ಯಕ್ಷಗಾನ ಕರಾವಳಿಯ ಒಂದು ಆರಾಧನಾ ಕಲೆ: ಮಹಾವೀರ ಪಾಂಡೆ
ಕಾರ್ಕಳ :ಎಂ ಪಿ ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನವೆಂಬರ್ 9 ರಂದು ಯಕ್ಷಗಾನ ಸಂಘ ಹಾಗೂ ಯಕ್ಷಕಲಾರಂಗದ ನೇತೃತ್ವದಲ್ಲಿ, ಯಕ್ಷಗಾನ ಸಂಘ ಹಾಗೂ ಯಕ್ಷಗಾನದ ಸರ್ಟಿಫಿಕೇಟ್ ಕೋರ್ಸ್ ನ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು…. ಕಾರ್ಯಕ್ರಮದ ಪ್ರಮುಖ ಅತಿಥಿಗಳಾದ ಹವ್ಯಾಸಿ ಯಕ್ಷಗಾನ ಮತ್ತು ತಾಳಮದ್ದಲೆ ಕಲಾವಿದೆ ಜ್ಯೋತಿ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಯಕ್ಷಗಾನ ಮಾನಸಿಕ ಒತ್ತಡ ನಿವಾರಣೆಗೆ ಸಹಕಾರಿ ಎಂದರು… ಪ್ರಾಂಶುಪಾಲರಾದ ಡಾ| ಕಿರಣ್ ಎಂ ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದರು.. ಕಾರ್ಯಕ್ರಮದಲ್ಲಿ ಯಕ್ಷ ಗುರುಗಳಾದ ಮಹಾವೀರ ಪಾಂಡೆ, ಕಾಲೇಜಿನ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಫೈನ್ ಆರ್ಟ್ಸ್ ನ ಸಂಚಾಲಕರಾದ ಗಣೇಶ್ ಇವರು ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು ,ಶ್ರಾವ್ಯ ನಿರೂಪಿಸಿದರು , ಚಂದನ ಪ್ರಾರ್ಥಿಸಿದರು ,ಸಾತ್ವಿಕ್ ವಂದಿಸಿದರು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.