ರಮಲ್ಲಾ(ವಿಶ್ವ ಕನ್ನಡಿಗ ನ್ಯೂಸ್): ಯುಎಇ ಇಸ್ರೇಲ್ ನೊಡನೆ ನಡೆಸಿರುವ ಶಾಂತಿ ಒಪ್ಪಂದಕ್ಕೆ ಆಕ್ರೋಶಗೊಂಡಿರುವ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಉಳಿದ ಅರಬ್ ದೇಶಗಳು ಈ ಅನುಕರಣೆ ನಡೆಸದಿರುವಂತೆ ಮನವಿ ಮಾಡಿದ್ದಾರೆ.ರಮಲ್ಲಾ ನಗರದಲ್ಲಿ ನಡೆದ ಸಭೆಯಲ್ಲಿ ತಮ್ಮ ತೀವ್ರ ಅಸಮಾಧಾನವನ್ನು ಹೊರಗೆಡಹಿರುವ ಅಬ್ಬಾಸ್,ಯುಎಇ ಯ ನಡೆ ಫೆಲೆಸ್ತೀನಿ ಜನತೆಗೆ ಬೆನ್ನಿಗೆ ಚಾಕು ಇರಿದಂತೆ ಎಂದು ಬಣ್ಣಿಸಿದ್ದಾರೆ.ಸಭೆಯಲ್ಲಿ ಗಾಝಾದ ಹಮಾಸ್ ಕೂಡ ಭಾಗವಹಿಸಿದ್ದು ಅಚ್ಚರಿ ತಂದಿತ್ತು.ಯುಎಇ ಅಮೇರಿಕಾದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ನೊಡನೆ ನಡೆಸಿರುವ ಶಾಂತಿ ಒಪ್ಪಂದದ ಬಳಿಕ ಅದೇ ಮಾರ್ಗವನ್ನು ಉಳಿದ ಅರಬ್ ದೇಶಗಳೂ ಅನುಸರಿಸಲು ಉತ್ಸುಕವಾಗಿದೆ ಎಂಬ ಮಾಧ್ಯಮ ವರದಿ ಹಾಗು ಫೆಲೆಸ್ತೀನ್ ಅಧ್ಯಕ್ಷರ ಮನವಿಯು ಮಹತ್ವ ಪಡೆದಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.