ಯು ಕೆ ಅಝೀಝ್ ದಾರಿಮಿ.
(www.vknews.com) : ಚೀನಾ ನಮ್ಮ ಗಡಿ ದಾಟಿ ಒಳನುಗ್ಗುವ ದ್ರೋಹದ ಆಟಕ್ಕೆ ನಿಂತಿದೆ. ನಾವು ಹತ್ತಿಪ್ಪತ್ತು ಜವಾನರನ್ನು ಕಳಕೊಂಡೆವು.ಆದರೆ ನಮ್ಮ ಸರಕಾರವಾಗಲಿ ಮೀಡಿಯಾ ಆಗಲಿ ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ.ಪಾಕ್ ಮೇಲೆ ತೋರುವ ಆರ್ಭಟ ಆಗಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾಗಲಿ ಚರ್ಚೇಯೇ ಆಗುತ್ತಿಲ್ಲ.ನಿಜವಾಗಿಯೂ ಈ ಸಮಯ ಗಂಡೆದೆ ತೋರಿ ಭಾರತ ಏನೆಂದು ತೋರಿಕೊಡಬೇಕಿತ್ತು.
ವಿಪರ್ಯಾಸವೆಂದರೆ ಜನ ತಮ್ಮ ಮನೆಯಲ್ಲಿ ಉಪಯೋಗಿಸುತ್ತಿದ್ದ ಟಿ. ವಿ.ಇನ್ನಿತರ ವಸ್ತುಗಳನ್ನು ಎತ್ತಿ ಬಿಸಾಕಿ ಹುಡಿ ಮಾಡಿ ಚೀನಾ ವಿರುದ್ಧ ಆಕ್ರೋಶ ವನ್ನು ವ್ಯಕ್ತಪಡಿಸಿದರು.
ಸರಿ ಒಂದು ನಿಮಿಷ ಯೋಚಿಸಿ, ಚೀನಾ ನಿರ್ಮಿತ ಹಳೆಯ ವಸ್ತುಗಳನ್ನು ಹಾಳುಗೆಡವಿದರೆ ಚೀನಾಕ್ಕೆ ಲಾಭವೇ ಹೊರತು ನಷ್ಟ ವಲ್ಲ.ಕಾರಣ ಇಂದಲ್ಲ ನಾಳೆ ಚೀನಾ ತಯಾರಿಸಿದ ಟಿ.ವಿ ಯನ್ನೇ ಆತ ಮನೆಗೆ ತರುತ್ತಾನೆ.ಕಾರಣ ಚೀನಾ ವಸ್ತು ವಿನಂತೆ ಕಡಿಮೆ ಬೆಲೆಯ ಮತ್ತು ಕ್ವಾಲಿಟಿ ಇರುವ ಟಿ.ವಿ ಬೇರೆ ಇಲ್ಲ.ಆದ್ದರಿಂದ ಬಾಯ್ಕಾಟ್ ಚೀನಾ ಅನ್ನುವುದು ಬರೀ ಮೂರ್ಖತನ ಮತ್ತು ಅಸಮರ್ಪಕ ನಿಲುವಾಗಿರುತ್ತದೆ.
ವರ್ಲ್ಡ್ ಟ್ರೇಡಿಂಗ್ ನಿಯಮ ಪ್ರಕಾರ ಒಂದು ದೇಶದ ಉತ್ಪನ್ನ ವನ್ನು ಬಹಿಷ್ಕರಿಸಲು ಸಾಧ್ಯವಿಲ್ಲ.ಆದರೆ ಅದರೊಂದಿಗೆ ಪೈಪೋಟಿ ನಿಡುವ ಅದಕ್ಕಿಂತಲೂ ಉತ್ತಮ ಗುಣಮಟ್ಟದ ವಸ್ತುಗಳ ಉತ್ಪಾದನೆಯನ್ನು ಭಾರತ ಮಾಡಬೇಕು. ಆಗ ಮಾತ್ರ ಈ ಬಾಯ್ಕಾಟ್ ಗೆ ಅರ್ಥ ಬರುತ್ತದೆ.ಇಲ್ಲವಾದರೆ ಅದೊಂದು ಉದ್ವೇಗದ ಅಮಲಿನಲ್ಲಿ ಮಾಡುವ ಹುಚ್ಚುತನ ಮಾತ್ರವಾಗುತ್ತದೆ.
ಅಝೀಝ್ ದಾರಿಮಿ ಚೊಕ್ಕಬೆಟ್ಟು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.