ಚೌಕಿ (ವಿಶ್ವ ಕನ್ನಡಿಗ ನ್ಯೂಸ್) : ಯುವಕನೊಬ್ಬ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತರನ್ನು ಕೂಡ್ಲು ಶೆಟ್ಟಿ ಗಡ್ಡೆ ರಸ್ತೆಯ ಶ್ರೇಯಾ ನಿಲಯಂ ನಿವಾಸಿ ಕೆ.ಪ್ರವೀಣ್ (44) ಎಂದು ಗುರುತಿಸಲಾಗಿದೆ. ರಾತ್ರಿ ಮಲಗಿದ್ದ ಪ್ರವೀಣ್ ಬುಧವಾರ ಬೆಳಿಗ್ಗೆ ಮನೆಯ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಅವಿವಾಹಿತರಾಗಿರುವ ಪ್ರವೀಣ್ ಈ ಹಿಂದೆ ಹೋಟೆಲ್ ಉದ್ಯೋಗಿಯಾಗಿದ್ದರು. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಇವರು ದಿವಂಗತ ಸಂಜೀವ ಶೆಟ್ಟಿ ಮತ್ತು ಪಾರ್ವತಿ ದಂಪತಿಯ ಪುತ್ರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.