ಚೆನ್ನೈ (ವಿಶ್ವ ಕನ್ನಡಿಗ ನ್ಯೂಸ್) : ಶಾಲೆಯಿಂದ ಪ್ರವಾಸಕ್ಕೆ ತೆರಳಿದ್ದ ಗುಂಪಿನ ನಾಲ್ವರು ವಿದ್ಯಾರ್ಥಿನಿಯರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಕರೂರ್ ಜಿಲ್ಲೆಯ ಮಾಯನೂರಿನಲ್ಲಿ ಈ ಘಟನೆ ನಡೆದಿದೆ. ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಮೃತ ವಿದ್ಯಾರ್ಥಿನಿಯರು ತಮಿಳರಸಿ, ಸೋಫಿಯಾ, ಇನಿಯಾ ಮತ್ತು ಲಾವಣ್ಯ ಎಂದು ಗುರುತಿಸಲಾಗಿದೆ.
ಮೃತರು ಪುದುಕೊಟ್ಟೈ ಜಿಲ್ಲೆಯ ವಿರಾಲಿಮಲೈ ಸರ್ಕಾರೀ ಮಾಧ್ಯಮ ಶಾಲಾ ವಿದ್ಯಾರ್ಥಿಗಳು. ಇಬ್ಬರು ಏಳನೇ ತರಗತಿಯಲ್ಲಿ, ಒಬ್ಬರು ಆರನೇ ಮತ್ತು ಇನ್ನೊಬ್ಬರು ಎಂಟನೇ ತರಗತಿಯಲ್ಲಿ ಓದುತ್ತಿದ್ದರು. ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಿರುಚ್ಚಿಯಲ್ಲಿ ನಡೆಯುತ್ತಿರುವ ಫುಟ್ಬಾಲ್ ಪಂದ್ಯಗಳಲ್ಲಿ ಭಾಗವಹಿಸಲು ತೆರಳಿದ್ದರು. ಪಂದ್ಯ ಮುಗಿಸಿ ಹಿಂತಿರುಗುವಾಗ ಮಾಯನೂರಿನಲ್ಲಿ ಕಾವೇರಿ ದಡದಲ್ಲಿ ಬಂದಿಳಿದರು.
ನದಿಗೆ ಪ್ರವೇಶಿಸಿದ ವಿಧ್ಯಾರ್ಥಿನಿಯೋರ್ವಳು ಮೊದಲು ಮುಳುಗಿದರು. ಈ ವಿದ್ಯಾರ್ಥಿನಿಯನ್ನು ರಕ್ಷಿಸಲು ಬಂದ ಇತರ ಮೂವರು ವಿಧ್ಯಾರ್ಥಿನಿಗಳು ಕೂಡ ನೀರಿನಲ್ಲಿ ಮುಳುಗಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಿ ಮೃತದೇಹಗಳು ಪತ್ತೆಯಾಗಿವೆ. ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.