ವಿಶಾಖಪಟ್ಟಣಂ (ವಿಶ್ವ ಕನ್ನಡಿಗ ನ್ಯೂಸ್) : ಆಂಧ್ರಪ್ರದೇಶ ಪೊಲೀಸರು ಭಾರೀ ಮಾದಕ ದ್ರವ್ಯ ಬೇಟೆ ನಡೆಸಿದ್ದಾರೆ. ಆಂಧ್ರಪ್ರದೇಶ ಪೊಲೀಸರು 10,400 ಕೆಜಿ ಗಾಂಜಾವನ್ನು ವಶಪಡಿಸಿ ಸುಟ್ಟು ಹಾಕಿದ್ದಾರೆ. ಮಾದಕ ದ್ರವ್ಯ ನಿಗ್ರಹ ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡ ಗಾಂಜಾವನ್ನು ಸಾಮೂಹಿಕವಾಗಿ ಸುಟ್ಟು ಹಾಕಲಾಗಿದೆ.
2 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ವಿಶಾಖಪಟ್ಟಣಂ ರೇಂಜ್ ಡಿಐಜಿ ಹರಿಕೃಷ್ಣ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಹೆಚ್ಚಿನ ಗಾಂಜಾ ಒಡಿಶಾದಿಂದ ಆಂಧ್ರಕ್ಕೆ ಬರುತ್ತದೆ. ಈಗಾಗಲೇ ಆಂಧ್ರದಲ್ಲಿ 7,500 ಎಕರೆ ಗಾಂಜಾ ತೋಟ ನಾಶವಾಗಿದೆ. 3,500 ಜನರನ್ನು ಬಂಧಿಸಲಾಗಿದೆ ಎಂದು ಡಿಐಜಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.