ಜೆದ್ದಾ(www.vknews.in): ರಿಯಾದ್ ಪ್ರಾಂತ್ಯದ ವಾದಿ ಅಲ್ ದವಾಸಿರ್ ಎಂಬಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದ 40 ವರ್ಷದ ಸೌದಿ ವ್ಯಕ್ತಿಯೊಬ್ಬ ಸುಜೂದ್ (ಸಬೂಬು) ಪ್ರಾರ್ಥನಾ ಸ್ಥಾನದಲ್ಲಿದ್ದಾಗ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗುರುವಾರ ನಾಪತ್ತೆಯಾಗಿದ್ದ ಧುವೈಹಿ ಹಮೌದ್ ಅಲ್ ಅಜಲೀನ್ ಅವರ ಶವ ಮೂರು ದಿನಗಳ ತೀವ್ರ ಶೋಧದ ನಂತರ ಭಾನುವಾರ ಬೆಳಿಗ್ಗೆ ಮರುಭೂಮಿಯಲ್ಲಿ ಮರಳು ದಿಬ್ಬಗಳ ಮಧ್ಯದಲ್ಲಿ ಪತ್ತೆಯಾಗಿದೆ.
ನಾಪತ್ತೆಯಾದ ವ್ಯಕ್ತಿಯೊಂದಿಗೆ ಸಂಪರ್ಕ ಕಳೆದುಕೊಂಡ ನಂತರ ಆತನ ಕುಟುಂಬವು ವಾದಿ ಅಲ್ ದವಾಸಿರ್ ಪೊಲೀಸರಿಗೆ ಕಾಣೆಯಾದ ವ್ಯಕ್ತಿಯ ಕುರಿತು ದೂರು ಸಲ್ಲಿಸಿತ್ತು. ಪಿಕಪ್ ಟ್ರಕ್ ಅನ್ನು ಓಡಿಸುತ್ತಿದ್ದ ಅಲ್ ಅಜಲೀನ್ರನ್ನು ಹುಡುಕಲು ರಕ್ಷಣಾ ತಂಡಗಳು ವ್ಯಾಪಕವಾದ ಶೋಧವನ್ನು ಪ್ರಾರಂಭಿಸಿದವು.
العثور على #مفقود_وادي_الدواسر متوفياً وهو ساجد لله تعالى..pic.twitter.com/FClNDNk6xz — هاشتاق العرب (@TheArabHash) July 20, 2020
العثور على #مفقود_وادي_الدواسر متوفياً وهو ساجد لله تعالى..pic.twitter.com/FClNDNk6xz
— هاشتاق العرب (@TheArabHash) July 20, 2020
ಹುಡುಕಾಟ ತಂಡಗಳು ಅಲ್ ಅಜಲಿನ್ಗಾಗಿ ನಾಲ್ಕು ಚಕ್ರ ಚಾಲನೆಯ ವಾಹನಗಳು ಮತ್ತು ಗ್ಲೈಡರ್ಗಳನ್ನು ಬಳಸಿಕೊಂಡು ಮರುಭೂಮಿಯ ಮರಳು ದಿಬ್ಬಗಳಲ್ಲಿ ಹುಡುಕಾಟವನ್ನು ತೀವ್ರಗೊಳಿಸಿದವು. ಅಜಲೀನ್ ಅವರ ವಾಹನದಿಂದ ಕೆಲವು ಮೀಟರ್ ದೂರದಲ್ಲಿ ಅವರ ಶವ ‘ಸುಜೂದ್’ ನಿರ್ವಹಿಸಿದ ರೀತಿಯಲ್ಲಿ ಪತ್ತೆಯಾಗಿದೆ. ಸುಜೂದ್ನಲ್ಲಿ ನಿಧನರಾದ ಅಲ್ ಅಜಲೀನ್ ಅವರ ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾರ್ಥನೆ ಸುರಿಮಳೆ ಹರಿದು ಬರತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.