ಕೊಯಮತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಕೊಯಮತ್ತೂರು ಕಾರು ಸ್ಫೋಟ ಪ್ರಕರಣದಲ್ಲಿ ಮತ್ತೋರ್ವನನ್ನು ಬಂಧಿಸಲಾಗಿದೆ. ಬಂಧಿತನನ್ನು ಅಫ್ಸರ್ ಖಾನ್ ಎಂದು ಗುರುತಿಸಲಾಗಿದೆ. ಆತ ಸ್ಫೋಟದಲ್ಲಿ ಮೃತಪಟ್ಟ ಜಮೀಶಾ ಮುಬೀನ್ ಅವರ ಸಂಬಂಧಿಯಾಗಿದ್ದು, ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಆರಕ್ಕೆ ಏರಿದೆ.
ಕೊಯಮತ್ತೂರಿನ ಕೊಟ್ಟಮೇಡುವಿನ ಸಂಗಮೇಶ್ವರ ದೇವಾಲಯದ ಬಳಿ ಭಾನುವಾರ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈ ಹಿಂದೆ ಐವರನ್ನು ಬಂಧಿಸಿದ್ದರು. ಬಂಧಿತರನ್ನು ಫಿರೋಜ್ ಇಸ್ಮಾಯಿಲ್, ನವಾಜ್ ಇಸ್ಮಾಯಿಲ್, ಮೊಹಮ್ಮದ್ ಧಲ್ಹಾ, ಮೊಹಮ್ಮದ್ ರಿಯಾಜ್ ಮತ್ತು ಮೊಹಮ್ಮದ್ ಅಜರುದ್ದೀನ್ ಎಂದು ಗುರುತಿಸಲಾಗಿದೆ. ಅವರು ಜಿಎಂ ನಗರ ಮತ್ತು ಉಕ್ಕಡಂನ ನಿವಾಸಿಗಳು. ಈ ಐವರು ಸ್ಫೋಟದಲ್ಲಿ ಮೃತಪಟ್ಟ ಜಮೀಶಾ ಮುಬಿನ್ ಅವರ ನಿಕಟವರ್ತಿಗಳಾಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.