ಬೆಳ್ತಂಗಡಿ (www.vknews.in) : ಇಂದು ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್’ಡಿಪಿಐ) ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಬೆಳ್ತಂಗಡಿಯಿಂದ ಅಕ್ಬರ್ ಬೆಳ್ತಂಗಡಿಯವರಿಗೆ ಟಿಕೆಟ್ ನೀಡಲಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್’ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ ಕೆ ಫೈಝಿ ಮಾತನಾಡಿ, ರಾಜ್ಯದ 224 ಕ್ಷೇತ್ರಗಳ ಪೈಕಿ 54 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ಬೆಳ್ತಂಗಡಿಯಿಂದ ಅಕ್ಬರ್ ಬೆಳ್ತಂಗಡಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಳ್ತಂಗಡಿ ತಾಲೂಕಿನದ್ಯಾತ ಚಿರಪರಿಚಿತ ವ್ಯಕ್ತಿತ್ವ. ಜನ ಸೇವಕ, ಅಕ್ಬರ್ ಎಂಬ ವ್ಯಕ್ತಿ ಬೆಳ್ತಂಗಡಿಗೆ ಸೀಮಿತವಾಗದೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಚಿರಪರಿಚಿತ ಮುಖ. ಎಲ್ಲಾ ಸಮುದಾಯದ ಜನರಿಗೆ ಅಕ್ರಮ ಅನ್ಯಾಯವಾದಗ ಮುಂಚೂಣಿಯಲ್ಲಿ ನಿಂತು ಸುಮಾರು 20 ವರ್ಷಗಳಿಂದ ಹೋರಾಟ ನಡೆಸಿದ ಧಣಿವರಿಯಾದ ವ್ಯಕಿ. ವಿಶೇಷವಾಗಿ ಮುಸ್ಲಿಂ, ದಲಿತ, ಕ್ರಿಸ್ಟಿಯನ್ ಸಮುದಾಯದ ಆಶಾಕಿರಣ. ಮುಸ್ಲಿಮರಿಗೆ ಆಡಳಿತ ಪಕ್ಷದಿಂದ ನಡೆದಂತಹ ದೌರ್ಜನ್ಯವನ್ನು, ಕರಾಳ ಕಾನೂನು ಸರಕಾರ ಜನರ ಮೇಲೆ ಹೇರಿದಾಗ ಅದರ ವಿರುದ್ಧ ಹೋರಾಟಕ್ಕೆ ನೇತೃತ್ವ ಕೊಟ್ಟ ವ್ಯಕ್ತಿ. ಕ್ರಿಸ್ಟಿಯನ್ ಸಮುದಾಯದ ಚರ್ಚ್ ದಾಳಿ ನಡೆದ ಸಂದರ್ಭದಲ್ಲಿ ನೆರಿಯಾ ಗಂಡಿಬಾಗಿಲು ಪ್ರದೇಶದಲ್ಲಿ ಬಿಜೆಪಿ ಗೂಂಡಾಗಳ ದಾಳಿ ವಿರುದ್ಧ ಧ್ವನಿ ಎತ್ತಿದ ನಾಯಕ. ದಲಿತ ಸಮುದಾಯದ ಕೃಷ್ಣಪ್ಪ ಕೈ ಕಡಿದ ಪ್ರಕರಣದಲ್ಲಿ ಉಜಿರೆಯಿಂದ ಬೆಳ್ತಂಗಡಿ ವರೆಗೆ ಪಾದಯಾತ್ರೆ ಮಾಡಿ ನ್ಯಾಯ ಕೊಡಿಸುವಲ್ಲಿ ಸಫಲರಾದವರು. ಅಮಾಯಕ ದಲಿತ ದಿನೇಶ್ ಕನ್ಯಾಡಿ ಕೊಲೆಗೆ ನ್ಯಾಯಕ್ಕಾಗಿ ಎಸ್’ಡಿಪಿಐ ಪಕ್ಷವು ನಡೆಸಿದ ಬೆಳ್ತಂಗಡಿಯಿಂದ ಮಂಗಳೂರಿಗೆ ಬೃಹತ್ ಪಾದಯಾತ್ರೆಯ ನೇತೃತ್ವ ನೀಡಿದ ವ್ಯಕ್ತಿ.
2019 ರಲ್ಲಿ ಬೆಳ್ತಂಗಡಿ ತಾಲೂಕಿನ ಬಹಳ ಪ್ರದೇಶಗಳಿಗೆ ಮಳೆ ಪ್ರವಾಹದಿಂದ ಹಾನಿಯಾದಂತಹ ಸಂದರ್ಭದಲ್ಲಿ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಎಸ್’ಡಿಪಿಐ ತಾಲೂಕಿನ ವಿವಿಧ ಭಾಗಗಲ್ಲಿ ನಿರಾಶ್ರಿತರಿಗೆ ಆಸರೆಯಾಗಿದ್ದರು. ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಎಷ್ಟೋ ಕುಟುಂಬಗಳಿಗೆ ಆಸರೆಯಾದ ಜನ ನಾಯಕ. ಕೋವಿಡ್ ನಿಂದ ಮರಣ ಹೊಂದಿದ ಎಷ್ಟೋ ದೇಹಗಳಿಗೆ ಜಾತಿ ಮತ ನೋಡದೆ ಅಂತಿಮ ವಿಧಿ ವಿಧಾನ ನೆರವೇರಿಸಿದ ನಾಯಕ.
ಬೆಳ್ತಂಗಡಿ ಹಳ್ಳಿ ಪ್ರದೇಶದ ಯುವಕರಿಗೆ ಅಕ್ಬರ್ ಬೆಳ್ತಂಗಡಿ ಆಪತ್ಬಾಂಧವ. ಬೆಳ್ತಂಗಡಿಯ ಯಾವುದೇ ಪ್ರದೇಶದಲ್ಲಿ ಅಪಘಾತ ಸಂಭವಿಸಿದಾಗ ಹಗಲು ರಾತ್ರಿ ಎನ್ನದೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಭೇಟಿ ನೀಡಿ ಸಾಂತ್ವನ ನೀಡದ ನಾಯಕ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಮಾಯಕ ಜನರಿಗೆ ಅನ್ಯಾಯವದಾಗ, ಹೋರಾಟ ನಡೆಸಿ ನ್ಯಾಯ ಕೊಡಿಸಿದ ವ್ಯಕ್ತಿ. ಈ ಎಲ್ಲಾ ವ್ಯಕ್ತಿತ್ವದ ಅಕ್ಬರ್ ಬೆಳ್ತಂಗಡಿಯವರಿಗೆ ಎಸ್’ಡಿಪಿಐ ಪಕ್ಷವು ಈ ಬಾರಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದೆ. ಈ ಭಾರಿ ಬೆಳ್ತಂಗಡಿ ಜನತೆ ಅಕ್ಬರ್ ಬೆಳ್ತಂಗಡಿ ಜೊತೆ ನಿಲ್ಲಲಿದ್ದಾರೆ ಎಂಬುದು ಪಕ್ಷದ ನಿಲುವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.