ಕಾಸರಗೋಡು (ವಿಶ್ವ ಕನ್ನಡಿಗ ನ್ಯೂಸ್) : 19ರ ಹರೆಯದ ಯುವತಿಗೆ ಮಾದಕ ವಸ್ತು ನೀಡಿ ಆಮಿಷ ಒಡ್ಡಿ ವಿವಿಧೆಡೆ ಕರೆದೊಯ್ದ ಪ್ರಕರಣದಲ್ಲಿ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳಾ ಸಿಐ ಪಿ.ಚಂದ್ರಿಕಾ ನೇತೃತ್ವದ ತಂಡ ಚೇರೂರು ಪಾಣಾಲಂನ ಹಮೀದ್ (ಟೈಗರ್ ಹಮೀದ್ 40) ಮತ್ತು ಬದಿಯತುಕ್ಕ ಪಳ್ಳತ್ತಟುಕ ಕಡಮನ ಹೌಸ್ ನ ಬಾಲಕೃಷ್ಣ (ಕೃಷ್ಣ 64) ಅವರನ್ನು ಬಂಧಿಸಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗಳನ್ನು ರಿಮಾಂಡ್ ಮಾಡಲಾಗಿದೆ.
ಇದರೊಂದಿಗೆ ಪ್ರಕರಣದಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನು ಜಿಲ್ಲಾ ಅಪರಾಧ ವಿಭಾಗಕ್ಕೆ ಹಸ್ತಾಂತರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠ ಡಾ.ವೈಭವ್ ಸಕ್ಸೇನಾ ಆದೇಶಿಸಿದ್ದಾರೆ.
ಮಧೂರು ಪಟ್ಲದ ಜೆ.ಶೈನಿತ್ಕುಮಾರ್ (30), ಉಳಿಯತಟ್ಟುಕ್ಕಾ ಕ್ವಾರ್ಟರ್ಸ್ನಲ್ಲಿ ವಾಸವಾಗಿರುವ ಎನ್.ಪ್ರಶಾಂತ್ (43), ಉಪ್ಪಳ ಮಂಗಲ್ಪಾಡಿ ಚಿಂಪಾರ ಹೌಸ್ನ ಮೋಕ್ಷಿತ್ ಶೆಟ್ಟಿ (27), ಕಾಞಂಗಾಡು ಮತ್ತು ಕಾಸರಗೋಡಿನಲ್ಲಿ ಲಾಡ್ಜ್ ಮತ್ತು ಬಾಡಿಗೆ ಕೊಠಡಿಗಳಲ್ಲಿ ವಾಸವಾಗಿರುವ ಜಾಸ್ಮಿನ್ (22), ಅಬ್ದುಲ್ ಸತ್ತಾರ್(31) ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.
ಕಿರುಕುಳಕ್ಕೆ ಸಂಬಂಧಿಸಿದಂತೆ ಮಹಿಳಾ ಠಾಣೆಯಲ್ಲಿ ಇದುವರೆಗೆ 6 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 5 ಪ್ರಕರಣಗಳನ್ನು ಕಾಸರಗೋಡು ಮಹಿಳಾ ಪೊಲೀಸರು ಹಾಗೂ ಒಂದು ಪ್ರಕರಣವನ್ನು ಕಾಸರಗೋಡು ಡಿವೈಎಸ್ಪಿ ನೇತೃತ್ವದ ತಂಡ ತನಿಖೆ ನಡೆಸಿದೆ. ಈಗ ಈ ಎಲ್ಲ ಪ್ರಕರಣಗಳನ್ನು ಜಿಲ್ಲಾ ಅಪರಾಧ ವಿಭಾಗದ ಡಿವೈಎಸ್ಪಿ ಎ.ಸತೀಶ್ಕುಮಾರ್ ನೇತೃತ್ವದ ತಂಡ ತನಿಖೆ ನಡೆಸಲಿದೆ. ಚೆರ್ಕಳ, ಕಾಸರಗೋಡು, ತ್ರಿಶೂರು ಮುಂತಾದ ಕಡೆ ಕರೆದೊಯ್ದು ಒಂಟಿಯಾಗಿ ಮತ್ತು ಗುಂಪು ಗುಂಪಾಗಿ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಅತಿಜೀವತಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.