ಕೇರಳ (ವಿಶ್ವ ಕನ್ನಡಿಗ ನ್ಯೂಸ್) : ನದಿಯಲ್ಲಿ ಸ್ನಾನ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುಹಮ್ಮದ್ ಮತ್ತು ಆಬಿದಾ ದಂಪತಿಯ ಪುತ್ರ ಮುಹಮ್ಮದ್ ಖಲೀಲ್ (16) ಮೃತಪಟ್ಟ ಯುವಕ. ಈತ ಚೆಂಗಮನಾಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಥಮ ಪಿಯು ವಿದ್ಯಾರ್ಥಿ.
ಭಾನುವಾರ ಸಂಜೆ ಮನೆಯ ಸಮೀಪದ ನದಿಯಲ್ಲಿ ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಎಂದಿನಂತೆ ಮನೆಯ ಸಮೀಪದ ಪೆರಿಯಾರ್ ನ ಉಪನದಿ ಕಂದಕತ್ ಕ್ವೇಯಲ್ಲಿ ಸ್ನಾನ ಮಾಡುತ್ತಿದ್ದಾಗ ಕುಳಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ನೇಹಿತರು ಆತನನ್ನು ರಕ್ಷಿಸಲು ಯತ್ನಿಸಿದರೂ ವಿಫಲರಾದರು. ನಂತರ ಸ್ಥಳೀಯರು ನಡೆಸಿದ ಹುಡುಕಾಟದಲ್ಲಿ ಆತನ ದೇಹ ಸಿಕ್ಕಿದ ಕೂಡಲೇ ಚಾಲಕಕಲ್ ಶ್ರೀ ನಾರಾಯಣ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ರಕ್ಷಿಸಲಾಗಲಿಲ್ಲ. ಪಾಲಪ್ರಸೇರಿ ಜುಮಾ ಮಸೀದಿ ಕಬರಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.