ಡೆಹ್ರಾಡೂನ್ (ವಿಶ್ವ ಕನ್ನಡಿಗ ನ್ಯೂಸ್) : ರೂರ್ಕಿ ಬಳಿ ರಸ್ತೆ ಅಪಘಾತದಲ್ಲಿ ಕ್ರಿಕೆಟಿಗ ರಿಷಬ್ ಪಂತ್ ಅವರ ರಕ್ಷಣೆಗೆ ಬಂದ ಹರಿಯಾಣ ರೋಡ್ವೇಸ್ ಬಸ್ನ ಚಾಲಕ ಮತ್ತು ಕಂಡಕ್ಟರ್ಗೆ ತಮ್ಮ ಸರ್ಕಾರ ಗೌರವ ಸಲ್ಲಿಸಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭಾನುವಾರ ಹೇಳಿದ್ದಾರೆ.
ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕ್ರಿಕೆಟಿಗನ ಜೀವ ಉಳಿಸುವ ಮೂಲಕ ಹರಿಯಾಣ ರೋಡ್ವೇಸ್ ಚಾಲಕ ಮತ್ತು ಕಂಡಕ್ಟರ್ ಇತರರಿಗೆ ಮಾದರಿಯಾಗಿದ್ದಾರೆ. ರಾಜ್ಯ ಸರ್ಕಾರವು ಅವರನ್ನು ಜನವರಿ 26 ರಂದು ಗೌರವಿಸುತ್ತದೆ ಎಂದು ಧಾಮಿ ಹೇಳಿದರು. ಶುಕ್ರವಾರ ತನ್ನ ಹುಟ್ಟೂರಾದ ರೂರ್ಕಿಗೆ ಹೋಗುತ್ತಿದ್ದಾಗ, ಪಂತ್ ಅವರು ಕಾರು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು.
ಅಪಘಾತವನ್ನು ಗಮನಿಸಿದ ಬಸ್ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮ್ಜಿತ್ ಅವರು ಪಂತ್ ಅವರನ್ನು ಕಾರಿನಿಂದ ರಕ್ಷಿಸಿದ್ದಾರೆ. ಅವರನ್ನು ಕಾರಿನಿಂದ ಹೊರಗೆಳೆದು ಪೊಲೀಸರಿಗೆ ಕರೆ ಮಾಡಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.