(ವಿಶ್ವ ಕನ್ನಡಿಗ ನ್ಯೂಸ್) : ಇದರೊಳಗೆ 32 ಉಪಯುಕ್ತ ಶೀರ್ಷಿಕೆಗಳಲ್ಲಿ ಅನೇಕಾನೇಕ ಮಾಹಿತಿಗಳಿವೆ. ಕನ್ನಡದಲ್ಲಿ ಬಹುಶ: ಸರಳವಾಗಿ ಜನರಿಗೆ ಅರ್ಥವಾಗುವ ಆಪ್ತ ಭಾಷೆಯಲ್ಲಿ ಇಷ್ಟು ವಿವರವಾದ ಮಾಹಿತಿಗಳು ಲಭ್ಯವಿರಲಿಲ್ಲ. ಈ ಲೇಖಕರ, 2014 ರಲ್ಲಿ ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿಗಳ ಎಂಬ ಪೂರ್ಣ ಮಾಹಿತಿಯಿರುವ ಗ್ರಂಥವು ಪ್ರಕಟಗೊಂಡಿದ್ದು, ಅದರ ಪರಿಷ್ಕøತ ಹಾಗೂ ವಿಸ್ತøತವಾದ ಮಾಹಿತಿಗಳಿಂದ ಇದು ಪ್ರಕಟಗೊಂಡಿದೆ. ಡಾ|| ಚೂಂತಾರುರವರು ಈ ಗ್ರಂಥದಲ್ಲಿ ಹೆಚ್ಚಿನ ದಂತ ಸಂಬಂಧಿ ರೋಗಗಳನ್ನು ತಡೆಯಲು ಸಾಧ್ಯವಿದೆ ಎಂಬ ಮಾತನ್ನು ಹೆಳಿರುವಂತೆ, ಅತ್ಯಂತ ಕಾಳಜಿ ಹಾಗೂ ಪ್ರಾಮಾಣಿಕತೆಗಳಿಂದ ಇದನ್ನು ರಚಿಸಿದ್ದಾರೆ.
ಇದರಲ್ಲಿ 32 ಲೇಖನಗಳಿವೆ. ದಂತ ವೈದ್ಯಕೀಯ ಪಿತಾಮಹರೆನಿಸಿ 1920ರಲ್ಲಿ ಭಾರತದಲ್ಲಿ ಮೊದಲ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಿದ ಪ್ರಾತ: ಸ್ಮರಣೀಯ ಡಾ|| ಆರ್. ಅಹಮ್ಮದ್ ಅವರ ಸ್ಥೂಲ ಪರಿಚಯದ ಮೊದಲ ಲೇಖನದಿಂದಾರಂಭಿಸಿ, ದಂತ ವೈದ್ಯರ ದಿನ ಮಾರ್ಚ್ 6 ಎಂಬ ಲೇಖನದಲ್ಲಿ ಹಳೆ ಕಾಲದ ದಂತ ಚಿಕಿತ್ಸೆಗಳಿಗೂ ಇಂದಿನ ಸುಸಜ್ಜಿತ, ಅತ್ಯಾಧುನಿಕ ದಂತ ಚಿಕಿತ್ಸಾ ವಿಧಾನಗಳೊಂದಿಗೆ, ಈ ದಂತ ದಿನಾಚರಣೆಯ ಔಚಿತ್ಯ ಹಾಗೂ ಅದು ನೀಡುವ ಸಂದೇಶವನ್ನು ತಿಳಿಸುತ್ತಾರೆ. ಇದರೊಂದಿಗೆ ಅವರು ಅರ್ಥಪೂರ್ಣ ಹಾಗೂ ವೇದನಾತ್ಮಕವಾದ ಅನುಭವಗಳ ಸಾರವನ್ನು ಮಾರ್ಮಿಕವಾಗಿ ಹೇಳುತ್ತಾರೆ. “ವೈದ್ಯರೆಂದರೆ, ಸಾವು ಸಮೀಪಿಸಿದಾಗ ದೇವರಾಗಿಯೂ, ಚಿಕಿತ್ಸೆ ಆರಂಭಿಸುವಾಗ ಆ ದೇವ ಮಾನವರಾಗಿಯೂ, ಚಿಕಿತ್ಸೆ ಫಲಿಸಿದಾಗ ಸಾಮಾನ್ಯ ಮನುಷ್ಯನಾಗಿಯೂ, ಶುಲ್ಕ ಕೇಳಿದಾಗ ಧನದಾಹಿ ಎಂದೂ, ಚಿಕಿತ್ಸೆ ಫಲಿಸದಾಗ ಕೊಲೆಗಡುಕ ಎಂದೂ ಜನರು ವೈದ್ಯರನ್ನು ಹಾಡಿ ಹೊಗಳುತ್ತಾರೆ ಮತ್ತು ತೆಗಳುತ್ತಾರೆ.
ಸಾಮಾನ್ಯವಾಗಿ ಬಾಯಿಯೊಳಗಿನ ರೋಗಗಳು, ಜೊಲ್ಲು ರಸದ ತೊಂದರೆಗಳು, ದಂತಾಘಾತ, ಪೆರಿಕೋರೋನೆÉೈಟಿಸ್ ಎಂಬ ಅಸಾಧ್ಯ ನೋವು, ಹಲ್ಲು ಮೊಳೆಯುವ ಸಮಯ ದಂತಕುಳಿ ಚಿಕಿತ್ಸೆ, ಡಯಾಸ್ಟೆಮಾ, ವಸಡಿನ ರೋಗಗಳು, ಬೇಬಿ ಬಾಟಲ್ ದಂತ ಕ್ಷಯ, ವಕ್ರದಂತ ಚಿಕಿತ್ಸೆ, ಸೀಳ್ದುಟಿ ಬಾಯಲ್ಲಿ ಲೋಹದ ರುಚಿ ಇತ್ಯಾದಿ ಬಾಯಿ-ಹಲ್ಲುಗಳಿಗೆ ವಿವಿಧ ಸಂದರ್ಭಗಳಲ್ಲಿ ಬರುವ ತೊಂದರೆಗಳ ಸ್ಥೂಲ ವಿವರಣೆ, ಕಾರಣಗಳು ಅವುಗಳಿಗೆ ಸೂಕ್ತ ಚಿಕಿತ್ಸಾ ವಿಧಾನಗಳನ್ನು ಅಲ್ಲಲ್ಲಿ ತಿಳಿಸುತ್ತಾ ಹೋಗುತ್ತಾರೆ.
ಅಷ್ಟು ಮಾತ್ರವಲ್ಲ, ದಂತಾಘಾತವಾದಾಗ ಜಾಗೃತೆ ವಹಿಸಬೇಕಾದ ವಿಚಾರ, ದಂತ ಕ್ಷಕಿರಣ ವಿಚಾರ, ಹೊಳೆಯುವ ಹಲ್ಲುಗಳು, ಮೌತ್ ವಾಶ್ನೊಳಗಿನ ಮರ್ಮ, ಮಧುಮೇಹಿಗಳು ಹಾಗೂ ಗರ್ಭಿಣಿಯರಲ್ಲಿ ಕಾಣಿಸುವ ದಂತ ಸಮಸ್ಯೆಗಳು, ಬಾಯಲ್ಲಿ ಉಸಿರಾಟ, ಬೆರಳು ಚೀಪುವುದು, ದಂತ ಚಿಕಿತ್ಸೆಯಲ್ಲಿ ಲೇಸರ್, ದವಡೆ ಮರು ಜೋಡಣೆ, ರೈನೋಪ್ಲಾಸ್ಟಿ, ಸೂಜಿ ರಹಿತ ಇಂಜೆಕ್ಷನ್ ಇತ್ಯಾದಿಯಾಗಿ ಮಾರಕವಾದ ಹಾಗೂ ಸಲಹಾತ್ಮಕವಾದ ವಿಚಾರಗಳನ್ನು ಇಲ್ಲಿ ಹೇಳಿದ್ದಾರೆ. ರೋಗಿಗಳಿಗೆ ಕೆಲವು ಧನಾತ್ಮಕವಾದ ಸಲಹೆಗಳನ್ನು ನೀಡುತ್ತಾರೆ. ಕೆಲವು ಔಷಧಿಗಳು ಅವುಗಳ ಅಡ್ಡ ಪರಿಣಾಮಗಳು, ಇ-ಸಿಗರೇಟಿನ ಒಳ ಹೊರಗುಗಳು, ವಸಡಿನ ರೋಗಗಳು, ಮಕ್ಕಳಲ್ಲಿ ಬೇರುನಾಳ ಚಿಕಿತ್ಸೆಯ ಅಗತ್ಯ, ಟೂತ್ ಪೇಸ್ಟ್ಗಳ ಸುರಕ್ಷಿತತೆ, ಬಾಯೊಳಗಿನ ಬೆಳ್ಳಿಯ ಸುರಕ್ಷಿತತೆ, ಹಾಲು ಹಲ್ಲಿನ ವಿಚಾರ ಹೀಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ಅಧಿಕೃತವಾಗಿ ತಿಳಿಯಹೇಳುತ್ತಾರೆ.
ಒಟ್ಟಿನಲ್ಲಿ ಇದರೊಳಗೆ ಬಾಯೊಳಗಿನ ವಿಶ್ವರೂಪವನ್ನೇ ತೋರಿಸಿ ಸೂಕ್ತ ಸಲಹೆ, ಮುಂಜಾಗ್ರತಾ ವಿಧಾನಗಳು, ಚಿಕಿತ್ಸಾ ಪದ್ಧತಿಗಳೊಂದಿಗೆ ಕೆಲವು ಅಡ್ಡಪರಿಣಾಮಗಳ ವಿಚಾರವನ್ನು ಮರೆಮಾಚದೇ ತಿಳಿಸುತ್ತಾರೆ. ಇದೊಂದು ಅಪರೂಪದ ವಿವರವಾದ, ಅತ್ಯಂತ ಉಪಯುಕ್ತ ಗ್ರಂಥವೆಂಬುದರಲ್ಲಿ ಎರಡು ಮಾತಿಲ್ಲ. ಡಾ|| ಚೂಂತಾರು ಅವರ ಅನುಭವಗಳು ಹಾಗೂ ಶ್ರಮದ ಬರವಣಿಗೆಗಳು ಸಾರ್ಥಕವಾಗಿವೆ.
ಲೇ : ಡಾ|| ಮುರಲೀ ಮೋಹನ್ ಚೂಂತಾರು ಪ್ರ : ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಪ್ರಥಮ ಮುದ್ರಣ: 2020 ಬೆಲೆ : 125/-
-ಹರಿಕೃಷ್ಣ ಭರಣ್ಯ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.