ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ವಾಜಪೇಯಿ ಅವರ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದು ನಾಟಕ ಎಂದು ಬಿಜೆಪಿ ಹೇಳಿದೆ. ವಾಜಪೇಯಿ ಸ್ಮಾರಕದಲ್ಲಿ ರಾಹುಲ್ ಗಾಂಧಿ ಕ್ಯಾಮೆರಾ ಮುಂದೆ ನಾಟಕ ಪ್ರದರ್ಶಿಸಿದರು. ವಾಜಪೇಯಿ ಸ್ಮಾರಕಕ್ಕೆ ರಾಹುಲ್ ಆಗಮಿಸಿದಾಗ ನರಸಿಂಹರಾವ್ ಅವರ ಸಮಾಧಿ ಸ್ಥಳಕ್ಕೆ ಏಕೆ ಭೇಟಿ ನೀಡಲಿಲ್ಲ ಎಂದು ಬಿಜೆಪಿ ಪ್ರಶ್ನಿಸಿದೆ.
ಆದರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು, ಗೌರವ ನಮ್ಮ ದೇಶದ ಸಂಪ್ರದಾಯವಾಗಿದ್ದು, ಅಂತಹ ಸಂಪ್ರದಾಯಗಳನ್ನು ಬಲಪಡಿಸಲು ನಾವು ಶ್ರಮಿಸುತ್ತೇವೆ. ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ಭಾರತ್ ಜೋಡೋ ಯಾತ್ರೆಯ ಭಯ ಶುರುವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.