ತ್ರಿಕ್ಕರಿಪುರ (ವಿಶ್ವ ಕನ್ನಡಿಗ ನ್ಯೂಸ್) : ಬಟ್ಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ತ್ರಿಕ್ಕರಿಪುರದಲ್ಲಿ ನಡೆದಿದೆ. ಮೃತರನ್ನು ತೃಕ್ಕರಿಪುರದ ವೆಲ್ಲಪ್ಪು ನಿವಾಸಿ ಅಬ್ದುರ್ರಹ್ಮಾನ್ ಹಾಜಿ ಮತ್ತು ಹೈರುನ್ನೀಸಾ ದಂಪತಿಯ ಪುತ್ರಿ ಎಂ.ಸಫ್ರಿಯಾ (36) ಎಂದು ಗುರುತಿಸಲಾಗಿದೆ.
ಫೆಬ್ರವರಿ 22 ರಂದು ಮಹಿಳೆಯ ಬಟ್ಟೆಗಳು ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿದ್ದವು. ದೇಹದಾದ್ಯಂತ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಹಿಳೆ ಕೋಝಿಕೋಡ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಬುಧವಾರ ನಿಧನರಾದರು. ಚಂದೇರಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಒಡಹುಟ್ಟಿದವರು: ಶರೀಫ್, ಖಮರುದ್ದೀನ್, ರಹಮತ್ ಮತ್ತು ಸಮದ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.