ಕಾಸರಗೋಡು (ವಿಶ್ವ ಕನ್ನಡಿಗ ನ್ಯೂಸ್) : ತಳಂಗರ ಕೆ.ಎಸ್.ಅಬ್ದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕೆ.ಎಸ್.ಅರ್ಷದ್ ಎಂಬವರು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ರಾತ್ರಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅರ್ಷದ್ ತನ್ನ 44 ನೇ ಹುಟ್ಟುಹಬ್ಬದಂದು ನಿಧನರಾದರು.
ಕಾಸರಗೋಡಿನ ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆ.ಎಸ್.ಅರ್ಷದ್ ಅವರ ಅನಿರೀಕ್ಷಿತ ನಿಧನವು ಪ್ರದೇಶದಲ್ಲಿ ಆಘಾತವನ್ನುಂಟು ಮಾಡಿದೆ. ಇವರು ಮುಸ್ಲಿಮ್ ಲೀಗ್ ಕಾಸರಗೋಡು ಮಾಜಿ ಜಿಲ್ಲಾಧ್ಯಕ್ಷ ಹಾಗೂ ಕೈಗಾರಿಕೋದ್ಯಮಿ ಕೆ.ಎಸ್.ಅಬ್ದುಲ್ಲಾ ಮತ್ತು ಬೀಫಾತ್ವಿಮಾ ದಂಪತಿಯ ಪುತ್ರ.
ಪತ್ನಿ: ಸುರೈಯಾ. ಮಕ್ಕಳು: ಮುಹಮ್ಮದ್, ಅಬ್ದುಲ್ ಖಾದರ್ ಮತ್ತು ವಹೀದ್. ಒಡಹುಟ್ಟಿದವರು: ಕೆ.ಎಸ್.ಹಬೀಬ್ (ಅಧ್ಯಕ್ಷರು, ಮಲಿಕ್ ದಿನಾರ್ ಕಾಲೇಜ್ ಆಫ್ ಫಾರ್ಮಸಿ), ಕೆ.ಎಸ್.ಅನ್ವರ್ ಸಾದತ್ (ಅಧ್ಯಕ್ಷರು, ಮಲಿಕ್ ದಿನಾರ್ ಆಸ್ಪತ್ರೆ), ಹನೀಫ್, ಆಯಿಷಾ, ಮರಿಯಮ್, ಹಜಾರಾ, ಮಿಸ್ರಿಯಾ ಮತ್ತು ಖೈರುನ್ನೀಸಾ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.