಟ್ ಚಾಪ್ಟರ್ ಪ್ರಚಾರ ಪ್ರಾರಂಭಿಸಿ, ಅವರಲ್ಲಿ ಜಾಗೃತಿ ಹೆಚ್ಚಿಸಿ ಹೆಚ್ಚು ಹೆಚ್ಚು ಮಹಿಳೆಯರು ಈ ಹಂತದಲ್ಲಿ ಅವರಿಗೆ ಅವಶ್ಯಕವಾಗಿರುವ ಬೆಂಬಲ ಮತ್ತು ಶುಶ್ರೂಷೆಯನ್ನು ಕೋರಲು ಅವರಿಗೆ ಬಲ ನೀಡಲಿದೆ. ಋತುಬಂಧದ ಕುರಿತು ಮಹಿಳೆಯರ ವಿಶಿಷ್ಟವಾದ ದೃಷ್ಟಿಕೋನಗಳು ಹಾಗೂ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವ ಒಂದು ಕಥಾಸಂಗ್ರಹವಾದ ದಿ ನೆಕ್ಸ್ಟ್ ಚಾಪ್ಟರ್ಗೆ ಇಂದು ಚಾಲನೆ ನೀಡಲಾಯಿತು. ಭಾರತದಲ್ಲಿ ಈ ಕಥಾಸಂಗ್ರಹವನ್ನು ಮಾಜಿ ಮಿಸ್ ಯೂನಿವರ್ಸ್ ಲಾರಾ ದತ್ತ ಅವರು, ಸುಪ್ರಸಿದ್ಧ ಗೈನೆಕಾಲಜಿಸ್ಟ್ ಆದ ಡಾ. ಹೃಷಿಕೇಶ್ ಪೈ, ಪ್ರೆಸಿಡೆಂಟ್ ಎಲೆಕ್ಟ್, ದಿ ಫೆಡರೇಶನ್ ಆಫ್ ಅಬ್ಸ್ಟ್ರೆಟಿಕ್ಸ್ ಅಂಡ್ ಗೈನೆಕಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾ(FOGSI); ಡಾ. ತೇಜಲ್ ಲಾಠಿಯ, ಕನ್ಸಲ್ಟೆಂಟ್ ಎಂಡೋಕ್ರಿನಾಲಜಿಸ್ಟ್, ಅಪೋಲೋ ಮತ್ತು ಫೋರ್ಟಿಸ್ ಹಾಸ್ಪಿಟಲ್ಸ್; ಮತ್ತು ಶೀ ದ ಪೀಪಲ್(SheThePeople)ನ ಸ್ಥಾಪಕಿ ಶೈಲಿ ಚೋಪ್ರಾ ಅವರುಗಳ ಜೊತೆಗೂಡಿ ಉದ್ಘಾಟಿಸಿದರು.
ಅಬಾಟ್ ಇಂಡಿಯಾದ ಪ್ರಾದೇಶಿಕ ವೈದ್ಯಕೀಯ ನಿರ್ದೇಶಕರಾದ ಡಾ. ಪರಾಗ್ ಶೇಠ್, “ಂಅಬಾಟ್ನಲ್ಲಿ ನಾವು ಮಹಿಳೆಯರು ದೀರ್ಘವಾದ ಮತ್ತು ಪರಿಪೂರ್ಣ ಜೀವನ ನಡೆಸುವುದಕ್ಕೆ ನೆರವಾಗುವ ಬದ್ಧತೆ ಹೊಂದಿದ್ದೇವೆ. ಋತುಬಂಧವು ಅನೇಕರಿಗೆ ಸವಾಲೊಡ್ಡುವಂತಿರಬಹುದು. ಮಹಿಳೆಯರ ಋತುಬಂಧ ಅನುಭವಗಳ ಕುರಿತು ಜಾಗೃತಿಯನ್ನು ಹೆಚ್ಚಿಸುವ ಮೂಲಕ ಅವರು ಋತುಬಂಧವನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಂಡು ಅದರ ಬಗ್ಗೆ ಸಂಕೋಚವಿಲ್ಲದೆ ಮಾತನಾಡಿ ಈ ಹಂತದ ಜೀವನವನ್ನು ಪರಿಪೂರ್ಣವಾಗಿ ಜೀವಿಸುವುದಕ್ಕೆ ಅವರಿಗೆ ಅಗತ್ಯವಾಗಬಹುದಾದ ಬೆಂಬಲವನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದೇವೆ. ನಮ್ಮ ಪ್ರಯತ್ನಗಳ ಮೂಲಕ,ಮಹಿಳೆಯರು ತಮ್ಮ ಜೀವನದ ಈ ಅಧ್ಯಾಯವನ್ನು ಅಪ್ಪಿಕೊಳ್ಳಲು ಅವರನ್ನು ಸಬಲಗೊಳಿಸುತ್ತಿದ್ದೇವೆ.”ಎಂದರು.
ಋತುಬಂಧವು ಜೀವನದ ಹಲವಾರು ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಬಹಿರಂಗಪಡಿಸಿದ ಸಮೀಕ್ಷೆ
ಅಬಾಟ್ನ ಸಮೀಕ್ಷೆಯು, ಏಳು ನಗರಗಳಿಂದ 1,200ಕ್ಕಿಂತ ಹೆಚ್ಚಿನ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. ಋತುಬಂಧದ ಕುರಿತು ಮಹಿಳೆಯರ ಜಾಗೃತಿ ಮಟ್ಟಗಳು, ದೃಷ್ಟಿಕೋನಗಳು ಹಾಗೂ ಆ ಸಮಯದಲ್ಲಿ ಅವರು ಅನುಭವಿಸುವ ಅನುಭವಗಳ ಮೌಲ್ಯಮಾಪನ ಮಾಡುವುದು ಸಮೀಕ್ಷೆಯ ಗುರಿಯಾಗಿತ್ತು. ಸಮೀಕ್ಷೆಯು 45-55 ವಯೋಮಿತಿಯೊಳಗಿನ ಮಹಿಳಾ ಗುಂಪು ಮತ್ತು ಕುಟುಂಬ ಸದಸ್ಯರನ್ನೂ ಒಳಗೊಂಡಿತ್ತು.
ಸಮೀಕ್ಷೆಯಲ್ಲಿ ಎತ್ತಿತೋರಿಸಲಾಗಿರುವ ಅಂತರಗಳನ್ನು ವಿವರಿಸುತ್ತಾ ಡಾ. ಪೈ ಅವರು, “ಮಹಿಳೆಯರು ಋತುಬಂಧದ ಬದಲಾವಣೆಯ ಹಂತವನ್ನು ದಾಟುವುದಕ್ಕೆ ಮತ್ತು ಅದೇ ಸಮಯದಲ್ಲಿ ತಮ್ಮ ದೀರ್ಘಾವಧಿ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೆ ನೆರವಾಗುವಲ್ಲಿ, ಅವರು ಋತುಬಂಧದ ಸಮಯದಲ್ಲಿ ದೇಹದಲ್ಲಿ ಏನೇನು ಬದಲಾವಣೆಗಳಾಗುತ್ತವೆ ಮತ್ತು ಮಹಿಳೆಯರು ಯಾವ ರೀತಿ ಅಹಿತಕರ ಲಕ್ಷಣಗಳನ್ನು ನಿಭಾಯಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾದುದು. ವ್ಯಾಪಕ ಶ್ರೇಣಿಯ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ನಿರ್ದಿಷ್ಟವಾಗಿ ಈ ಹಂತವನ್ನು ಹಾದುಹೋಗುತ್ತಿರುವ ಭಾರತೀಯ ಮಹಿಳೆಯರ ಅನುಭವಗಳೂ ಒಳಗೊಂಡಂತೆ, ಋತುಬಂಧದ ಪ್ರಭಾವಗಳನ್ನು ಹಂಚಿಕೊಳ್ಳುವ ಮೂಲಕ ನಾವು ಮಹಿಳೆಯರಿಗೆ ಅರಿವು ಮೂಡಿಸುವಲ್ಲಿ ಮತ್ತು ಅವರ ಜೀವನದ ಈ ಘಟ್ಟದಸುತ್ತ ಇರುವ ಕಳಂಕವನ್ನು ತೊಡೆದುಹಾಕುವ ನಿಟ್ಟಿನಲ್ಲಿ ನಾವು ಮುಖ್ಯ ಕ್ರಮಗಳನ್ನು ಕೈಗೊಳ್ಳಬಹುದು.”ಎಂದರು.
ಒಂದು ನಿರ್ಬಂಧಿತ ವಿಷಯವಾಗಿ ಋತುಬಂಧದ ಕುರಿತು ತನ್ನ ಆಲೋಚನೆಗಳನ್ನು ಹಂಚಿಕೊಳ್ಳುತ್ತಾ ಮಾಜಿ ಮಿಸ್ ಯೂನಿವರ್ಸ್ ಲಾರಾ ದತ್ತ, “ಋತುಬಂಧವು ಒಬ್ಬ ಮಹಿಳೆಯ ನೈಸರ್ಗಿಕ ಜೀವನ ಪ್ರಕ್ರಿಯೆಯ ಭಾಗವಾಗಿದ್ದರೂ, ಇದು ಅನೇಕ ವೇಳೆ ನಾವು ಮೌನವಹಿಸುವ ವಿಷಯವೂ ಆಗಿದೆ. ಇದರ ಫಲವಾಗಿ, ಅನೇಕ ಮಹಿಳೆಯರಿಗೆ ಈ ಸಂದರ್ಭದಲ್ಲಿ ಏನು ನಿರೀಕ್ಷಿಸಬೇಕು ಎಂದು ಗೊತ್ತಿರುವುದಿಲ್ಲ. ನಾವು ಋತುಬಂಧದ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿದಷ್ಟೂ ಹೆಚ್ಚು ಹೆಚ್ಚು ಮಹಿಳೆಯರು ತಮ್ಮ ಜೀವನದ ಈ ಹಂತವನ್ನು ಇನ್ನಷ್ತು ಉತ್ತಮವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತಿದೆ. ಇದು ಅವರಿಗೆ ಅವರು ತಮ್ಮ ಕುಟುಂಬದವರು, ಸ್ನೇಹಿತರು ಮತ್ತು ವೈದ್ಯರೊಡನೆ ಮಾತನಾಡಲು ಪ್ರೋತ್ಸಾಹ ನೀಡುವುದರಿಂದ, ಅವರು ಈ ಲಕ್ಷಣಗಳನ್ನು ಉತ್ತಮವಾಗಿ ನಿಭಾಯಿಸುವುದು ಮಾತ್ರವಲ್ಲದೆ ಮುಂದಿನ ಘಟನೆಗಳಿಗೆ ಸಿದ್ಧರಾಗಿರುವುದಕ್ಕೂ ನೆರವಾಗುತ್ತದೆ. “ಎಂದು ಹೇಳಿದರು.
ಋತುಬಂಧ- ಇನ್ನೂ ಕೂಡ ಬೃಹತ್ ಪ್ರಮಾಣದಲ್ಲಿ ಚರ್ಚೆಮಾಡದಿರುವ ವಿಷಯ..
ಋತುಬಂಧಕ್ಕೆ (ಮಾಸಿಕ ಋತುಚಕ್ರ ಶಾಶ್ವತವಾಗಿ ಕೊನೆಗೊಳ್ಳುವುದು)ಎಡೆಮಾಡಿಕೊಡುವ ಹಾರ್ಮೋನ್ ಬದಲಾವಣೆಗಳುಸಾಮಾನ್ಯವಾಗಿ ಒಬ್ಬ ಮಹಿಳೆಯಲ್ಲಿ 40ರ ಮಧ್ಯಭಾಗದಲ್ಲಿ ಆರಂಭವಾಗುತ್ತದೆ ಮತ್ತು ಸರಾಸರಿ ಒಬ್ಬ ಭಾರತೀಯ ಮಹಿಳೆಯು ಪಾಶ್ಚಾತ್ಯ ಮಹಿಳೆಯರಿಗೆ ಹೋಲಿಸಿದರೆ, ಹೆಚ್ಚುಕಡಿಮೆ ಐದು ವರ್ಷಗಳಷ್ಟು ಮುಂಚಿತವಾಗಿ, ಅಂದರೆ ಸುಮಾರ್ 46ನೆ ವಯಸ್ಸಿನ ಆಸುಪಾಸಿನಲ್ಲಿ ಋತುಬಂಧ ಹೊಂದುತ್ತಾಳೆ. ಇದು ಅನೇಕ ಸವಾಲೊಡ್ಡುವ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಲಕ್ಷಣಗಳನ್ನು ಉದ್ದೀಪನಗೊಳಿಸಿ ಜೀವನದ ಗುಣಮಟ್ಟವನ್ನು ಬಾಧಿಸಬºಎಲ್ಲಾ ಮಹಿಳೆಯರೂ ಈ ಬದಲಾವಣೆಗೆ ಒಳಗಾಗಿ, ಅನೇಕ ಮಹಿಳೆಯರು ಅಹಿತಕರ ಲಕ್ಷಣಗಳನ್ನು ಎದುರಿಸಿದರೂ, ಇದಕ್ಕೆ ಪರೊಹಾರ ಕಂಡುಕೊಳ್ಳುವುದಿಲ್ಲ. ಸಾಮಾಜಿಕ ಕಳಂಕ ಮತ್ತು ಜಾಗೃತಿಯ ಕೊರತೆ ಅರ್ಧದಷ್ಟು ಮಹಿಳೆಯರು ಋತುಬಂಧಕ್ಕೆ ಸಂಬಂಧಿಸಿದ ಲಕ್ಷಣಗಳಿಗೆ ವೈದ್ಯಕೀಯ ನೆರವು ಕೋರದಿರುವುದಕ್ಕೆ ಕೊಡುಗೆ ಸಲ್ಲಿಸುತ್ತವೆ.
ಅಬಾಟ್ನ ಋತುಬಂಧ ಕಥಾನಕಗಳ ದಿ ನೆಕ್ಸ್ಟ್ ಚಾಪ್ಟರ್ ಸಂಗ್ರಹವು ಇ-ಪುಸ್ತಕವಾಗಿ ಲಭ್ಯವಿದ್ದು, ನಾಲ್ಕು ದೇಶಗಳಿಂದ ಅಂದರೆ, ಭಾರತ, ಚೀನಾ, ಬ್ರೆಜಿಲ್ ಮತ್ತು ಮೆಕ್ಸಿಕೋ ದೇಶಗಳಿಂದ ಋತುಬಂಧವೇರ್ಪಟ್ಟ ಮಹಿಳೆಯರ ನಿಜವಾದ ಅನುಭವಗಳು ಮತ್ತು ಕಥಾನಕಗಳನ್ನು ಎತ್ತಿ ಹೇಳುತ್ತದೆ. ಹಾರ್ಮೋನ್ ಬದಲಾವಣೆಗಳು ಸಂಬಂಧಗಳು ಹಾಗೂ ವೃತ್ತಿಗಳ ಮೇಲೆ ಏರ್ಪಡಿಸುವ ಪ್ರಭಾವದಿಂದ ಹಿಡಿದು ಆರೋಗ್ಯ ಮತ್ತು ಆತ್ಮಗೌರವದ ಮೇಲೆ ಏರ್ಪಡುವ ಪ್ರಭಾವದವರೆಗೆ, ದಿ ನೆಕ್ಸ್ಟ್ ಚಾಪ್ಟರ್ದಲ್ಲಿನ(The Next Chapter) ಪ್ರತಿಯೊಬ್ಬ ಮಹಿಳೆಯ ಕಥೆಯೂ, ಹೆಚ್ಚು ಹೆಚ್ಚು ಮಹಿಳೆಯರು, ತಮ್ಮ ಅನುಭವಗಳ ಬಗ್ಗೆಮಾತನಾಡಿ, ಋತುಬಂಧವನ್ನು ಇನ್ನಷ್ಟು ಮುಕ್ತವಾಗಿ ಚರ್ಚಿಸಿ, ಕುಟುಂಬದವರು ಹಾಗೂ ಸ್ನೇಹಿತರು ಒಳಗೊಂಡಂತೆ, ಬೆಂಬಲ ಕೋರಲು ಪ್ರೇರಣೆ ಒದಗಿಸುತ್ತದೆ. ಪುಸ್ತಕದ ನಾಲ್ಕು ಆವೃತ್ತಿಗಳು ಇವೆ- ಪ್ರತಿಯೊಂದೂ ಒಂದೊಂದು ದೇಶಕ್ಕೆ. ಇವೆಲ್ಲವೂ, ಭಾರತವೂ ಒಳಗೊಂಡಂತೆ, ಪ್ರತಿಯೊಂದು ದೇಶದ ಮಹಿಳಾ ಕಲಾವಿದೆಯರು ಸೃಷ್ಟಿಸಿದ ಋತುಬಂಧವನ್ನು ಸೂಚಿಸುವ ಸೃಜನಶೀಲ ಚಿತ್ರಣವನ್ನು ಹೊಂದಿದೆ.
ಋತುಬಂಧ ಕುರಿತಾದ ಅಬಾಟ್ನ ಇ-ಪುಸ್ತಕ ‘ದಿ ನೆಕ್ಸ್ಟ್ ಚಾಪ್ಟರ್’ ಮತ್ತು ಹೆಚ್ಚುವರಿ ಋತುಬಂಧ ಸಂಪನ್ಮೂಲಗಳನ್ನು ಅದರ ವೆಬ್ಸೈಟ್ The Next Chapter – Womenfirstದಲ್ಲಿ ಮತ್ತು ಫೇಸ್ಬುಕ್ <https://facebook.com/abbottindiaದಲ್ಲಿ ನೋಡಬಹುದು. ಭಾರತದ ಮಹಿಳೆಯರು ದಿ ನೆಕ್ಸ್ಟ್ ಚಾಪ್ಟರ್ ಅನ್ನು ಇಲ್ಲಿ (here) ಡೌನ್ಲೋಡ್ ಮಾಡಿಕೊಳ್ಳುವಂತೆ ಮತ್ತು #MenopauseStories ಅನ್ನು ಹ್ಯಾಶ್ಟ್ಯಾಗ್ ಆಗಿ ಬಳಸಿ ತಮ್ಮ ಸಮೂಹ ಮಾಧ್ಯಮಗಳಲ್ಲಿ ತಮ್ಮದೇ ಸ್ವಂತ ವಿಶಿಷ್ಟ ಕಥೆಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.