(www.vknews.com) : ಕನ್ನಡ ಚಿತ್ರ ನಟ ಹಾಗೂ ಮಾಜಿ ಬಿಗ್ ಬಾಸ್ ಕನ್ನಡದ ಸ್ಪರ್ಧಿ ಹುಚ್ಚಾ ವೆಂಕಟ್ ಮತ್ತೆ ಕಿರಿಕ್ ಮಾಡಿ ಸುದ್ದಿಯಾಗಿದ್ದಾರೆ.
ಈ ಹಿಂದೆ ಹುಚ್ಚಾ ವೆಂಕಟ್ ಮಂಡ್ಯ ಜಿಲ್ಲೆಯ ಬೀದಿಗಳಲ್ಲಿ ಗದ್ದಲ ಸೃಷ್ಟಿಸಿದ್ದು, ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿಯೂ ಕಿರಿಕ್ ಮಾಡಿ ಅಲ್ಲಿಯ ಆಕ್ರೋಶಗೊಂಡ ಅಲ್ಲಿನ ಸ್ಥಳೀಯರು ಥಳಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ
ಮೂಲಗಳ ಪ್ರಕಾರ, ಹುಚ್ಚಾ ವೆಂಕಟ್ ಶ್ರೀರಂಗಪಟ್ಟಣದ ಬೀದಿಯೊಂದರಲ್ಲಿ ಓಡಾಡುತ್ತಾ , ಜನರ ಬಳಿ ಕಿರಿಕ್ ಮಾಡಿ,ಅಲ್ಲಿಯೇ ಇದ್ದ ಅಂಗಡಿಯ ಬಳಿ ಜ್ಯೂಸ್ ಕುಡಿದು ಹಣ ಪಾವತಿಸಲು ನಿರಾಕರಿಸಿ ಹಲ್ಲೆ ಗೆ ಮುಂದಾಗಿದ್ದು , ಹುಚ್ಚಾ ವೆಂಕಟ್ ವರ್ತನೆಯಿಂದ ಆಕ್ರೋಶಗೊಂಡ ಸ್ಥಳೀಯರು ಹುಚ್ಚಾ ವೆಂಕಟ್ ಅವರನ್ನು ಥಳಿಸಿದ್ದಾರೆ ಎನ್ನಲಾಗಿದೆ.