ನವದೆಹಲಿ (www.vknews.in) : ಇಂಡಿಗೋ ಮಂಗಳೂರಿನಿಂದ ಅಬುಧಾಬಿಗೆ ನೇರ ವಿಮಾನ ಸೇವೆಯನ್ನು ಘೋಷಿಸಿದೆ. ಅಲ್ಲದೇ ತಮಿಳುನಾಡಿನ ಕೊಯಮತ್ತೂರು ಮತ್ತು ತಿರುಚಿರಾಪಳ್ಳಿಯಂತಹ ಜನಪ್ರಿಯ ಪ್ರವಾಸಿ ತಾಣಗಳಿಂದಲೂ ಅಬುಧಾಬಿಗೆ ತಮ್ಮ ಸೇವೆಯನ್ನು ಘೋಷಿಸಿದೆ.
ಅಬುಧಾಬಿ-ಮಂಗಳೂರು ಮಾರ್ಗದ ವಿಮಾನಗಳು ಆಗಸ್ಟ್ 9 ರಿಂದ ಪ್ರತಿದಿನ ಮತ್ತು ತಿರುಚಿರಾಪಳ್ಳಿ-ಅಬುಧಾಬಿ ಮಾರ್ಗದಲ್ಲಿ ಆಗಸ್ಟ್ 11 ರಿಂದ ವಾರಕ್ಕೆ ನಾಲ್ಕು ಬಾರಿ ಕಾರ್ಯನಿರ್ವಹಿಸಲಿವೆ. ಕೊಯಮತ್ತೂರಿನಿಂದ ನೇರ ವಿಮಾನಗಳು ಆಗಸ್ಟ್ 10 ರಿಂದ ವಾರಕ್ಕೆ ಮೂರು ಬಾರಿ ಕಾರ್ಯನಿರ್ವಹಿಸಲಿವೆ ಎಂದು ಕಂಪನಿ ತಿಳಿಸಿದೆ.
ಆಗಸ್ಟ್ 1 ರಿಂದ ಬೆಂಗಳೂರು ಮತ್ತು ಅಬುಧಾಬಿ ನಡುವೆ ವಾರಕ್ಕೆ ಆರು ಬಾರಿ ಕಾರ್ಯನಿರ್ವಹಿಸುವ ಹೊಸ ವಿಮಾನಗಳನ್ನು ಕಂಪನಿಯು ಇತ್ತೀಚೆಗೆ ಘೋಷಿಸಿದೆ. ಈ ಹೊಸ ಮಾರ್ಗಗಳು ಇಂಡಿಗೋದ ಅಂತರಾಷ್ಟ್ರೀಯ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ. ಪ್ರಯಾಣಿಕರು ಕಂಪನಿಯ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ಗಳನ್ನು ಬುಕ್ ಮಾಡಬಹುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.