ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕೊರೋನವೈರಸ್ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಸಿಲುಕಿದ ಅನಿವಾಸಿಗಳನ್ನು ತಾಯ್ನಾಡಿಗೆ ಕರೆತರುವ ವಂದೇ ಮಾತರಂ ಮಿಷನ್ ನ ಭಾಗವಾಗಿ ಇಂದು ಮಂಗಳೂರಿಗೆ ಎರಡನೇ ವಿಮಾನವು, ಶಿಶು ಸೇರಿ 177 ಪ್ರಯಾಣಿಕರನ್ನು ಹೊತ್ತು ಇಂದು ಸಂಜೆ 7:45 ಕ್ಕೆ ಮಂಳೂರಿಗೆ ಬಂದಿಳಿದಿತ್ತು.
ಮೇ.12 ರಂದು ಮೊದಲ ವಿಮಾನವು ಮಂಗಳೂರಿಗೆ ಬಂದಿಳಿದಾಗ ತೊಂದರೆಗಳು ಎದುರಾಗಿ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು, ಆದರೆ ಇಂದು ಸಕಲ ಸಿದ್ಧತೆಗಳೊಂದಿಗೆ ದುಬೈಯಿಂದ ಬಂದ ಕನ್ನಡಿಗರನ್ನು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಪ್ರೊಬೇಷನಲ್ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಾವೇ ಸ್ವತಹಃ ಬೇಟಿಯಾಗಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದಾರೆ.
ಅವರಿಗೆ ಬೇಕಾದ ಊಟದ ವ್ಯವಸ್ಥೆ, ಆರೋಗ್ಯ ತಪಾಸಣಾ ವ್ಯವಸ್ಥೆಗಳು, ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಗಳು ಸಕಲ ಸೌಲಭ್ಯಗಳನ್ನು ಮಾಡಿದ್ದರು. ಪಾವತಿ ಕ್ವಾರಂಟೈನ್ ನಲ್ಲಿರಲು ಸಾಧ್ಯವಾಗದವರಿಗೆ ಉಚಿತ ಕ್ವಾರಂಟೈನ್ ವ್ಯವಸ್ಥೆಯನ್ನೂಸಹ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾಡಳಿತದ ಸೇವೆಗೆ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ವಿಮಾನದಲ್ಲಿ ಒಂದು ಶಿಶು ಸೇರಿ 177 ಪ್ರಯಾಣಿಕರು ಬಂದಿಳಿದಿದ್ದಾರೆ. ಇವರ ಪೈಕಿ 99 ಪುರುಷರು, 67 ಮಹಿಳೆಯರು, 11 ಮಕ್ಕಳಿದ್ದರು.
ಈ ಹಿಂದಿನಂತೆ ಈ ವಿಮಾನದಲ್ಲಿ ಕೂಡಾ ಗರ್ಭಿಣಿಯರು, ತುರ್ತು ಆರೋಗ್ಯ ಸೇವೆ ಬೇಕಾದವರು, ಮಕ್ಕಳು ಹಿರಿಯರು ಸೇರಿದಂತೆ ಸಂಕಷ್ಟಕ್ಕೀಡಾದವರಿಗೆ ಮೊದಲ ಆಧ್ಯತೆ ನೀಡಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.