ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋದ ತಂತ್ರಜ್ಞಾನ ಎಂಜಿನಿಯರ್ ವಿಭಾಗದ ಸಹಾಯಕ ವಿಜ್ಞಾನಿಯಾಗಿ ಬಸ್ ಚಾಲಕರೊಬ್ಬರ ಪುತ್ರಿ ಸನಾ ಅಲಿ ನೇಮಕವಾಗಿದ್ದಾರೆ. ಇಸ್ರೋದ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಹೊಸ ವಿಜ್ಞಾನಿಯಾಗಿ ಮಧ್ಯಪ್ರದೇಶದ ವಿಧಿಶಾ ಜಿಲ್ಲೆಗೆ ಸೇರಿದ ಸನಾ ಅಲಿಯವರು ಆಯ್ಕೆಯಾಗಿದ್ದಾರೆ.
ವಿಧಿಶಾದ ಸತಿ- ಸ್ಮಾರ್ಟ್ ಅಶೋಕ್ ಟೆಕ್ನಿಕಲ್ ಇನ್ ಸ್ಟಿಟ್ಯೂಟಿನಲ್ಲಿ ಬಿ.ಟೆಕ್. ಮತ್ತು ಎಂ. ಟೆಕ್. ಪದವಿಗಳನ್ನು ಪಡೆದಿರುವ ಸನಾ ಅವರು ತಂದೆಯ ಕಡಿಮೆ ಆದಾಯದ ಕಾರಣಕ್ಕೆ ಓದು ಮುಗಿಸಲು ಹಲವು ಕಷ್ಟಗಳನ್ನು ಎದುರಿಸಬೇಕಾಯಿತು. ಅವರ ತಾಯಿ ಮಗಳ ಓದಿಗಾಗಿ ತನ್ನ ಆಭರಣಗಳನ್ನೆಲ್ಲ ಅಡವಿಟ್ಟರೆ, ತಂದೆ ಸಯೀದ್ ಸಾಜಿದ್ ಅಲಿಯವರು ಮಗಳ ಓದಿಗಾಗಿ ಸಾಕಷ್ಟು ಸಾಲ ಮಾಡಿದ್ದಾರೆ.
ಮಧ್ಯ ಪ್ರದೇಶದ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಸನಾ ಅಲಿಯವರ ಸಾಧನೆಗಳಿಗೆ ಶುಭ ಹಾರೈಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.