ಇಸ್ಲಾಮಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ಟಿ 20 ವಿಶ್ವಕಪ್ ಸೂಪರ್ 12 ಸುತ್ತಿನಲ್ಲಿ ಜಿಂಬಾಬ್ವೆ ಭಾರತವನ್ನು “ಪವಾಡಸದೃಶವಾಗಿ” ಸೋಲಿಸಿದರೆ ಜಿಂಬಾಬ್ವೆಯ ವ್ಯಕ್ತಿಯನ್ನು ಮದುವೆಯಾಗುವುದಾಗಿ ಪಾಕಿಸ್ತಾನದ ನಟಿಯೊಬ್ಬರು ಘೋಷಿಸಿದ್ದಾರೆ. ನಟಿ ಸೆಹರ್ ಶಿನ್ವಾರಿ ಟ್ವಿಟ್ಟರ್ ನಲ್ಲಿ ಈ ಘೋಷಣೆ ಮಾಡಿದ್ದಾರೆ.
ನಟಿಯ ಟ್ವೀಟ್ ಅನ್ನು ಅನೇಕರು ಲೈಕ್ ಮಾಡಿದ್ದಾರೆ ಮತ್ತು ರೀಟ್ವೀಟ್ ಮಾಡಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯದ ವೇಳೆ, ಬಾಂಗ್ಲಾದೇಶ ಗೆಲ್ಲುತ್ತದೆ ಎಂದು ನಟಿ ಟ್ವಿಟರ್ನಲ್ಲಿ ಪದೇ ಪದೇ ಕಾಮೆಂಟ್ ಮಾಡಿದ್ದರು. ಆದಾಗ್ಯೂ, ಭಾರತವು ಪಂದ್ಯವನ್ನು 5 ರನ್ ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ, ನಟಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಅಪಹಾಸ್ಯಕ್ಕೆ ಗುರಿಪಡಿಸಲಾಯಿತು. ನವೆಂಬರ್ 6ರ ಭಾನುವಾರ ಭಾರತ ಜಿಂಬಾಬ್ವೆ ವಿರುದ್ಧ ಸೆಣಸಲಿದೆ.
I'll marry a Zimbabwean guy, if their team miraculously beats India in next match 🙂 — Sehar Shinwari (@SeharShinwari) November 3, 2022
I'll marry a Zimbabwean guy, if their team miraculously beats India in next match 🙂
— Sehar Shinwari (@SeharShinwari) November 3, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.