ಬೆಂಗಳೂರು (www.vknews.in) ; ಭಾರತ – ಫೆಬ್ರವರಿ 23, 2023- ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಚಲನಚಿತ್ರ, ಟಿವಿ ಶೋ ಮತ್ತು ತಾರೆಯ ಅಧಿಕೃತ ಮಾಹಿತಿ ಮೂಲವಾದ ಐಎಂಡಿಬಿ (http://www.imdb.com), ಇಂದು ಜನಪ್ರಿಯ ಭಾರತೀಯ ತಾರೆಯರ ಫೀಚರ್ ಅನ್ನು ಘೋಷಿಸಿದ್ದು, ಭಾರತದ ಚಲನಚಿತ್ರ ಹಾಗೂ ವೆಬ್ಸೀರೀಸ್ ಚಿತ್ರ ನಿರ್ಮಾಪಕರು ಹಾಗೂ ತಾರೆಯರ ಟ್ರೆಂಡ್ ಅನ್ನು ಅನುಸರಿಸುವ ಹೊಸ ಮಾರ್ಗವಾಗಿ ಪರಿಚಯಿಸಲಾಗುತ್ತಿದೆ.
ಜನಪ್ರಿಯ ಭಾರತೀಯ ತಾರೆಯರ ಫೀಚರ್, ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿರುವ ಐಎಂಡಿಬಿ ಮೊಬೈಲ್ ಅಪ್ಲಿಕೇಷನ್ನಲ್ಲಿ ಮಾತ್ರ ದೊರೆಯುತ್ತಿದೆ. ಜಾಗತಿಕವಾಗಿ ಐಎಂಡಿಬಿ ತಾಣಕ್ಕೆ ಪ್ರತಿ ತಿಂಗಳು ಲಭ್ಯವಾಗುತ್ತಿರುವ 200 ಮಿಲಿಯನ್ ಭೇಟಿಗಳನ್ನು ಆಧರಿಸಿ, ಈ ಫೀಚರ್ ರೂಪಿಸಲಾಗಿದೆ. ಪ್ರತಿ ವಾರ ಅಭಿಮಾನಿಗಳು ಮನರಂಜನಾ ವಿಭಾಗದಲ್ಲಿ ಯಾರು ಟ್ರೆಂಡ್ನಲ್ಲಿದ್ದಾರೆ ಎಂಬುದನ್ನು ತಿಳಿಯಬಹುದು, ಹಾಗೇ ತಮ್ಮ ನೆಚ್ಚಿನ ತಾರೆಯರನ್ನು ಫಾಲೋ ಮಾಡಬಹುದು. ಜೊತೆಗೆ ಹೊಸ ಪ್ರತಿಭೆಗಳನ್ನು ಗುರುತಿಸಬಹುದು.
“ಪ್ರತಿಭಾವಂತರು ಹಾಗೂ ಚಿತ್ರ ನಿರ್ಮಾಪಕರು ಭಾರತದಲ್ಲಿ ದೇಶ ಭಾಷೆಗಳ ಗಡಿಯನ್ನು ಮೀರಿ ಅಭಿಮಾನಿಗಳ ಪ್ರೀತಿಯನ್ನು ಪಡೆಯುತ್ತಾರೆ, ಆನಂದಿಸುತ್ತಾರೆ. ಐಎಂಡಿಬಿ, ಈ ಆಸಕ್ತಿಯನ್ನು ಜಾಗತಿಕ ವೀಕ್ಷಕರಿಗೆ ನೀಡುವುದಕ್ಕೆ ಪ್ರಯತ್ನಿಸುತ್ತಿದೆ” ಎಂದು ಐಎಂಡಿಬಿಯ ಭಾರತದ ಮುಖ್ಯಸ್ಥರಾದ ಯಾಮಿನಿ ಪಟೋಡಿಯಾ ಹೇಳುತ್ತಾರೆ. “ ಜನಪ್ರಿಯ ಭಾರತೀಯರ ತಾರೆಯರ ಫೀಚರ್ ಐಎಂಡಿಬಿ ಬಳಕೆದಾರರ ತೀವ್ರ ಆಸಕ್ತಿಯನ್ನು ಸಂಭ್ರಮಿಸುತ್ತಿದೆ. ತಾರೆಯರ ವೃತ್ತಿಯ ಮಹತ್ವದ ಕ್ಷಣವನ್ನು ಎತ್ತಿಹಿಡಿಯುತ್ತದೆ ಮತ್ತು ಹೊಸ ಬಿಡುಗಡೆ, ಸುದ್ದಿಯೋಗ್ಯ ಕಾರ್ಯಕ್ರಮಗಳನ್ನು ಒಳಗೊಂಡಂತೆ ಮನರಂಜನೆಯ ಟ್ರೆಂಡ್ಗಳನ್ನು ಸೆರೆಹಿಡಿಯುತ್ತದೆ” ಎಂದು ವಿವರಿಸಿದರು.
ಫೆಬ್ರವರಿ 20ರ ವಾರದಲ್ಲಿ, ಜನಪ್ರಿಯ ಭಾರತೀಯ ತಾರೆಯರ ಫೀಚರ್ನಲ್ಲಿ ಟಾಪ್ 20 ಹೆಸರುಗಳು ಹೀಗಿವೆ
1. ರಾಶಿ ಖನ್ನಾ 2. ಶಾರುಖ್ಖಾನ್ 3. ವಿಜಯ್ ಸೇತುಪತಿ 4. ರೆಜಿನಾ ಕ್ಯಾಸೆಂಡ್ರಾ 5. ಆದಿತ್ಯ ಛೋಪ್ರಾ 6. ದೀಪಿಕಾ ಪಡುಕೋಣೆ 7. ಕಾದರ್ ಖಾನ್ 8. ಭುವನ್ ಅರೋರಾ 9. ಅನುಪಮ್ ಖೇರ್ 10. ಕೈರಾ ಅಡ್ವಾನಿ 11. ಅಯೆಷಾ ಕಂಗಾ 12. ಐಶ್ವರ್ಯ ರೈ ಬಚ್ಚನ್ 13. ಶಹೀದ್ ಕಪೂರ್ 14. ಕುಬ್ರಾ ಸೇಟ್ 15. ರಾಮ್ ಚರಣ್ ತೇಜಾ 16. ಅಂಜಲಿ ಶಿವರಾಮನ್ 17. ಸಲ್ಮಾನ್ ಖಾನ್ 18. ಯಶ್ ಛೋಪ್ರಾ 19. ಕೃಷ್ಣಾ ಡಿಕೆ 20. ನೋರಾ ಫತೇಹಿ
ಭಾರತದ ಮನರಂಜನಾ ಕ್ಷೇತ್ರದಲ್ಲಿ ಜಾಗತಿಕ ಟ್ರೆಂಡ್ ಪ್ರತಿಫಲಿಸುವ ಜನಪ್ರಿಯ ಭಾರತೀಯ ತಾರೆಯರ ಫೀಚರ್ • ಈ ವಾರದ ಜನಪ್ರಿಯ ಭಾರತೀಯ ತಾರೆಯರ ಫೀಚರ್ನಲ್ಲಿ ಫರ್ಜಿ (ಪ್ರೈಮ್ ವಿಡಿಯೋ), ದಿ ರೋಮ್ಯಾಂಟಿಕ್ಸ್, ಕ್ಲಾಸ್ (ನೆಟ್ಫ್ಲಿಕ್ಸ್) ಮತ್ತು ಪಠಾಣ್ (ಈಗ ಚಿತ್ರಮಂದಿರಗಳಲ್ಲಿದೆ) ಸಿನಿಮಾ, ಸರಣಿಗಳಲ್ಲಿ ಗಮನ ಸೆಳೆದ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲಿದೆ. • ಪ್ರೈಮ್ ವಿಡಿಯೋದ ಒರಿಜಿನಲ್ ಸರಣಿ, ಫರ್ಜಿಯ ಆರು ಪಾತ್ರಗಳು ಈ ಬಾರಿ ಟಾಪ್ 20 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಶಿ ಖನ್ನಾ 1ನೆಯ ಸ್ಥಾನದಲ್ಲಿದ್ದರೆ, ಇದೇ ಸರಣಿಯಲ್ಲಿ ನಟಿಸಿದ ತಾರೆಯರಾದ ವಿಜಯ್ ಸೇತುಪತಿ, ಶಹೀದ್ ಕಪೂರ್, ರೆಜಿನಾ ಕ್ಯಾಸೆಂಡ್ರಾ, ಭುವನ್ ಅರೊರಾ, ಕುಬ್ರಾ ಸೇಟ್ ಕೂಡ ಇದ್ದಾರೆ. ಸರಣಿಯ ಸಹ ರಚನಕಾರ ಕೃಷ್ಣ ಡಿ ಕೆ ಕೂಡ ಈ ವಾರದ ಪಟ್ಟಿಯಲ್ಲಿದ್ದಾರೆ. • ಯಶ್ ರಾಜ್ ಚಿತ್ರ ಸಂಸ್ಥೆಯ ಆದಿತ್ಯ ಛೋಪ್ರಾ ಅಪರೂಪದ ಸಂದರ್ಶನವಿರುವ ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರ ಸರಣಿ ದಿ ರೋಮ್ಯಾಂಟಿಕ್ಸ್ ಈ ಬಾರಿ 5ನೆಯ ಸ್ಥಾನದಲ್ಲಿದೆ. • ಬಾಕ್ಸ್ಆಫೀಸ್ನಲ್ಲಿ ದಾಖಲೆ ನಿರ್ಮಿಸಿದ ಪಠಾಣ್ ಚಿತ್ರದ ತಾರೆಯರಾದ ಶಾರುಖ್ ಖಾನ್ (ನಂ. 2) ಮತ್ತು ದೀಪಿಕಾ ಪಡುಕೋಣೆ (ನಂ 6) ಚಿತ್ರ ಬಿಡುಗಡೆಯಾದ ಒಂದು ತಿಂಗಳ ಬಳಿಕವೂ ಈ ಟಾಪ್ ಪಟ್ಟಿಯಲ್ಲಿದ್ದಾರೆ. • ನಟ ಕಾದರ್ ಖಾನ್, ಇತ್ತೀಚೆಗೆ ಆನ್ಲೈನ್ ಸಂದರ್ಶನದಿಂದಾಗಿ, ಇತ್ತೀಚೆಗೆ ಟ್ರೆಂಡ್ನಲ್ಲಿದ್ದರು, ಐಎಂಡಿಬಿ ಬಳಕೆದಾರರು ಖಾನ್ ಅವರು, ನಟ, ಬರಹಗಾರ ಹಾಗೂ ನಿರ್ಮಾಪಕರಾಗಿ ಕಳೆದ ಸುದೀರ್ಘ ವೃತ್ತಿ ಜೀವನದ ಮಾಹಿತಿಯನ್ನು ಪಡೆದುಕೊಂಡರು. • ಕೈರಾ ಅದ್ವಾನಿ ಮತ್ತು ಸಿದ್ಧಾರ್ಥ ಮಲ್ಹೋತ್ರ ಅವರ ಮದುವೆಯ ಬಗ್ಗೆ ಅಭಿಮಾನಿಗಳು ತೋರಿದ ಆಸಕ್ತಿಯಿಂದಾಗಿ ಟಾಪ್ ಪಟ್ಟಿಯಲ್ಲಿ 10ನೇ ಸ್ಥಾನ ಲಭಿಸಿತ್ತು. • ನೆಟ್ ಫ್ಲಿಕ್ಸ್ ಒರಿಜಿನಲ್ ಸರಣಿ, ಕ್ಲಾಸ್ನ ನಟಿಯರಾದ ಅಯೆಷಾ ಕಂಗಾ ಮತ್ತು ಅಂಜಲಿ ಶಿವರಾಮನ್ ಕೂಡ ಈ ವಾರದ ಪಟ್ಟಿಯಲ್ಲಿದ್ದಾರೆ.
ಐಎಂಡಿಬಿ ಜನಪ್ರಿಯ ಭಾರತೀಯ ತಾರೆಯರ ವೈಶಿಷ್ಟ್ಯವನ್ನು ಪ್ರತಿ ಸೋಮವಾರ ನವೀಕರಿಸಲಾಗುತ್ತದೆ ಮತ್ತು ಐಎಂಡಿಬಿಗೆ ವಿಶ್ವಾದ್ಯಂತ 200 ಮಿಲಿಯನ್ಗಿಂತಲೂ ಹೆಚ್ಚು ಮಾಸಿಕ ಸಂದರ್ಶಕರ ಭೇಟಿಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದ ಬಳಕೆದಾರರಿಗೆ ಈ ವೈಶಿಷ್ಟ್ಯವು ಐಎಂಡಿಬಿ ಅಪ್ಲಿಕೇಶನ್ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ. ಭಾರತೀಯ ತಾರೆಗಳ ಜೊತೆಗೆ, ಬಳಕೆದಾರರು ಜನಪ್ರಿಯ ಭಾರತೀಯ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಟ್ರೇಲರ್ಗಳನ್ನು ಸಹ ನೋಡಬಹುದು. ಐಎಂಡಿಬಿ ಅಪ್ಲಿಕೇಶನ್ ಗ್ರಾಹಕರಿಗೆ ಏನನ್ನು ವೀಕ್ಷಿಸಬೇಕು ಎಂಬುದನ್ನು ಹುಡುಕಲು ನೆರವಾಗುತ್ತದೆ ಮತ್ತು ಅವರ ವೀಕ್ಷಣಾ ಪಟ್ಟಿಗೆ ಶೀರ್ಷಿಕೆಗಳನ್ನು ಸೇರಿಸುತ್ತದೆ ಮತ್ತು ಅವರು ನೋಡಿದ್ದನ್ನು ರೇಟ್ ಮಾಡಲು ಮತ್ತು ಪರಿಶೀಲಿಸಲು ಸಹಾಯ ಮಾಡುತ್ತದೆ. ಆಂಡ್ರಾಯ್ಡ್ ಪೋನ್ಗಳಿಗೆ ಐಎಂಡಿಬಿ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಿಂದ ಮತ್ತು ಐಫೋನ್ ಗಳಿಗೆ ಆಪಲ್ ಆಪ್ ಸ್ಟೋರ್ ನಲ್ಲಿ ಉಚಿತವಾಗಿ ಲಭ್ಯವಿದೆ.
ಭಾರತೀಯ ಚಲನಚಿತ್ರಗಳು, ವೆಬ್ ಸರಣಿಗಳು, ಪ್ರತಿಭೆಗಳು ಮತ್ತು ಚಲನಚಿತ್ರ ನಿರ್ಮಾಪಕರನ್ನು ಒಳಗೊಂಡ ಎಲ್ಲಾ ಇತ್ತೀಚಿನ ವಿಷಯಗಳಿಗಾಗಿ ಮನರಂಜನಾ ಅಭಿಮಾನಿಗಳು ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ನಲ್ಲಿ ಐಎಂಡಿಬಿ ಅನ್ನು ಫಾಲೋ ಮಾಡಬಹುದು. ಫಾಲೋ ಮಾಡುವ ಅಭಿಮಾನಿಗಳು ತಮ್ಮ ನೆಚ್ಚಿನ ಭಾರತೀಯ ಸೆಲೆಬ್ರಿಟಿಗಳು ಮತ್ತು ಶೀರ್ಷಿಕೆಗಳ ಬಗ್ಗೆ ತಮ್ಮ ನೆಚ್ಚಿನ ಸಂಗತಿಗಳನ್ನು ಹಂಚಿಕೊಳ್ಳಬಹುದು. ಇತ್ತೀಚಿನ ಟ್ರೇಲರ್ಗಳು ಮತ್ತು ವಿಶೇಷ ಐಎಂಡಿಬಿ ವಿಷಯವನ್ನು ಹುಡುಕಬಹುದು ಮತ್ತು ಭಾರತ ಮತ್ತು ಪ್ರಪಂಚದಾದ್ಯಂತದ ಹೊಸ ವಿಷಯವನ್ನು ಅನ್ವೇಷಿಸಬಹುದು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.